ಮಡಿಕೇರಿ, ಜು. ೧೦: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವಾರ್ಡ್ಸಭೆ ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೧೬ರಂದು ಬೆಳಿಗ್ಗೆ ೧೦.೩೦ಕ್ಕೆ ಸದಸ್ಯ ಕೆ.ಜಿ. ಪದ್ಮಾವತಿ ಅಧ್ಯಕ್ಷತೆಯಲ್ಲಿ, ನಾಂಗಾಲ ವಾರ್ಡ್ ಸಭೆ ಮಧ್ಯಾಹ್ನ ೨.೩೦ಕ್ಕೆ ಕಲ್ತೋಡು ಪ್ರಾಥಮಿಕ ಶಾಲೆಯಲ್ಲಿ ಸದಸ್ಯ ಸಿ.ಎಂ. ಕಾವೇರಪ್ಪ ಅಧ್ಯಕ್ಷತೆಯಲ್ಲಿ, ತಾ. ೧೮ರಂದು ಬಾಳುಗೋಡು ಅಂಬಟ್ಟಿ ವಾರ್ಡ್ ಸಭೆ ಬಾಳುಗೋಡು ಸಮುದಾಯ ಭವನದಲ್ಲಿ ಮಧ್ಯಾಹ್ನ ೨ಕ್ಕೆ ಸದಸ್ಯ ಎಂ.ಪಿ. ನವೀನ ಅಧ್ಯಕ್ಷತೆಯಲ್ಲಿ, ಕಂಡAಗಾಲ ರುದ್ರಗುಪ್ಪೆ ವಾರ್ಡ್ ಸಭೆ ಕಂಡAಗಾಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ, ವಿ. ಬಾಡಗ ವಾರ್ಡ್ ಸಭೆ ಪ್ರಾಥಮಿಕ ಶಾಲೆಯಲ್ಲಿ ತಾ. ೧೯ರಂದು ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.