ವೀರಾಜಪೇಟೆ, ಜು. ೧೧: ವನ್ಯಜೀವಿ ಹಾಗೂ ಮಾನವ ಸಂಘರ್ಷದಿAದ ನಿರಂತರವಾಗಿ ರೈತರು ಜೀವ ಕಳೆದುಕೊಳ್ಳುತ್ತಿದ್ದು, ಇದರ ಶಾಶ್ವತ ಪರಿಹಾರಕ್ಕಾಗಿ, ಜಿಲ್ಲಾ ಮತ್ತು ತಾಲೂಕುಮಟ್ಟದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಇಲ್ಲಿನ ಅರಣ್ಯ ಭವನದಲ್ಲಿ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ವೀರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕಿನ ರೈತರು ಎದುರಿಸುತ್ತಿರುವ ವನ್ಯಜೀವಿ ಉಪಟಳ ಮತ್ತು ಕಾಡಾನೆ ಮಾನವ ಸಂಘರ್ಷದ ಬಗ್ಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಉಭಯ ತಾಲೂಕುಗಳಿಂದ ಆಗಮಿಸಿದ ರೈತರು ಬೇಡಿಕೆಗಳನ್ನು ಮುಂದಿಟ್ಟರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಉಭಯ ತಾಲೂಕುಗಳ ಕಾಫಿ ತೋಟಗಳಲ್ಲಿ ಗುಂಪು ಗುಂಪಾಗಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡುಗಳಿಗೆ ರೇಡಿಯೊ ಕಾಲರ್ ಅಳವಡಿಸಿ ಕಾಡಿಗಟ್ಟುವ ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯದಂಚಿನಲ್ಲಿ ನಿರ್ಮಾಣ ಮಾಡಿರುವ ಇಪಿಟಿ ಕಂದಕವನ್ನು ೧೫ ರಿಂದ ೨೦ ಅಡಿ ಆಳ ಹಾಗೂ ಅಗಲಕ್ಕೆ ವಿಸ್ತರಿಸಬೇಕು. ಅರಣ್ಯದಂಚಿನಲ್ಲಿ ಮನುಜ ವಾಸ ಸ್ಥಳಕ್ಕೆ ಕಾಡಾನೆಗಳು ಬಾರದಿರುವಂತೆ ಅರಣ್ಯ ಇಲಾಖೆ

(ಮೊದಲ ಪುಟದಿಂದ) ರೈಲ್ವೆ ಬ್ಯಾರಿಕೇಡ್ ಅಳವಡಿಸಿರುತ್ತಾರೆ, ಕೆಲವು ಭಾಗಗಳಲ್ಲಿ ಬ್ಯಾರಿಕೇಡ್ ಅಳವಡಿಸದೆ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ, ಅಂತಹ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಬೇಕು. ಅರಣ್ಯದಂಚಿನಲ್ಲಿ ಕಾಡಾನೆಗಳನ್ನು ನಿಯಂತ್ರಣಗೊಳಿಸುವ ಸಲುವಾಗಿ ಅಳವಡಿಸಿರುವ ಸೋಲಾರ್ ಬೇಲಿಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು. ಅರಣ್ಯ ಪ್ರದೇಶದಿಂದ ಜನವಾಸ ಪ್ರದೇಶದ ಗಡಿ ಭಾಗಗಳಲ್ಲಿ ಕಾಡಾನೆಗಳ ಬಗ್ಗೆ ಕಣ್ಗಾವಲುಗೊಳಿಸಲು ವೀಕ್ಷಕ ಗೋಪುರ ನಿರ್ಮಿಸಿ ಕೃತಕ ಬುದ್ಧಿಮತ್ತೆ ಕ್ಯಾಮರಾಗಳನ್ನು ಅಳವಡಿಸಬೇಕು. ಕಾಡಾನೆ ದಾಳಿ ಮತ್ತು ವನ್ಯಜೀವಿ ಉಪಟಳಗಳಿಂದ ಸಾವು ನೋವುಗಳು, ಬೆಳೆಹಾನಿ, ಸಾಕುಪ್ರಾಣಿ ಹಾನಿಗಳಿಗೆ ಸಂಬAಧಿಸಿದAತೆ ಸರಕಾರ ಮತ್ತು ಇಲಾಖೆಯಿಂದ ನೀಡಲಾಗುತ್ತಿರುವ ಪರಿಹಾರ ಧನ ಮೊತ್ತವನ್ನು ಪ್ರಸ್ತುತ ಮೊತ್ತಕಿಂತ ಶೇಕಡ ೨೦ರಷ್ಟು ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ತಿತಿಮತಿ ನೂಕ್ಯ ಗ್ರಾಮದ ಜಂಗಲ್ ಹಾಡಿಯಲ್ಲಿ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿರುವ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಕಾರ್ಯ ಮುಂದುವರಿಸಬೇಕು. ಆದಿವಾಸಿಗಳ ವಾಸ ವಲಯ ಹೊರತುಪಡಿಸಿ ರೈಲ್ವೆ ಬ್ಯಾರಿಕೆಡ್ ಅಳವಡಿಸಬೇಕು, ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡು