ಮಡಿಕೇರಿ, ಜು. ೧೧: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವನ್ಯಜೀವಿಗಳ ಉಪಟಳ ಹೆಚ್ಚಾಗುತ್ತಿದ್ದು, ಇದರ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರದ ಮುಂದಿರುವ ಕಾಡಾನೆಗಳನ್ನು ಸೆರೆಹಿಡಿದು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸುವ ಚಿಂತನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಅಧಿಕಾರ ವರ್ಗ ಪೂರಕ ಪ್ರಯತ್ನ ನಡೆಸಬೇಕು. ಶಾಶ್ವತ ಪರಿಹಾರಕ್ಕೆ ಚಿಂತನೆಹರಿಸಬೇಕೆAದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಗಂಭೀರ ಸಮಸ್ಯೆಯಾಗಿದೆ. ತೋಟ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಉಪಟಳ ನೀಡಿ ಕೃಷಿ, ಆಸ್ತಿ-ಪಾಸ್ತಿಗಳನ್ನು ನಷ್ಟಗೊಳಿಸುತ್ತಿದೆ. ಇದಕ್ಕೆ ಶಾಶ್ವತ ಯೋಜನೆ ಅವಶ್ಯಕತೆ ಇದೆ. ಪತ್ತೆಯಾಗಿರುವ ಸುಮಾರು ೧೩೦ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪರಿಣಾಮಕಾರಿಯಾಗಿ ನಡೆಯ ಬೇಕಾಗಿದೆ. ಕಂದಕ, ರೈಲ್ವೆ ಬ್ಯಾರಿಕೇಡ್ ಗಳನ್ನು ಅಳವಡಿಸುವುದರೊಂದಿಗೆ ಲಾಂಟನದAತಹ ಗಿಡಗಳನ್ನು ಬುಡಸಹಿತ ತೆರವು ಮಾಡಬೇಕು. ಅರಣ್ಯ ಪ್ರದೇಶಗಳಲ್ಲಿ ಆನೆಗಳಿಗೆ ಬೇಕಾದ ಆಹಾರ, ನೀರು ಒದಗಿಸುವ ಕೆಲಸವಾಗಬೇಕೆಂದರು.

ಈ ಕುರಿತು ಮಾತನಾಡಿದ ಅರಣ್ಯಾಧಿಕಾರಿಗಳು ಆನೆ ಹಾವಳಿ ತಡೆಗಟ್ಟುವ ಸಲುವಾಗಿ ಪ್ರಯತ್ನಗಳು ನಡೆಯುತ್ತಿವೆ. ಮಡಿಕೇರಿ ವೃತ್ತದಲ್ಲಿ ೪, ವೀರಾಜಪೇಟೆ ವೃತ್ತದಲ್ಲಿ ೨ ಆನೆ ಸೆರೆಗೆ ಅನುಮತಿಯೂ ದೊರೆತಿದೆ. ಸದ್ಯಕ್ಕೆ ೧೩೦ ತೊಂದರೆ ನೀಡುತ್ತಿರುವ ಆನೆಗಳನ್ನು ಗುರುತಿಸಲಾಗಿದೆ. ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಸೆರೆಹಿಡಿದ ಆನೆಗಳ ಪುನರ್ವಸತಿಯ ಬಗ್ಗೆ ಗಂಭೀರ

(ಮೊದಲ ಪುಟದಿಂದ) ಚಿಂತನೆ ಸರಕಾರದ ಮಟ್ಟದಲ್ಲಿದ್ದು, ಸಾಧಕ-ಬಾಧಕ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಭಾಗಮಂಡಲ, ಕರಿಕೆ, ಬ್ರಹ್ಮಗಿರಿ, ಆನೆಕಾಡು ಕಾರಿಡಾರ್‌ಗಳಿಂದ ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಕಾಡಾನೆಗಳು ಜನನಿಬಿಡ ಪ್ರದೇಶಗಳತ್ತ ನುಸುಳುತ್ತಿವೆ ಎಂದ ಅವರುಗಳು, ಲಾಂಟನ, ಸೆನ್ನದಂತಹ ಗಿಡಗಳನ್ನು ತೆರವು ಮಾಡುವ ಪ್ರಸ್ತಾವನೆಯೂ ಮುಂದಿದೆ ಎಂದು ಮಾಹಿತಿ ಒದಗಿಸಿದರು.

