ಕೋವರ್ ಕೊಲ್ಲಿ ಇಂದ್ರೇಶ್

ನವದೆಹಲಿ, ಜು. ೧೧: ಜಿಲ್ಲೆಯ ತಲಕಾವೇರಿ ವನ್ಯಜೀವಿ ಅಭಯಾರ ಣ್ಯದ ಬಳಿ ಹಲವಾರು ಮರಗಳನ್ನು ಕಡಿದು ಸುಟ್ಟು ಹಾಕಲಾಗಿದೆ ಎಂದು ಮಾಧ್ಯಮಗಳ ವರದಿಯ ಆಧಾರದ ಮೇಲೆ ರಾಷ್ಟಿçÃಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠವು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಸ್ವೀಕರಿಸಿದೆ.

‘ಕೊಡಗಿನ ತಲಕಾವೇರಿ ವನ್ಯ ಜೀವಿ ಅಭಯಾರಣ್ಯದ ಮುಂಡ್ರೋಟ್ ವ್ಯಾಪ್ತಿಯ ಮುಂದಾರಮಲೆ ಸಂರಕ್ಷಿತ ಅರಣ್ಯದ ಬಳಿ ಅಕ್ರಮ ಮರಗಳ ಹನನ ನಡೆದಿತ್ತು. ಪರಿಸರ ಕಾರ್ಯ ಕರ್ತರು ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಮೇ ೧೦ ರಂದು ಈ ಸಂಬAಧ ‘ಶಕ್ತಿ’ಯಲ್ಲಿ ವಿವರವಾದ ವರದಿ ಪ್ರಕಟಗೊಂಡಿತ್ತು. ಈ ಕಾನೂನುಬಾಹಿರ ಚಟುವಟಿಕೆ ಮುಂಡ್ರೋಟ್ ಅರಣ್ಯ ವಲಯದಲ್ಲಿ ವರದಿ ಆಗಿದ್ದು ಹಚ್ಚ ಹಸಿರಿನ ಈ ಅರಣ್ಯ ಶ್ರೇಣಿಯು ಅಪರೂಪದ ೬,೦೦೦ ಜಾತಿಯ ಮರಗಳು ಮತ್ತು ಸಸ್ಯಗಳನ್ನು ಒಳಗೊಂಡAತೆ ಶ್ರೀಮಂತ ಸಸ್ಯವರ್ಗಕ್ಕೆ ಹೆಸರುವಾಸಿಯಾಗಿದೆ. ಕರ್ನಾಟಕ-ಕೇರಳ ಗಡಿ ಭಾಗದ ಈ ಪ್ರದೇಶವು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ ಮತ್ತು ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿದೆ.

ಪೀಠವು ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಿಗೆ ನೋಟಿಸ್ ನೀಡಲು ಆದೇಶಿಸಿದೆ. ಈ ಅಕ್ರಮ ಮರ ಹನನ ಮಾಡಿರುವವರು ಐದು ಎಕರೆಗೂ ಹೆಚ್ಚು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದು, ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕೊಡಗಿನ ಪರಿಸರ ಕಾರ್ಯಕರ್ತರು ಆರೋಪಿಸಿದ್ದರು.

“ ಮಾಧ್ಯಮ ವರದಿಗಳ ಪ್ರಕಾರ ಕೊಡಗು ಜಿಲ್ಲೆ ಇತ್ತೀಚೆಗೆ ಪರಿಸರ ಸಮಸ್ಯೆಗಳಿಂದ ಬಳಲುತ್ತಿದೆ. ಈ ವರ್ಷ, ತೀವ್ರ ಬರದ ನಡುವೆ, ಪದಿನಾಲ್ಕುನಾಡು ಮೀಸಲು ಅರಣ್ಯದ ಮುಂಡ್ರೋಟ್ ವಲಯ ಶ್ರೇಣಿಯ ತಲಕಾವೇರಿ ವನ್ಯಜೀವಿ ಅಭಯಾರಣ್ಯದ ಬಳಿ ಹಲವಾರು ಮರಗಳನ್ನು ಕಡಿದು ಸುಟ್ಟು ಹಾಕಲಾಗಿದೆ ಎಂದು ಎನ್‌ಜಿಟಿ ಆದೇಶದಲ್ಲಿ ತಿಳಿಸಿದೆ.

