ಮಡಿಕೇರಿ, ಜು. ೧೧: ಕಣಿವೆಯೊಳಗಿನಿಂದ ಬಂಡೆಕಲ್ಲುಗಳ ನೂರು ಮೀಟರ್ ಮೇಲಿನಿಂದ ಹರಿದು ಧುಮ್ಮಿಕ್ಕುತ್ತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇದುರ ಅಬ್ಬಿ (ಸೂರ್ಲಬ್ಬಿ ಫಾಲ್ಸ್) ಜಲಪಾತದ ಸೌಂದರ್ಯವು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಮುಖ್ಯರಸ್ತೆಯಲ್ಲಿರುವ ಸೇತುವೆ ಮೇಲೆ ನಿಂತು ಜಲಪಾತದ ದೃಶ್ಯಗಳನ್ನು ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದಾರೆ. ಮಾದಾಪುರದಿಂದ ೧೩ ಕಿಲೋಮೀಟರ್ ದೂರದಲ್ಲಿ ಮೇದುರ ಫಾಲ್ಸ್ ಇದೆ.

ಸೂರ್ಲಬ್ಬಿ ಮೇದುರ ಜಲಪಾತ ನೋಡುವುದೇ ಕಣ್ಣಿಗೆ ಹಬ್ಬ. ಕೋಟೆಬೆಟ್ಟ ವೀಕ್ಷಣೆಗೆ ಬರುವ ನೂರಾರು ಪ್ರವಾಸಿಗರು ಪ್ರತಿ ನಿತ್ಯ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಶ್ವೇತ ಕನ್ಯೆಯ ಸೊಬಗನ್ನು ನೋಡುವುದೇ ಆನಂದ. - ಚಿತ್ರ : ಸವಾದ್ ಉಸ್ಮಾನ್ ಕಂಡಕರೆ