ಮಡಿಕೇರಿ, ಜು. ೧೦: ಸರಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆಯಲ್ಲಿ ೨೦೨೪-೨೫ರ ಸಾಲಿನ ಪ್ರಥಮ ವರ್ಷದ ಬಿ.ಎ (ಇತಿಹಾಸ, ಅರ್ಥಶಾಸ್ತç, ರಾಜ್ಯಶಾಸ್ತç, ಕನ್ನಡ ಐಚ್ಛಿಕ), ಬಿ.ಕಾಂ ಮತ್ತು ಬಿ ಬಿ ಎ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಕಾಲೇಜು ಸುಸಜ್ಜಿತವಾದ ತರಗತಿ ಕೊಠಡಿಗಳನ್ನು ಮತ್ತು ನುರಿತ ಬೋಧಕರನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಶ್ಯಕತೆಯಿರುವ ೧೪,೦೦೦ ಪುಸ್ತಕಗಳನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯ, ಇ-ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವೈಫೈ (Wiಈi) ಸೌಲಭ್ಯ, ಸಿ.ಸಿ.ಕ್ಯಾಮರಾ ಕಣ್ಗಾವಲಿನಲ್ಲಿರುವ ಸುಸಜ್ಜಿತ ಕಟ್ಟಡ, ಮಹಿಳಾ ದೌರ್ಜನ್ಯ ನಿರ್ಮೂಲನಾ ಸಮಿತಿ, ಮಾದಕ ವಸ್ತು ನಿರ್ಮೂಲನಾ ಸಮಿತಿ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಆಧುನಿಕ ರೀತಿಯ ಬೋಧನಾ ಕ್ರಮ, ಉದ್ಯೋಗ ಮಾರ್ಗದರ್ಶನ ಕೇಂದ್ರ, ವಿದ್ಯಾರ್ಥಿ ನಿಲಯ, ಕ್ಯಾಂಟೀನ್ ವ್ಯವಸ್ಥೆ, ಇಕೋಕ್ಲಬ್, ವಿದ್ಯಾರ್ಥಿ ಭ್ರಾತೃತ್ವ ವೇದಿಕೆ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತç ಸಂಘ, ಅಂತರಕಾಲೇಜು ವಿದ್ಯಾರ್ಥಿಗಳ ಕಲಿಕಾ ವಿನಿಮಯ ಕಾರ್ಯಕ್ರಮಗಳು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್., ರೋವರ್ಸ್, ರೇಂಜರ್ಸ್, ರೆಡ್ ಕ್ರಾಸ್ ಮುಂತಾದ ಘಟಕಗಳು ಕಾರ್ಯನಿರತವಾ ಗಿವೆೆ. ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೆ ಶುಲ್ಕ ಮರುಭರಣೆಯ ಸೌಲಭ್ಯವಿದೆ. ಎಲ್ಲಾ ತರಗತಿ ಕೊಠಡಿಗಳಲ್ಲಿ ಐ ಸಿ ಟಿ ಸೌಲಭ್ಯವಿದ್ದು, ಕರ್ನಾಟಕ ಸರ್ಕಾರದ ಎಲ್.ಎಂ.ಎಸ್ ಯೋಜನೆಯು ಜಾರಿಯಲ್ಲಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ೦೮೨೭೨-೨೫೫೧೧೦, ೯೪೪೯೭೬೬೭೭೨, ೭೦೨೨೨೮೯೯೩೧, ೯೯೦೨೮೧೭೫೪೧ ಈ ಸಂಖ್ಯೆಗಳನ್ನು ಸಂಪರ್ಕಿಸುವAತೆ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ. ಕೆ.ಸಿ. ತಿಳಿಸಿದ್ದಾರೆ.