ಅರಣ್ಯ ಹನನವು ಪರಿಸರ ಸಂರಕ್ಷಣಾ ಕಾಯಿದೆ, ೧೯೮೬ ಮತ್ತು ಅರಣ್ಯ (ಸಂರಕ್ಷಣೆ) ಕಾಯಿದೆ, ೧೯೮೦ರ ನಿಬಂಧನೆಗಳ ಉಲ್ಲಂಘನೆಯನ್ನು ಮಾಡಿದೆ. ಈ ಸುದ್ದಿಯು ಪರಿಸರ ಮಾನದಂಡಗಳ ಅನುಸರಣೆ ಮತ್ತು ನಿಗದಿತ ಅಧಿನಿಯಮದ ನಿಬಂಧನೆಗಳ ಅನುಷ್ಠಾನಕ್ಕೆ ಸಂಬAಧಿಸಿದAತೆ ಗಣನೀಯ ಸಮಸ್ಯೆ ಕುರಿತು ಬೆಳಕು ಚೆಲ್ಲಿದೆ ಎಂದು ಎನ್‌ಜಿಟಿ ಹೇಳಿದೆ ಹಾಗೂ ವಿಚಾರಣೆಯನ್ನು ಎನ್‌ಜಿಟಿಯ ಚೆನ್ನೆöÊನಲ್ಲಿರುವ ದಕ್ಷಿಣ ವಲಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದ್ದು, ತಾ. ೬.೯.೨೦೨೪ ರಂದು ಸಂಬAಧಿತ ದಾಖಲಾತಿಗಳನ್ನು ನೀಡುವಂತೆ ಸೂಚಿಸಿದೆ.

ಕಳೆದ ಮೇ ೧೫ ರಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಹಲವಾರು ಮರಗಳನ್ನು ಕಡಿದು ಸುಟ್ಟು ಹಾಕಿದ ಆರೋಪದ ಮೇಲೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದರು. ಅಸಂಖ್ಯಾತ ಮರಗಳನ್ನು ಕಡಿಯುತ್ತಿರುವುದನ್ನು ಮಾಧ್ಯಮಗಳು ಎತ್ತಿ ತೋರಿಸಿವೆ ಎಂದು ಆದೇಶದಲ್ಲಿ ಖಂಡ್ರೆ ತಿಳಿಸಿದ್ದರು. ಆದರೆ ಸಚಿವರ ಆದೇಶದ ಪ್ರಕಾರ, ಅಧಿಕಾರಿಗಳು ಈವರೆಗೂ ತನಿಖೆ ನಡೆಸಿ ವರದಿ ಸಲ್ಲಿಸಿಲ್ಲ.

ಎನ್‌ಜಿಟಿ ಆದೇಶದ ಕುರಿತು ಪ್ರತಿಕ್ರಿಯಿಸಿದ ಸಚಿವರು ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಎಷ್ಟು ಮರಗಳನ್ನು ಕಡಿಯಲಾಗಿದೆ ಎಂದು ತನಿಖೆ ಮಾಡಲು ಮತ್ತು ಮುಂದಿನ ಮೂರು ದಿನಗಳಲ್ಲಿ ಜಿಯೋ ಟ್ಯಾಗ್ ಮಾಡಿದ ವೀಡಿಯೊ ಮತ್ತು ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿರುವುದಾಗಿ ಹೇಳಿದರು. ಘಟನೆಯ ಬಗ್ಗೆ ತಮ್ಮ ಕಚೇರಿಗೆ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.