ಮಡಿಕೇರಿ, ಜು. ೯: ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ವತಿಯಿಂದ ೪ನೇ ವರ್ಷದ ಹಿಂದೂ ಕೆಸರುಗದ್ದೆ ಕ್ರೀಡಾಕೂಟ ತಾ.೧೩ ಮತ್ತು ೧೪ ರಂದು ತುಂತಜೆ ಕುಟುಂಬಸ್ಥರ ಗದ್ದೆಯಲ್ಲಿ ನಡೆಯಲಿದೆ ಎಂದು ಕ್ಲಬ್ನ ಅಧ್ಯಕ್ಷ ಕುಡೆಕಲ್ ಅರವಿಂದ್, ಕಾರ್ಯದರ್ಶಿ ದರ್ಶನ್ ದಂಬೆಕೋಡಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು. ಕ್ರೀಡಾಕೂಟದಲ್ಲಿ ಕೆಸರುಗದ್ದೆ ಕ್ರಿಕೆಟ್, ವಾಲಿಬಾಲ್, ಓಟ, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ತಾ.೧೩ರ ಬೆಳಿಗ್ಗೆ ೯ ಗಂಟೆಗೆ ಕ್ರೀಡಾಕೂಟಕ್ಕೆ ಕೃಷಿಕರಾದ ತುಂತಜೆ ಚಂದ್ರಶೇಖರ್, ತುಂತಜೆ ಜನಾರ್ಧನ, ತುಂತಜೆ ತಿಮ್ಮಯ್ಯ, ತುಂತಜೆ ರಂಜಿತ್, ತುಂತಜೆ ಧರ್ಮಾವತಿ, ರ್ವತ್ತೋಕ್ಲು ಪೆರಾತ ಕ್ಲಬ್ ಅಧ್ಯಕ್ಷ ಬಾಳಾಡಿ ಪ್ರತಾಪ್, ಮಾಜಿ ಕ್ಯಾಪ್ಟನ್ ತುಂತಜೆ ದಯಾನಂದ ಇವರುಗಳು ಚಾಲನೆ ನೀಡಲಿದ್ದಾರೆ. ತಾ.೧೪ರ ಸಂಜೆ ೪.೩೦ ಗಂಟೆಗೆ ಕುಡೆಕಲ್ ಅರವಿಂದ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ, ಅಂತರರಾಷ್ಟಿçÃಯ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವ ತಂಡಗಳು ತಾ.೧೧ರೊಳಗೆ ೯೯೪೫೮೫೫೯೭೪, ೯೪೮೧೪೩೧೧೨೨, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಹೆಸರು ನೋಂದಾಯಿಸಲು ೯೭೪೧೦೨೬೫೫೨ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕ್ಲಬ್ನ ಖಜಾಂಚಿ ಕಾಳೆಯಂಡ ಮಂಜು, ಸದಸ್ಯ ಬಾಳಾಡಿ ಮನೋಜ್ ಉಪಸ್ಥಿತರಿದ್ದರು.