ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಜು. ೧೦ : ಪ್ರಪಂಚವನ್ನು ಬಾಧಿಸಿದ್ದ ಕೋವಿಡ್- ೧೯ ಪರಿಸ್ಥಿತಿ ಬಳಿಕ ಭಾರತ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯೊಂದಿಗೆ ಮಹತ್ತರ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರ ವತಿಯಿಂದ ಜಿಲ್ಲಾ ಮಟ್ಟದಲ್ಲಿ ‘ಕ್ರಿಟಿಕಲ್ ಕೇರ್ ಸೆಂಟರ್’ ನಿರ್ಮಿಸಬೇಕೆಂಬ ಚಿಂತನೆಗೆ ಇದೀಗ ಮಡಿಕೇರಿಯಲ್ಲಿ ವಿಘ್ನ ಎದುರಾಗಿದೆ. ಪುರಾತತ್ವ ಇಲಾಖೆ ನೀಡಿದ ನೋಟಿಸ್‌ನಿಂದ ಕೆಲಸ ಸ್ಥಗಿತಗೊಂಡಿದೆ. ನಿರಪೇಕ್ಷಣಾ ಪತ್ರ (ಎನ್.ಓ.ಸಿ) ಪಡೆದ ನಂತರವಷ್ಟೆ ಕಾಮಗಾರಿ ಮುಂದುವರೆಸಲು ಅನುಮತಿ ದೊರೆಯಲಿದೆ.

ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಲ್ಲಾಸ್ಪತ್ರೆ) ಆವರಣದ ‘ಎ ಬ್ಲಾಕ್’ ಪಕ್ಕದಲ್ಲಿದ್ದ ವಸತಿ ಗೃಹಗಳನ್ನು ಕೆಡವಿ ೪೫ ಸೆಂಟ್ ವಿಸ್ತಿçÃರ್ಣದಲ್ಲಿ ರೂ. ೨೯.೮೫ ಕೋಟಿ ವೆಚ್ಚದಲ್ಲಿ ೫೦ ಹಾಸಿಗೆ ಸಾಮರ್ಥ್ಯದ ‘ಕ್ರಿಟಿಕಲ್ ಕೇರ್ ಸೆಂಟರ್’ ನಿರ್ಮಾಣಕ್ಕೆ ೨೦೨೨-೨೩ನೇ ಸಾಲಿನಲ್ಲಿ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ‘ಪಿಎಂ-ಅಭೀಮ್’ ಯೋಜನೆಯ ಮೂಲಕ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿAಗ್ ವಿಭಾಗದ ಮೂಲಕ ಜಿಲ್ಲಾಸ್ಪತ್ರೆ ಆವರಣದಲ್ಲಿ ಈಗಾಗಲೇ ರೂ. ೨೯.೮೫ ಕೋಟಿ ಹಣದ ಪೈಕಿ ರೂ. ೬.೫೦ ಕೋಟಿಯನ್ನು ವ್ಯಯಿಸಿ ತಳಪಾಯ ಹಾಕಿ, ಪಿಲ್ಲರ್, ತಡೆಗೋಡೆ ನಿರ್ಮಾಣ, ಕಾಲಂ ಅಳವಡಿಕೆ ಸೇರಿದಂತೆ ಇನ್ನಿತರ ಕೆಲಸಗಳು ಭರದಿಂದ ನಡೆಯುತ್ತಿದ್ದವು.

ಪುರಾತತ್ವ ಇಲಾಖೆಯಿಂದ ನೋಟಿಸ್

ಪುರಾತತ್ವ ಇಲಾಖೆ ನೀಡಿದ ನೋಟಿಸ್‌ನಿಂದ ಇದೀಗ ಕೆಲಸ ಸ್ಥಗಿತಗೊಂಡಿದ್ದು, ಕೆಲ ಪ್ರಕ್ರಿಯೆ ನಡೆಸಿ ಅನುಮತಿ ಪಡೆದ ಬಳಿಕವಷ್ಟೆ ಕಾಮಗಾರಿ ಆರಂಭಿಸಬೇಕಾಗಿದೆ.

ನಗರದ ಮುಖ್ಯ ರಸ್ತೆಯಲ್ಲಿ ಐತಿಹಾಸಿಕ ಹಿನ್ನೆಲೆಯ ರಾಷ್ಟಿçÃಯ ಪಾರಂಪರಿಕ ತಾಣವಾದ ಕೋಟೆ ಇರುವ ಹಿನ್ನೆಲೆ ಅದರ ೩೦೦ ಮೀಟರ್ ವ್ಯಾಪ್ತಿಯ ತನಕ ಅನುಮತಿ ಇಲ್ಲದೆ ಯಾವುದೇ ಕಟ್ಟಡ ನಿರ್ಮಿಸಲು ಅವಕಾಶವಿರುವುದಿಲ್ಲ. ನಿರ್ಮಾಣಗೊಳ್ಳುತ್ತಿದ್ದ ‘ಕ್ರಿಟಿಕಲ್ ಕೇರ್ ಸೆಂಟರ್’ ಕಟ್ಟಡ ಕೋಟೆಯಿಂದ ೨೮೦ ಮೀಟರ್ ಅಂತರದಲ್ಲಿರುವ ಕಾರಣ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿಲ್ಲ ಎಂಬ ಕಾರಣವೊಡ್ಡಿ ಪುರಾತತ್ವ ಇಲಾಖೆ ಸಂಬAಧಪಟ್ಟವರಿಗೆ ಕೆಲಸ ಸ್ಥಗಿತಗೊಳಿಸಿ ನಿಯಮಾನುಸಾರ ಅನುಮತಿ ಪಡೆದುಕೊಳ್ಳುವಂತೆ ಸೂಚನೆಯನ್ನು ನೀಡಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎನ್.ಓ.ಸಿ. ಪಡೆಯುವ ನಿಟ್ಟಿನಲ್ಲಿ ಪ್ರಕ್ರಿಯೆಯಗಳನ್ನು ಆರಂಭ ಮಾಡಿದ್ದು, ಅನುಮತಿ ಸಿಕ್ಕ ನಂತರವಷ್ಟೆ ಯೋಜನೆ ಮರು ಆರಂಭಿಸಬೇಕಾದ ಪರಿಸ್ಥಿತಿ ತಲೆದೋರಿದೆ.