ಭಾಗಗಳಲ್ಲಿ ಕಾಡಾನೆ ಮಾನವ ಸಂಘರ್ಷದಿAದಾಗಿ ಪ್ರಾಣಹಾನಿ, ಜಾನುವಾರುಗಳ ಹಾನಿ, ಬೆಳೆ ಹಾನಿಗಳಂತಹ ದುರ್ಘಟನೆಗಳು ಕಳೆದ ೨೦ ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿರುವುದರಿAದ ಅರಣ್ಯ ಇಲಾಖೆಯು ಮತ್ತಿಗೋಡು ಅರಣ್ಯ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರವಾಸೋದ್ಯಮವನ್ನು ತಕ್ಷಣವೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಪದಾಧಿಕಾರಿಗಳು ಮತ್ತು ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಕೊಡಗು ಜಿಲ್ಲಾ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಅವರು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಸಂಖ್ಯೆ ೧೬೦ ರಿಂದ ೧೭೦ ಎಂದು ಅಂದಾಜಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಸಾವಿರಕ್ಕಿಂತ ಅಧಿಕ ಕಾಡಾನೆಗಳು ಉಳಿದಿವೆ, ಕಾಡಾನೆಗಳ ನಿಯಂತ್ರಣಕ್ಕೆ ರಾಜ್ಯ, ಕೇಂದ್ರ ಸರಕಾರ, ಹಾಗೂ ಅರಣ್ಯ ಇಲಾಖೆ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದೆ. ಆನೆ ಮಾನವ ಸಂಘರ್ಷದಿAದಾಗಿ ಪ್ರಾಣ ಹಾನಿ, ಬೆಳೆ ಹಾನಿ ಪರಿಹಾರಕ್ಕೆ ಸಂಬAಧಿಸಿದAತೆ ಸಹಾಯಧನ ವಿತರಣೆಯಲ್ಲಿ ವಿಳಂಬವಾಗದೆ ಅತಿ ಶೀಘ್ರದಲ್ಲಿ ಪರಿಹಾರ ಧನ ವಿತರಣೆಗೆ ಕ್ರಮ ಜರುಗಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ನವಂಬರ್ ತಿಂಗಳ ಅಂತ್ಯದ ವೇಳೆಗೆ ಅರಣ್ಯ ಪಾಲಕರು ಮತ್ತು ವೀಕ್ಷಕರ ಆಯ್ಕೆ ಪ್ರಕ್ರಿಯೆಗಳು ಪೂರ್ಣಗೊಳ್ಳುವುದರಿಂದ ಕೊಂಚ ಮಟ್ಟಿಗೆ ಸಿಬ್ಬಂದಿಗಳ ಕೊರತೆ ನೀಗಬಹುದು ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆಗಾಗಿ ಕ್ರಮ ಜರುಗಿಸಲು ಮುಂದಾಗುತ್ತೇವೆ. ಕಾಡಾನೆ ಮಾನವ ಸಂಘರ್ಷ ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿವೆ. ಕಾಡಾನೆ ಹಾಗೂ ವನ್ಯಜೀವಿಗಳನ್ನು ನಿಯಂತ್ರಣಗೊಳಿಸುವುದು ಅಸಾಧ್ಯ, ಆದರೆ ಕಾಡಾನೆ ನಿಯಂತ್ರಣಕ್ಕೆ ಮಾರ್ಗೋಪಾಯಗಳನ್ನು ಸರಕಾರ ಇಲಾಖೆ ಮತ್ತು ತಜ್ಞರ ಸಲಹೆ ಸೂಚನೆಯ ಮೇರೆಗೆ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಕೊಡಗು ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಚಿ ಸಬೀತ ಭೀಮಯ್ಯ, ಉಪ ಸಂರಕ್ಷಣಾ ಅಧಿಕಾರಿ ಎನ್.ಟಿ. ಜಗನ್ನಾಥ್, ಸಹಾಯಕ ಅರಣ್ಯ ಅಧಿಕಾರಿಗಳಾದ ಕೆ.ಎ. ನೆಹರು, ಕೆ.ಪಿ. ಗೋಪಾಲ್, ದಯಾನಂದ ಮತ್ತು ಶ್ರೀನಿವಾಸ್ ನಾಯಕ್ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಚೊಟ್ಟೆಕ್‌ಕಾಳಪಂಡ ಮನು, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ರಾಜ ಕರುಂಬಯ್ಯ, ಹಾಗೂ ವಿವಿಧ ಘಟಕದ ರೈತ ಸಂಘದ ಪದಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಹಿರಿಯ, ಕಿರಿಯ ಸಿಬ್ಬಂದಿಗಳು ಹಾಜರಿದ್ದರು.