ಡಿಎಫ್‌ಓ ಪ್ರಭಾಕರ್ ಮಾತನಾಡಿ, ನಾಗರಹೊಳೆ ಹಾಗೂ ಮಡಿಕೇರಿ ವೃತ್ತದಲ್ಲಿ ಆನೆ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ. ೨೦೨೩-೨೪ನೇ ಸಾಲಿನಲ್ಲಿ ೮.೩೩ ಕಿ.ಮೀ. ಕುಶಾಲನಗರ ವಲಯ ೭.೩೩ ಕಿ.ಮೀ., ಸೋಮವಾರಪೇಟೆ ವಲಯ ೧ ಕಿ.ಮೀ. ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ರೂ. ೧೪.೩೯ ಕೋಟಿ ವೆಚ್ಚದ ಪೈಕಿ ರೂ. ೧೦ ಕೋಟಿ ಭರಿಸಲಾಗಿದೆ. ೭.೬೫ ಕಿ.ಮೀ ಸೋಲಾರ್ ತಂತಿ ಬೇಲಿ ನಿರ್ಮಾಣವೂ ನಡೆಯುತ್ತಿದೆ. ವನ್ಯಪ್ರಾಣಿ ಓಡಿಸಲು ಕಾರ್ಯ ಪಡೆಗಳು ಇವೆ ಎಂದು ಮಾಹಿತಿ ನೀಡಿದರು.

ಇದರೊಂದಿಗೆ ೧೬.೫೦ ಕಿ.ಮೀ. ಹೊಸ ರೈಲ್ವೆ ಬ್ಯಾರಿಕೇಡ್, ೫ ಕಿ.ಮೀ. ಆನೆ ನಿರೋಧಕ ಕಂದಕ, ೫ ಕಿ.ಮೀ. ಡಬಲ್ ಟಿಂಟೆಡ್ ಸೋಲರ್ ಫೆನ್ಸ್ ನಿರ್ಮಾಣದ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕುಕ್ಲೂರು ಭಾಗದಲ್ಲಿ ಹುಲಿ ಸಂಚಾರದ ಮಾಹಿತಿ ಇದೆ. ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಪ್ರಶ್ನಿಸಿದರು. ಕುಕ್ಲೂರು ಭಾಗದಲ್ಲಿ ಹುಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ. ‘ಕ್ಯಾಮರ ಟ್ರಾö್ಯಪ್’ ಅಳವಡಿಸಿ ನಿಗಾ ವಹಿಸಲಾಗಿದೆ. ಸದ್ಯಕ್ಕೆ ಹುಲಿ ಸಂಚಾರ ಕಂಡುಬರುತ್ತಿಲ್ಲ ಎಂದರು.

‘ಜಲಜೀವನ್ ಮಿಷನ್ ವೇಗ ಹೆಚ್ಚಿಸಿ’

ಕೇಂದ್ರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ನಿರೀಕ್ಷ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಸಂಸದ ಯದುವೀರ್ ಅತೃಪ್ತಿ ವ್ಯಕ್ತಪಡಿಸಿದರು. ಸ್ಥಳ ಪರಿಶೀಲನೆ ಮಾಡುವ ಮೂಲಕ ವಸ್ತುಸ್ಥಿತಿ ಅರಿತು ಸಮಸ್ಯೆಗಳಿದ್ದರೆ ತ್ವರಿತ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದರು.

