ಗೋಣಿಕೊಪ್ಪ ವರದಿ, ಜು. ೧೦: ಕಾಡಾನೆ ಹಾವಳಿಯಿಂದ ನೊಕ್ಯ ಗ್ರಾಮಸ್ಥರು ಕೃಷಿಯಿಂದ ದೂರ ಉಳಿಯುವ ಆತಂಕ ಎದುರಾಗಿದೆ ಎಂದು ನೊಕ್ಯ ಗ್ರಾಮದ ಕೃಷಿಕರು ದೂರಿದ್ದಾರೆ.

ಹಲಸಿನ ಹಣ್ಣು ಅರಸಿ ಬರುವ ಕಾಡಾನೆಗಳ ಉಪಟಳ ಸಹಿಸಲಾಗದೆ ಹಣ್ಣನ್ನು ಮಣ್ಣಿನಲ್ಲಿ ಹೂಳಲು ಮುಂದಾಗಿದ್ದೇವೆ. ಇದಕ್ಕಾಗಿ ಸುಮಾರು ೫೦ ಸಾವಿರ ವೆಚ್ಚ ಮಾಡಬೇಕಾಗಿದೆ. ಬೆಳೆ ಉಳಿಸಿಕೊಳ್ಳಲು ಅನ್ಯ ಮಾರ್ಗವಿಲ್ಲದೆ ಪರದಾಡುವಂತಾಗಿದೆ ಎಂದು ಕೃಷಿಕ ಚೆಪ್ಪುಡೀರ ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾಗರಹೊಳೆ ಉದ್ಯಾನವನಕ್ಕೆ ಹೊಂದಿಕೊAಡಿರುವ ಗ್ರಾಮವಾಗಿ ರುವುದರಿಂದ ಉಪಟಳ ಹೆಚ್ಚು. ಬಂಬುಕಾಡು, ಚಾಮುಂಡಿ ಮಲೆ, ಕುಂಞÂರಾಮನಕಟ್ಟೆ ಭಾಗದಲ್ಲಿ ಜಂಗಲ್ ಹಾಡಿವರೆಗೆ ನಿರ್ಮಿಸಿರುವ ರೈಲ್ವೆ ಬ್ಯಾರಿಕೇಡ್ ತೀರಾ ಕಳಪೆ ಎಂಬ ಆರೋಪ ಸ್ಥಳೀಯರಲ್ಲಿದೆ.

ಜಂಗಲ್ ಹಾಡಿಯಲ್ಲಿ ಅಳವಡಿಸಿರುವ ಕಬ್ಬಿಣದ ಗೇಟ್ ಬಂದೋಬಸ್ತ್ ಇಲ್ಲದೆ ಇರುವುದು. ಹಾಡಿಯಿಂದ ಮರಪಾಲದವರೆಗೆ ನಿರ್ಮಿಸಬೇಕಿದ್ದ ರೈಲ್ವೆ ಬ್ಯಾರಿಕೇಡ್ ಯೋಜನೆ ೬ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದು, ಕಂಬಿಗಳು ತುಕ್ಕು ಹಿಡಿಯುತ್ತಿರುವುದು ಸಮಸ್ಯೆಯಾಗಿದೆ.

ಹಲಸು ಹಣ್ಣು ಫಲಸು ಹೆಚ್ಚಾಗುತ್ತಿದ್ದು, ಕಾಡಾನೆ ನಿಯಂತ್ರಣ ಅಸಾಧ್ಯ ಎಂಬAತಾಗಿದೆ. ಗುಂಡಿ ತೆಗೆದು ಹಲಸು ಹೂಳಲು ಸರ್ಕಾರ ಅನುದಾನ ನೀಡಬೇಕಿದೆ. ಅರಣ್ಯ ಇಲಾಖೆ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಸುಮಾರು ೫೦ ಸಾವಿರ ವೆಚ್ಚವಾಗುತ್ತಿದೆ ಎಂದು ದೂರಿದರು.

ಅರಣ್ಯ ಇಲಾಖೆ ಎರಡು ಭಾಗಗಳಾಗಿ ವಿಂಗಡಣೆ ಮಾಡಿರುವುದು ಸಮಸ್ಯೆಯಾಗಿದೆ. ಆರ್‌ಆರ್‌ಟಿ ತಂಡ ಕೂಡ ಗುಣಮಟ್ಟದ ಕಾರ್ಯ ನಡೆಸುತ್ತಿಲ್ಲ. ಭತ್ತ ಬೆಳೆಯಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆ ತುಳಿತಕ್ಕೆ ಸ್ಥಳೀಯ

(ಮೊದಲ ಪುಟದಿಂದ) ಕೃಷಿಕ ಮಲ್ಲಂಗಡ ಸನ್ನಿ ಜೀವ ಕಳೆದುಕೊಂಡಿದ್ದಾರೆ. ಆದಿವಾಸಿ ಸಿದ್ದು ಕೂಡ ಜೀವ ತೆತ್ತಿದ್ದಾರೆ. ಅರಣ್ಯ ಸಚಿವರು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ನೀಡಿದ್ದ ಭರವಸೆ ಕೂಡ ಈಡೇರಿಲ್ಲ. ಉನ್ನತ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಾರ್ಮಿಕರು ಭಯದಿಂದ ತೋಟಕ್ಕೆ ಬರುತ್ತಿಲ್ಲ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಅಪಾಯವಿದೆ. ಹೀಗೆ ಮುಂದುವರಿದಲ್ಲಿ ನೊಕ್ಯ ಗ್ರಾಮಸ್ಥರು ಕೃಷಿಯಿಂದ ದೂರ ಉಳಿಯುವ ಆತಂಕ ಹೆಚ್ಚಾಗಿದೆ ಎಂದರು.

ಗೋಷ್ಠಿಯಲ್ಲಿ ಸ್ಥಳೀಯರಾದ ಚೆಕ್ಕೇರ ಕಿಸು ತಮ್ಮಯ್ಯ, ಮಲ್ಲಂಗಡ ಗಗನ್, ವಿ. ಪಿ. ಮಾದಯ್ಯ, ರಮೇಶ್ ಕಾವೇರಪ್ಪ ಇದ್ದರು.