ಐಗೂರು. ಜು. ೯: ಮಾದಾಪುರ ಗ್ರಾಮ ಪಂಚಾಯಿತಿಯ ಜಂಬೂರು ಬಾಣೆಯಲ್ಲಿ ವಾಸಿಸುವ ಸುಮಾರು ೨೫ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜಿಗಾಗಿ ಪಂಚಾಯಿತಿಯಿAದ ರಸ್ತೆಯ ಬದಿಯಲ್ಲಿ ಭೂಮಿಯೊಳಗೆ ಪ್ಲಾಸ್ಟಿಕ್ ಪೈಪುಗಳನ್ನು ಅಳವಡಿಸಲಾಗಿತ್ತು. ಗುತ್ತಿಗೆದಾರರು ರಸ್ತೆ ನವೀಕರಿ ಸುವ ಸಂದರ್ಭದಲ್ಲಿ ಭೂಮಿಯೊಳಗಿ ನಿಂದ ಪೈಪುಗಳನ್ನು ಅಗೆದು ತೆಗೆದು ಈ ಭಾಗದ ಬಚ್ಚಲು ಮನೆಯ ಕೊಳಚೆ ನೀರು ಹೋಗುವ ಕಾಂಕ್ರೀಟ್ ಚರಂಡಿ ಯೊಳಗೆ ಅಳವಡಿಸಿದ್ದು, ಇತ್ತೀಚೆಗೆ ಚರಂಡಿಯೊಳಗೆ ಅಳವಡಿಸಿದ್ದ ಪ್ಲಾಸ್ಟಿಕ್ ಪೈಪಿನಲ್ಲಿ ಸಣ್ಣ ರಂಧ್ರವಾಗಿತ್ತು. ಬಚ್ಚಲು ಮನೆಯಿಂದ ಬರುವ ಸೋಪು ಮಿಶ್ರಿತ ಕೊಳಚೆ ನೀರು ಚರಂಡಿಯೊ ಳಗೆ ಹರಿದು ಕುಡಿಯುವ ನೀರಿನ ಪೈಪಿನಲ್ಲಿರುವ ರಂಧ್ರದೊಳಗೆ ಸೇರಿ ಈ ಭಾಗದ ಸುಮಾರು ೨೫ ಮನೆಗಳ ಜನರು ಈ ನೀರನ್ನೆ ಕುಡಿಯಲು ಉಪಯೋಗಿಸುವಂತಾಗಿತ್ತು. ಈ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಅವರು ಮಾದಾಪುರ ಗ್ರಾ.ಪಂ. ಸದಸ್ಯರಾದ ಸುರೇಶ್ ಬಾವೆ ಮತ್ತು ಅಂತೋಣಿಯವರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ನೀರಿನ ಪೈಪಿನ ಪರಿಶೀ ಲನೆ ಮಾಡಿದರು. ಆದಷ್ಟು ಬೇಗ ಗುತ್ತಿಗೆದಾರರಿಗೆ ತಿಳಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿ ಕೊಡುವುದಾಗಿ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿಗಳಾದ ಚಂದ್ರ ಟೈಲರ್, ಮೊಹಮ್ಮದ್ ಮತ್ತು ಕೃಷ್ಣ ಅವರಿಗೆ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಅವರು ತಿಳಿಸಿದರು.