ಈ ಸಂಬAಧ ಅಧಿಕಾರಿ ಪ್ರತಿಕ್ರಿಯಿಸಿ, ಬ್ಯಾಚ್ ಒಂದರ ೧೭೮ ಕಾಮಗಾರಿಗಳು ಮುಗಿದಿವೆ. ೩ ಬಾಕಿ ಇವೆ. ಟೆಂಡರ್ ಕೆಲಸಗಳು ಪ್ರಕ್ರಿಯೆ ಹಂತದಲ್ಲಿವೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೂ ಕ್ರಮವಹಿಸಲಾಗಿದೆ. ಬ್ಯಾಚ್ ಎರಡರಲ್ಲಿ ೧೨೯ ಕಾಮಗಾರಿ ಕೈಗೆತ್ತಿಕೊಂಡಿದ್ದು, ೬೩ ಕಾಮಗಾರಿ ಪೂರ್ಣಗೊಂಡಿದೆ. ತೂಚಮಕೇರಿ ಜನವಸತಿ ಕಾಮಗಾರಿ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದ್ದು, ಮರು ಟೆಂಡರ್‌ಗೆ ಕ್ರಮವಹಿಸಲಾಗಿದೆ. ಕದನೂರಿನಲ್ಲಿ ಜಾಗದ ಸಮಸ್ಯೆಯಿಂದ ಕೆಲಸ ಪ್ರಾರಂಭಿಸಿಲ್ಲ. ಜಾಗದ ಗುರುತಿಗೆ ತಹಶೀಲ್ದಾರ್ ಗಮನ ಸೆಳೆಯಲಾಗಿದೆ. ಬ್ಯಾಚ್ ಮೂರರಲ್ಲಿ ೪೦ ಕಾಮಗಾರಿಗಳ ಪೈಕಿ ೩೩ ಪೂರ್ಣಗೊಂಡಿವೆ ಎಂದು ಮಾಹಿತಿ ಒದಗಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಜಲಮೂಲಗಳ ಸಮಸ್ಯೆಯಿಂದಲೂ ಕಾಮಗಾರಿ ತಡವಾಗುತ್ತಿದೆ. ಟೆಂಡರ್‌ದಾರರು ಆಸಕ್ತಿ ತೋರದಿರುವುದು ಗಮನಕ್ಕೆ ಬಂದಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕಾಮಗಾರಿಗಳಿಗೆ ವೇಗ ನೀಡಬೇಕು. ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕೆಂದು ನಿರ್ದೇಶಿಸಿದರು.

ಭಾಗಮಂಡಲ-ಕರಿಕೆ ರಸ್ತೆ ಉನ್ನತೀಕರಣ

ಭಾಗಮಂಡಲ-ಕರಿಕೆ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿದ್ದು, ಇದನ್ನು ಚುರುಕುಗೊಳಿಸಿ ಕಾರ್ಯಗತಕ್ಕೆ ಅಧಿಕಾರಿಗಳು ಪ್ರಯತ್ನಿಸಬೇಕೆಂದು ಯದುವೀರ್ ಒಡೆಯರ್ ನಿರ್ದೇಶನ ನೀಡಿದರು.

ರಸ್ತೆ ಮೇಲ್ದರ್ಜೆ ಡಿ.ಪಿ.ಆರ್. ಸಲ್ಲಿಸಲಾಗಿದ್ದು, ರಾಷ್ಟಿçÃಯ ಹೆದ್ದಾರಿ ೬೬-೬೭ ಅನ್ನು ಇದು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದರು.

ಕೊಡವ ಸಮಾಜಕ್ಕೆ ನೀಡಿದ ಹಣ ಹಿಂದಕ್ಕೆ

ಹಿAದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ರೂ. ೧೦ ಕೋಟಿ ಅನುದಾನ ಆಯವ್ಯಯದಲ್ಲಿ ಅನುಮೋದನೆಯಾಗಿ ಬಿಡುಗಡೆಯಾಗಿದೆ. ಈ ಪೈಕಿ ಭಾಗಮಂಡಲ ಕೊಡವ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ರೂ. ೧ ಕೋಟಿ, ಒಟ್ಟು ೩೦ ಕೊಡವ ಸಮಾಜಗಳ ಸಮುದಾಯ ಭವನಗಳ ಕಾಮಗಾರಿಗೆ ತಲಾ ೧೦ ಲಕ್ಷದಂತೆ ೩ ಕೋಟಿ ನೀಡಲಾಗಿದೆ. ಇದರಲ್ಲಿ ೪ ಸಮುದಾಯ ಭವನಗಳು ಹೊರ ಜಿಲ್ಲೆಗೆ ಸೇರಿದ ಹಿನ್ನೆಲೆ ಇಲ್ಲಿಗೆ ಬಿಡುಗಡೆಗೊಳಿಸಿದ ರೂ. ೪೦ ಲಕ್ಷ ಹಣವನ್ನು ಹಿಂಪಡೆಯಲು ಕ್ರಮಕ್ಕೆ ಮುಂದಾಗಲಾಗಿದೆ ಎಂದು ವಿವರಿಸಿದರು.

ತಡೆಗೋಡೆ ಒಂದೂವರೆ ತಿಂಗಳಿನಲ್ಲಿ ಪೂರ್ಣ!

ವಿವಾದಕ್ಕೆ ಕಾರಣವಾಗಿರುವ ಜಿಲ್ಲಾಡಳಿತ ಭವನದ ಎದುರಿನ ತಡೆಗೋಡೆ ಕಾಮಗಾರಿಯನ್ನು ಒಂದೂವರೆ ತಿಂಗಳಿನಲ್ಲಿ ಮುಗಿಸುವ ಗುರಿ ಹೊಂದಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರ ಸಿದ್ದೇಗೌಡ ತಿಳಿಸಿದರು. ಮಡಿಕೇರಿ ಜಿಲ್ಲಾಡಳಿತ ಭವನ ತಡೆಗೋಡೆ ಮಳೆಯಿಂದ ವಿಳಂಬವಾಗುತ್ತಿದೆ. ಇನ್ನೂ ಒಂದೂವರೆ ತಿಂಗಳಿನಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ. ರಸ್ತೆಗಳ ನಿರ್ವಹಣೆಗೆ ಇನ್ನೂ ಹಣ ಬಂದಿಲ್ಲ ಎಂದರು. ಸುಜಾ ಕುಶಾಲಪ್ಪ ಮಾತನಾಡಿ, ತಡೆಗೋಡೆ ವಿಳಂಬದ ಬಗ್ಗೆ ಆಕ್ಷೇಪಿಸಿದರು. ಲೋಕೋಪಯೋಗಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಮರ ಸಾಗಾಣಿಕೆ ನಿರ್ಬಂಧ ವಿಸ್ತರಿಸಿ

ರಸ್ತೆ ಸುರಕ್ಷತೆ ಹಿತದೃಷ್ಟಿಯಲ್ಲಿ ಮರ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಾಗಾಟ ಮಾಡುವ ಭಾರಿ ವಾಹನಗಳ ನಿರ್ಬಂಧವನ್ನು ಮೂರು ತಿಂಗಳು ವಿಸ್ತರಿಸುವಂತೆ ಸುಜಾ ಕುಶಾಲಪ್ಪ ಒತ್ತಾಯಿಸಿದರು. ರಸ್ತೆ ಬದಿಯಲ್ಲಿ ಟಿಂಬರ್ ಲೋಡ್ ಅಗುತ್ತಿದೆ. ಆದೇಶದ ಉಲ್ಲಂಘನೆ ಕಂಡುಬರುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರವಹಿಸಬೇಕು ಎಂದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಮರ ಕಡಿದವರು ಸಣ್ಣ ವಾಹನದಲ್ಲಿ ಮರ ಸಾಗಿಸಲು ವಿನಾಯಿತಿ ನೀಡಲಾಗಿದೆ. ಕಾನೂನಿನಲ್ಲಿ ಒಂದು ತಿಂಗಳಿಗೆ ಮಾತ್ರ ನಿರ್ಬಂಧ ವಿಧಿಸಲು ಅವಕಾಶವಿದೆ. ಕಾಲಾವಧಿ ಮುಗಿದ ನಂತರ ಮತ್ತೊಂದು ಆದೇಶ ಮಾಡಲೂ ಅವಕಾಶವಿದೆ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಭೂಸ್ವಾಧೀನ ಹಂತದಲ್ಲಿ

ಕುಶಾಲನಗರ-ಮೈಸೂರು ಚತುಷ್ಪಥ ರಸ್ತೆ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕುಶಾಲನಗರ-ಮೈಸೂರು ಹೆದ್ದಾರಿ ವಿಚಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿದೆ. ಕೆಲವರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಅದನ್ನೂ ಬಗೆಹರಿಸುವ ಕೆಲಸವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಸದರಿಗೆ ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ವೀಣಾ ಮಾತನಾಡಿ, ಕೊಡಗು ಜಿಲ್ಲೆಯ ೫ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದ ಸಂದರ್ಭ ರೂ. ೭.೫೦ ಕೋಟಿ ಬಿಡುಗಡೆಯಾಗಿತ್ತು. ಈ ಅನುದಾನದಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ತಾಲೂಕಿಗೆ ತಲಾ ರೂ. ೨೫ ಲಕ್ಷ, ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿಗೆ ತಲಾ ೫೫ ಲಕ್ಷದ ಅನುದಾನದವನ್ನು ಬರನಿರ್ವಹಣೆ, ಕುಡಿಯುವ ನೀರು ಸರಬರಾಜಿಗೆ ಒದಗಿಸಲಾಗಿತ್ತು ಎಂದು ವಿವರಿಸಿದರು.

ಪ್ರವಾಹ ಸಂತ್ರಸ್ತರಿಗೆ ಅಭ್ಯತ್‌ಮಂಗಲದಲ್ಲಿ ೮ ಎಕರೆ ಜಾಗ ಗುರುತಿಸಿದ್ದು, ಪ್ರಾಥಮಿಕವಾಗಿ ಜಾಗವನ್ನು ವ್ಯವಸ್ಥಿತಗೊಳಿಸಬೇಕಾಗಿದೆ. ಗ್ರಾ.ಪಂ.ನಲ್ಲಿ ಅನುದಾನ ಕೊರತೆ ಇದ್ದು, ರೂ. ೩೬ ಲಕ್ಷದ ಪ್ರಸ್ತಾವನೆ ಇದೆ. ಅದು ದೊರೆತರೆ ಕೆಲಸ ಪ್ರಾರಂಭಿಸಬಹುದು ಎಂದು ಅಧಿಕಾರಿ ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ಮಾತನಾಡಿ, ಮಳೆಯ ಕೊರತೆಯಿಂದ ೯೭೯೧ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಜಂಟಿ ಸಮೀಕ್ಷೆ ಮೂಲಕ ರೂ. ೮೩೮.೨೭ ಲಕ್ಷಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೆ ರೂ. ೫೭೧ ಲಕ್ಷ ಡಿಬಿಟಿ ಮೂಲಕ ನೇರವಾಗಿ ರೈತರಿಗೆ ಪಾವತಿಸಲಾಗಿದೆ ಎಂದರು. ಉಳಿದ ರೈತರಿಗೆ ಹಣ ಪಾವತಿಯಾಗದ ಬಗ್ಗೆ ಸಂಸದರು ಪ್ರಶ್ನಿಸಿದರು. ಕೆಲವೊಂದು ಪ್ರಕರಣಗಳು ದಾಖಲೆಗಳನ್ನು ಒದಗಿಸಿಲ್ಲ. ಜೊತೆಗೆ ತಾಂತ್ರಿಕ ಸಮಸ್ಯೆಯೂ ಕಂಡುಬAದಿದೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ಫಸಲು ಭೀಮಾ ಯೋಜನೆಗೆ ಕೃಷಿಕರು ಆಸಕ್ತಿ ಕಡಿಮೆ ಇದೆ. ಕೆಲವೊಂದು ತಾಂತ್ರಿಕ ತೊಂದರೆ ಇದಕ್ಕೆ ಕಾರಣವಾಗಿದೆ. ವಿಮೆ ದರ ಹೆಚ್ಚಿದ್ದು, ಇದು ಕಡಿಮೆಗೊಂಡರೆ ಉತ್ತಮ. ಈ ನಿಟ್ಟಿನಲ್ಲಿ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಂಸದರಿಗೆ ತಿಳಿಸಿದರು.

೧೨೫ ಡೆಂಗ್ಯೂ ಪ್ರಕರಣಗಳು

ಜಿಲ್ಲೆಯಲ್ಲಿ ೧೨೫ ಡೆಂಗ್ಯೂ ಪ್ರಕರಣಗಳು ಇದುವರೆಗೂ ವರದಿಯಾಗಿವೆ. ಲಾರ್ವ ನಾಶ ಕೆಲಸ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ತಿಳಿಸಿದರು.

ಪಾಲಿಬೆಟ್ಟಕ್ಕೆ ಒಂದು ಆ್ಯಂಬ್ಯುಲೆನ್ಸ್ ನೀಡಲಾಗಿದೆ. ಜಿಲ್ಲೆಯಲ್ಲಿ ೪೫ ತಜ್ಞವೈದ್ಯರ ಪೈಕಿ ೨೯ ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಆಧಾರದಲ್ಲಿ ಆರೋಗ್ಯಾಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದರು.

ಬುಡಕಟ್ಟು ಜನ ವಾಸಿಸುವವರಿಗೆ ಆರೋಗ್ಯ ಸೇವೆ ಯಾವ ರೀತಿ ದೊರೆಯುತ್ತಿದೆ ಎಂದು ಸಂಸದರು ಪ್ರಶ್ನಿಸಿದರು.

ಸಂಚಾರಿ ಆರೋಗ್ಯ ಸೇವೆ ವಾಹನ ಕೊರತೆ ಇದೆ. ಕಳೆದ ವರ್ಷದಿಂದ ಹಾಡಿಗಳಿಗೆ ತೆರಳಲು ಕಷ್ಟವಾಗಿದೆ. ಆದರೂ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ಡಾ. ಸತೀಶ್ ತಿಳಿಸಿದರು.

ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆಯಾಗಿದ್ದು, ವಿತರಣೆಗೆ ಕ್ರಮವಹಿಸಲಾಗುವುದು. ಪಠ್ಯಪುಸ್ತಕಗಳು ವಿತರಣೆಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪನಿರ್ದೇಶಕ ರಂಗಧಾಮಪ್ಪ ಸಭೆಗೆ ತಿಳಿಸಿದರು. ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡ ಸಮೀಕ್ಷೆ ನಡೆಯುತ್ತಿದೆ. ರೂ. ೮೦ ಲಕ್ಷದ ಅನುದಾನವೂ ಇದೆ ಎಂದು ಮಾಹಿತಿ ನೀಡಿದರು.

ಸ್ವಚ್ಛ ಭಾರತ್ ಮಿಷನ್ ಅಡಿ ೯೫ ಗ್ರಾ.ಪಂ.ನಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲಾಗಿದೆ ಉಳಿದ ಕಡೆಗಳಲ್ಲಿ ತಾತ್ಕಾಲಿಕವಾಗಿ ಹಳೇ ಕಟ್ಟಡಗಳನ್ನು ಗುರುತಿಸಿ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸಲಾಗಿದೆ ಎಂದು ಯೋಜನಾಧಿಕಾರಿ ತಿಳಿಸಿದರು. ಬಿಟ್ಟಂಗಾಲ ಹಾಗೂ ಗುಡ್ಡೆಹೊಸೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ನೋಡೆಲ್ ಅಧಿಕಾರಿ ಹರ್ಷಿತ ತಿಳಿಸಿದರು.

ರಸ್ತೆ ಬದಿಗಳಲ್ಲಿ ಕಸ ಹೆಚ್ಚಾಗುತ್ತಿದೆ. ಪ್ರವಾಸಿಗರಿಂದ ಅತೀ ಹೆಚ್ಚು ಕಸ ಉದ್ಭವವಾಗುತ್ತಿದೆ ಎಂದು ತಿಳಿಸಿದ ಸುಜಾ ಕುಶಾಲಪ್ಪ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ. ರಸ್ತೆ ಬದಿಯ ೨ ಕಡೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಾರದು. ೧೫ ದಿನಕ್ಕೊಮ್ಮೆ ಬದಿಯಲ್ಲಿ ನಿಲುಗಡೆಯಲ್ಲಿ ಬದಲಾವಣೆ ಮಾಡಬೇಕೆಂದರು.

ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಾಗ ಗುರುತಿಸಿ ವ್ಯವಸ್ಥೆ ಮಾಡಬೇಕು. ವಾಹನ ನಿಲುಗಡೆ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದರು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.