ಮಡಿಕೇರಿ, ಜು. ೧೦: ಬುದ್ಧ ಪ್ರತಿಷ್ಠಾನ ಕೊಡಗು ಶಾಖೆ ವತಿಯಿಂದ ೧೦೨ನೇ ವಕೀಲರ ದಿನದ ಅಂಗವಾಗಿ ತಾ.೧೩ ರಂದು ವಕೀಲರಿಗೆ ಗೌರವ ಸಮರ್ಪಣೆ ಮತ್ತು ಬುದ್ಧ ಪೂರ್ಣಿಮೆ ಅಂಗವಾಗಿ ಶಕ್ತಿ ವೃದ್ಧಾಶ್ರಮದ ಮಾತೃಪಿತೃಗಳಿಗೆ ವಸ್ತç ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಎಂದು ಬುದ್ಧ ಪ್ರತಿಷ್ಠಾನದ ಜಿಲ್ಲಾ ಧಮ್ಮಾಚಾರಿ ಹೆಚ್.ಪಿ. ಶಿವಕುಮಾರ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಮಡಿ ಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯ ಕ್ರಮವನ್ನು ವಕೀಲರ ಸಂಘದ ಜಿಲ್ಲಾ ಧ್ಯಕ್ಷ ಎಂ.ಎ.ನಿರAಜನ್ ಉದ್ಘಾಟಿಸ ಲಿದ್ದು, ಮುಖ್ಯ ಭಾಷಣಕಾರರಾಗಿ ವಕೀಲ ಕೆ.ಆರ್. ವಿದ್ಯಾಧರ್ ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕÀ ಜಿ.ರಾಜೇಂದ್ರ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತ ಚಂದ್ರಮೋಹನ್, ಸೋಮವಾರಪೇಟೆ ವಕೀಲ ಬಿ.ಇ. ಜಯೇಂದ್ರ, ಮಡಿಕೇರಿಯ ನಾಗೇಶ್ ಕುಮಾರ್, ಕುಶಾಲನಗರ ಪುರಸಭೆಯ ನೂತನ ಕಾನೂನು ಸಲಹೆಗಾರÀ ಕೆ.ಸಿ. ಶಿವಮೂರ್ತಿ, ಕುಶಾಲನಗರ ಎಪಿಪಿ ಹೆಚ್.ಎನ್. ಜಾನಕಿ, ವಕೀಲ ದಿವ್ಯ ನಂಜಪ್ಪ, ಜೆ.ಆರ್. ತುಳಸಿ, ವೀರಾಜ ಪೇಟೆ ಕ.ದ.ಸಂ.ಸ.ರಾಜ್ಯ ಸಮಿತಿ ಸದಸ್ಯ ಪಳನಿ ಪ್ರಕಾಶ್, ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್, ಬುದ್ಧ ಪ್ರತಿ ಷ್ಠಾನದ ರವಿ, ಡಿಎಸ್ಎಸ್ನ ಹೆಚ್.ಟಿ. ಕಾವೇರಪ್ಪ, ರವೀಂದ್ರ, ನಾಗಪ್ಪ ಹಾಗೂ ಹೆಚ್.ಎ.ಗಣೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.