ಜಿಲ್ಲೆಯಲ್ಲಿ ಶೇ.೯೮.೯೮ ರಷ್ಟು ಸಾಧನೆ

ಮಡಿಕೇರಿ, ಜು. ೧೧: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿö್ಮ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ ರೂ. ೨೦೦೦ ಅನ್ನು ಅವರ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ ೧,೧೫,೨೨೯ ಮಂದಿ ಮಹಿಳೆಯರು ನೋಂದಣಿ ಮಾಡಿದ್ದು, ಇವರಲ್ಲಿ ೧,೧೪,೦೫೬ ಮಂದಿ ಮಹಿಳೆಯರಿಗೆ ಮಂಜೂರಾಗಿ ಶೇ.೯೮.೯೮ ರಷ್ಟು ಸಾಧನೆ ಮಾಡಲಾಗಿದೆ.

ಮಡಿಕೇರಿ ತಾಲೂಕಿನಲ್ಲಿ ೩೦,೩೪೧ ಮಂದಿ ಮಹಿಳೆಯರ ನೋಂದಣಿಯಾಗಿದ್ದು, ಇವರಲ್ಲಿ ೩೦೧೬೯ ಮಂದಿ ಮಹಿಳೆಯರಿಗೆ ಮಂಜೂರಾತಿ ದೊರೆತಿದ್ದು, ಶೇ.೯೯.೪೩ ರಷ್ಟು ಸಾಧನೆ ಮಾಡಲಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ೨೪,೨೩೮ ಮಂದಿ ಮಹಿಳೆಯರು ಹೆಸರು ನೋಂದಾಯಿಸಿದ್ದು, ಇವರಲ್ಲಿ ೨೪,೧೨೪ ಮಂದಿ ಮಹಿಳೆಯರಿಗೆ ಮಂಜೂರಾತಿ ದೊರೆತಿದ್ದು, ಶೇ.೯೯.೫೩ ರಷ್ಟು ಸಾಧನೆ ಮಾಡಲಾಗಿದೆ.

ಕುಶಾಲನಗರ ತಾಲೂಕಿನಲ್ಲಿ ೨೨,೧೦೮ ಫಲಾನುಭವಿಗಳು ನೋಂದಣಿಯಾಗಿದ್ದು, ಇವರಲ್ಲಿ ೨೧,೮೩೦ ಮಂದಿ ಮಹಿಳೆಯರಿಗೆ ಮಂಜೂರಾತಿ ದೊರೆತಿದ್ದು, ಶೇ.೯೮.೭೪ ರಷ್ಟು ಸಾಧನೆ ಮಾಡಲಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ೨೦,೫೧೯ ಮಂದಿ ಮಹಿಳೆಯರು ಹೆಸರು ನೋಂದಾಯಿಸಿದ್ದು, ಇವರಲ್ಲಿ ೨೦,೧೯೪ ಮಂದಿ ಮಹಿಳೆಯರಿಗೆ ಮಂಜೂರಾತಿ ದೊರೆತಿದ್ದು, ಶೇ.೯೮.೪೨ ರಷ್ಟು ಸಾಧನೆ ಮಾಡಲಾಗಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ೧೮,೦೨೩ ಮಂದಿ ಮಹಿಳೆಯರ ಹೆಸರು ನೋಂದಣಿಯಾಗಿದ್ದು, ಇವರಲ್ಲಿ ೧೭,೭೩೯ ಮಂದಿ ಮಹಿಳೆಯರಿಗೆ ಮಂಜೂರಾತಿ ದೊರೆತಿದ್ದು, ಶೇ.೯೮.೪೨ ರಷ್ಟು ಪ್ರಗತಿ ಸಾಧಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ೧೦೯೪ ಮಂದಿ ಎನ್‌ಪಿಸಿಐ ಮತ್ತು ಇಕೆವೈಸಿ ಮಾಡಿಸಲು ಬಾಕಿ ಇದ್ದು, ಇದನ್ನು ಮಾಡಿಸಲಾಗದವರು ಸಮೀಪದ ಅಂಚೆ ಕಚೇರಿಗಳಲ್ಲಿ ಐಪಿಪಿಬಿ ಖಾತೆ ತೆರೆದು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು ತಿಳಿಸಿದ್ದಾರೆ.