ಪ್ರಯೋಜನಕಾರಿ ಯೋಜನೆ

ಉದ್ದೇಶಿತ ಕಾಮಗಾರಿ ಪೂರ್ಣಗೊಳಿಸಲು ಒಟ್ಟು ೧೫ ತಿಂಗಳ ಕಾರ್ಯಾವಧಿಯನ್ನು ನೀಡಲಾಗಿತ್ತು. ಕೆಲಸ ಆರಂಭಗೊAಡು ೬ ತಿಂಗಳು ಕಳೆದಿದ್ದು, ಅಂದುಕೊAಡAತೆ ಕೆಲಸಗಳು ನಡೆದಿದ್ದರೆ ಮುಂದಿನ ೯ ತಿಂಗಳ ಕಾಲಾವಧಿಯಲ್ಲಿ ಕ್ರಿಟಿಕಲ್ ಕೇರ್ ಸೆಂಟರ್‌ನ ಸೇವೆ ಜಿಲ್ಲೆಗೆ ದೊರೆಯಬೇಕಾಗಿತ್ತು. ಆದರೆ, ಇದೀಗ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆ ಪೂರ್ಣಗೊಳ್ಳಲು ಮತ್ತಷ್ಟು ಕಾಲ ಹಿಡಿಯುವ ಸಾಧ್ಯತೆಗಳಿವೆ.

ಈ ಯೋಜನೆಯಿಂದ ತುರ್ತು ಚಿಕಿತ್ಸೆಗಳು ಸಕಾಲದಲ್ಲಿ ದೊರೆಯಲಿವೆ ಎಂಬ ಆಶಾಭಾವನೆಯೂ ಇದೆ. ಅಪಘಾತ ಸೇರಿದಂತೆ ಜೀವಾಪಾಯ ಸಂಭವಿಸುವ ಪ್ರಕರಣಗಳನ್ನು ಇಲ್ಲಿ ದಾಖಲು ಮಾಡಿಕೊಂಡು ತ್ವರಿತ ಚಿಕಿತ್ಸೆ ನೀಡುವ ಚಿಂತನೆಯನ್ನು ಹೊಂದಲಾಗಿದೆ.

(ಮೊದಲ ಪುಟದಿಂದ) ೫೦ ಹಾಸಿಗೆ ಸಾಮರ್ಥ್ಯದ ಈ ಕೇಂದ್ರದಲ್ಲಿ ೧೦ ಐಸಿಯು ಬೆಡ್, ೬ ಅತ್ಯಾಧುನಿಕ ತೀವ್ರ ನಿಗಾ ಘಟಕ, ೨೪ ಐಸೋಲೇಷನ್ ಬೆಡ್, ೨ ಡಯಾಲಿಸಿಸ್ ಕೇಂದ್ರ, ೨ ಎಂ.ಸಿ.ಹೆಚ್., ೨ ಅಪರೇಷನ್ ಥಿಯೇಟರ್, ಲ್ಯಾಬ್‌ಗಳು ಸೇರಿದಂತೆ ಇನ್ನಿತರ ಸೇವೆಗಳು ಒಂದೆ ಕಡೆಯಲ್ಲಿ ದೊರೆಯಲಿವೆ.

‘ಕ್ರಿಟಿಕಲ್ ಕೇರ್ ಸೆಂಟರ್‌ಗೆ ಜಿಲ್ಲಾಸ್ಪತ್ರೆಯ ವೈದ್ಯರನ್ನೇ ನಿಯೋಜಿಸಿಕೊಳ್ಳಲಾಗುವುದು. ಈಗಾಗಲೇ ೩೪ ವೈದ್ಯರ ಭರ್ತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾಸ್ಪತ್ರೆ ಡೀನ್ ಡಾ. ವಿಶಾಲ್ ಕುಮಾರ್ ತಿಳಿಸಿದ್ದಾರೆ.

ತಾ. ೬ ರಂದು ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತ್ತು. ಸಂಸ್ಥೆ ಹಾಗೂ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡ ಅಭಿಯಂತರರು ತಾಂತ್ರಿಕ ಸಮಸ್ಯೆಗಳ ಪರಿಹಾರವನ್ನು ಕಟ್ಟಡ ನಿರ್ಮಾಣಕ್ಕೆ ಮುನ್ನವೇ ತೆಗೆದುಕೊಳ್ಳಬೇಕಾಗಿತ್ತು. ಅನುಮತಿ ದೊರೆಯದೆ ಕಾಮಗಾರಿ ವಿಳಂಬವಾದರೆ ತಾಂತ್ರಿಕ ತಪ್ಪಿಗೆ ಕಾರಣರಾದ ಅಧಿಕಾರಿಗಳಿಂದ ಯೋಜನೆಗೆ ವ್ಯಯ ಮಾಡಿದ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡಲಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದರು.