ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು, ಜು. ೯: ವಿಶ್ವದ ಕಾಫಿ ಬೆಳೆಯುವ ಅಗ್ರಗಣ್ಯ ರಾಷ್ಟçಗಳಾದ ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಜಾರಿಯಲ್ಲಿರುವ ಮಾದರಿಯನ್ನು ಭಾರತದಲ್ಲಿಯೂ ಅಳವಡಿಸಿಕೊಂಡು ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬAಧಿಸಿದAತೆ ಪಾಲುದಾರರನ್ನು (Sಣಚಿಞe hoಟಜeಡಿs) ಒಗ್ಗೂಡಿಸುವ ವಿನೂತನ ಪ್ರಯತ್ನಕ್ಕೆ ಕಾಫಿ ಮಂಡಳಿಯು ಕೈ ಹಾಕಿದೆ. ಕಾಫಿ ಬೆಳೆಗಾರರರು, ಸಂಸ್ಕರಣೆದಾರರು, ಸಂಗ್ರಹಕಾರರು, ಮಾರಾಟಗಾರರು, ರೋಸ್ಟರ್ಸ್, ರಫ್ತುದಾರರು, ಕೆಫೆ ಚೈನ್ಗಳ ಮಾಲೀಕರನ್ನು ಒಟ್ಟುಗೂಡಿಸಿ ಹೊರ ದೇಶಗಳ ಮಾದರಿಯಲ್ಲಿ ಸ್ಥಳೀಯವಾಗಿಯೇ ಬ್ರ್ಯಾಂಡ್ ಬಿಲ್ಡಿಂಗ್ ಮಾಡಲು ಕಾಫಿ ಮಂಡಳಿಯು ಹೆಜ್ಜೆ ಇಟ್ಟಿದೆ. ಈ ಕುರಿತು ಕಳೆದ ವಾರ ಬೆಂಗಳೂರಿನಲ್ಲಿ ಕಾಫಿ ಮಂಡಳಿಯು ಪೂರ್ವಭಾವಿ ಸಭೆಯನ್ನು ನಡೆಸಿದೆ.
ಇದರ ಮೊದಲ ಹಂತವಾಗಿ ದೇಶದ ಎಲ್ಲ ಪಾಲುದಾರರಿಗೆ ತಮ್ಮ ಸಲಹೆಗಳನ್ನು ನೀಡಲು ಮಂಡಳಿಯು ಆಹ್ವಾನ ನೀಡಿದ್ದು, ಸ್ಥಳಿಯವಾಗಿ ದೊರೆತಿರುವ ಪ್ರೋತ್ಸಾಹದಿಂದಲೇ ಬ್ರೆಜಿಲ್ನ ಕಾಫಿ ವಿಶ್ವದಲ್ಲಿ ಜನಪ್ರಿಯತೆ ಗಳಿಸಿದೆ. ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶವಾದ ಬ್ರೆಜಿಲ್ನಲ್ಲಿ ಅಲ್ಲಿನ ಸರ್ಕಾರ ಅಲ್ಲಿನ ಜನರಿಗೆ ಕಾಫಿಯ ಮಹತ್ವವನ್ನು ಸಾರುವ ವ್ಯಾಪಕ ಪ್ರಚಾರ ನಡೆಸಿ ಆಂತರಿಕ ಸೇವನೆಯನ್ನು ಮೊದಲು ಹೆಚ್ಚಿಸಲಾಯಿತು. ನಂತರ ಬ್ರೆಜಿಲ್ ಕಾಫಿ ವಿದೇಶದಲ್ಲೂ ಜನಪ್ರಿಯವಾಯಿತು. ಈಗ ಭಾರತದಲ್ಲೂ ಅದೇ ಮಾದರಿಯ ಪ್ರಚಾರ ಮಾಡುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
ವಿಶ್ವದಲ್ಲಿ ಅತ್ಯಂತ ಹೆಚ್ಚು ಕಾಫಿ ಬೆಳೆಯುವ ಬ್ರೆಜಿಲ್ ಮತ್ತು ಎರಡನೇ ಸ್ಥಾನದಲ್ಲಿರುವ ಕೊಲಂಬಿಯಾದ ಕಾಫಿಗಿಂತ ಗುಣಮಟ್ಟದಲ್ಲಿ ಭಾರತೀಯ ಕಾಫಿಯು ಉತ್ಕೃಷ್ಟವಾಗಿದೆ. ಭಾರತೀಯ ಕಾಫಿಯು ಪ್ರೀಮಿಯಂ ಬೆಲೆಗೆ ವಿದೇಶಗಳಲ್ಲಿ ಮಾರಾಟವಾಗುತಿದ್ದು ಭಾರತ ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಆರನೇ ಸ್ಥಾನ ಹೊಂದಿದೆ. ಆದರೆ ಭಾರತೀಯ ಕಾಫಿಯ ಹಿರಿಮೆ ಇಲ್ಲಿನ ಸ್ಥಳಿಯರಿಗೆ ಇನ್ನೂ ಗೊತ್ತಿಲ್ಲ.
ಕಾಫಿ ಬೆಳೆಯುವ ವಿದೇಶಗಳಲ್ಲಿ ಕಾಫಿಯ ಮೌಲ್ಯವನ್ನು ಸ್ಥಳೀಯವಾಗಿ ಉತ್ತಮ ರೀತಿಯಲ್ಲಿ ತಿಳಿಸಿಕೊಡಲಾಗಿದೆ. ಆದ್ದರಿಂದ ವಿಶ್ವ ಮನ್ನಣೆ ಗಳಿಸಲು ಸಾಧ್ಯವಾಗಿದೆ. ಕೇವಲ ಕಾಫಿ ಬೋರ್ಡ್ನಿಂದ ಬೆಳೆ ಮತ್ತು ಮಾರಾಟದ ಸಂಬAಧ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವಿಲ್ಲ.
(ಮೊದಲ ಪುಟದಿಂದ) ಎಲ್ಲ ಪಾಲುದಾದರೂ ಒಟ್ಟುಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಥಳೀಯ ಮತ್ತು ಅಂತರರಾಷ್ಟಿçÃಯ ಮಾರುಕಟ್ಟೆಗಳಲ್ಲಿ ಭಾರತೀಯ ಕಾಫಿ ಮತ್ತು ಸಹ ಉತ್ಪನ್ನಗಳನ್ನು ಇನ್ನಷ್ಟು ಮುನ್ನೆಲೆಗೆ ತರಬಹುದಾಗಿದೆ.
ಮಾರ್ಕ್ ಆಫ್ ಕ್ವಾಲಿಟಿ ಎನ್ನುವ ಪರಿಕಲ್ಪನೆಯನ್ನು ತರುವುದರ ಮೂಲಕ ಬ್ರೆಜಿಲ್ ದೇಶ ಪ್ರಪಂಚದಲ್ಲೇ ಕಾಫಿಗೆ ಸಂಬAಧಿಸಿದAತೆ ಹೆಸರನ್ನು ಮಾಡಿದೆ. ಅದೇ ಮಾದರಿಯಲ್ಲಿ ಇಲ್ಲೂ ಕೂಡ ಗುಣಮಟ್ಟಕ್ಕೆ ಒತ್ತು ನೀಡಬೇಕಿದೆ. ಒಟ್ಟು ೧೦ ವಿಚಾರಗಳನ್ನು ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬAಧಿಸಿದAತೆ ದೇಶದ ಎಲ್ಲ ಪಾಲುದಾರರ ಸಮಯವನ್ನು ಇತ್ತೀಚಿಗೆ ನಡೆದ ಮೊದಲ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರವಾಗಿ ಅತಿ ಶೀಘ್ರದಲ್ಲೇ ತಮ್ಮ ಎಲ್ಲ ಅಹವಾಲು ಮತ್ತು ಪರಿಕಲ್ಪನೆಗಳನ್ನು ನೀಡಿ ಒಟ್ಟಿಗೆ ಕೆಲಸ ಮಾಡುವುದಾಗಿದೆ. ಆ ಮೂಲಕ ಕಾಫಿಯ ಆಂತರಿಕ ಬಳಕೆ ಹೆಚ್ಚಿಸಿ ಮತ್ತು ಜಾಗೃತಿ ಮೂಡಿಸಬಹುದಾಗಿದೆ.
ದೇಶದಲ್ಲಿ ಉತ್ಪಾದನೆ ಆಗುತ್ತಿರುವ ೩.೬೫ ಲಕ್ಷ ಟನ್ ಕಾಫಿಯಲ್ಲಿ ಶೇಕಡಾ ೬೦ ಕ್ಕಿಂತ ಹೆಚ್ಚು ರಫ್ತಾಗುತ್ತಿದೆ. ದೇಶದ ಆಂತರಿಕ ಬಳಕೆ ಒಂದು ಲಕ್ಷ ಟನ್ಗಿಂತಲೂ ಕಡಿಮೆ ಇದೆ. ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ತಲಾ ಕಾಫಿ ಬಳಕೆ ಇತರ ಕಾಫಿ ಉತ್ಪಾದಕ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಟವಾಗಿದೆ. ಹೀಗಾಗಿ ಕಾಫಿ ಬ್ರ್ಯಾಂಡ್ ಬಿಲ್ಡಿಂಗ್ ಮೂಲಕ ಕಾಫಿ ಬಳಕೆ ಹೆಚ್ಚಿಸಬೇಕಿರುವುದು ಉದ್ಯಮದ ದೃಷ್ಟಿಯಿಂದ ಅನಿವಾರ್ಯವೂ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ಅವರು ಕಾಫಿ ಮಂಡಳಿಯು ಆಯೋಜಿಸಿದ್ದ ಸಭೆಯಲ್ಲಿ ತಾವು ಭಾಗವಹಿಸಿದ್ದಾಗಿಯೂ ಮುಂದಿನ ಸಭೆಯಲ್ಲಿ ಸ್ಪಷ್ಟ ರೂಪು ರೇಷೆಗಳನ್ನು ನಿರ್ಧರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆಂತರಿಕ ಬಳಕೆ ಹೆಚ್ಚಿದಾಗ ಸಹಜವಾಗಿಯೇ ವಿದೇಶಗಳಲ್ಲೂ ಹೆಚ್ಚಿನ ಮನ್ನಣೆ ದೊರೆಯುವ ಜತೆಗೇ ಕಾಫಿ ದರವೂ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.