ಸೋಮವಾರಪೇಟೆ, ಜು. ೧೧: ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಅವರುಗಳನ್ನು ತಕ್ಷಣ ವರ್ಗಾವಣೆ ಮಾಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಪAಚಾಯಿತಿ ಅಧ್ಯಕ್ಷೆ ಸಿ.ಎಸ್. ಗೀತಾ ಅವರ ಅಧ್ಯಕ್ಷತೆಯಲ್ಲಿ, ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳಿಗೆ ನಿರ್ಣಯ ಸಲ್ಲಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲು ತೀರ್ಮಾನಿಸಲಾಯಿತು.

ಕಳೆದ ಜೂನ್ ೧೯ರಂದು ಮಧ್ಯಾಹ್ನ ೨.೩೦ರಿಂದ ೩ ಗಂಟೆಯವರೆಗೆ ಗ್ರಾಮ ಪಂಚಾಯಿತಿ ಕಚೇರಿಯ ಸಿ.ಸಿ. ಕ್ಯಾಮೆರಾವನ್ನು ಸ್ಥಗಿತಗೊಳಿಸಿದ್ದು, ಈ ಸಮಯದಲ್ಲಿ ಪಂಚಾಯಿತಿಯೊಳಗೆ ನಡೆದಿರುವ ಘಟನೆಗಳ ಬಗ್ಗೆ ತನಿಖೆ ನಡೆಸುವಂತೆ ಸದಸ್ಯ ಪಿ.ಎಂ. ಗಣಪತಿ ಅವರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಈ ವಿಷಯದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು, ಅಂತಿಮವಾಗಿ ಪಿಡಿಓ ಮತ್ತು ಕಂಪ್ಯೂಟರ್ ಆಪರೇಟರನ್ನು ಚೌಡ್ಲು ಗ್ರಾಮ ಪಂಚಾಯಿತಿಯಿAದ ವರ್ಗಾವಣೆ ಮಾಡುವಂತೆ ಎಲ್ಲಾ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಗೂ ಮುನ್ನ ಪಿಡಿಓ ಅವರು ಆಗಮಿಸಿದರೆ ನಾವುಗಳು ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಕೆಲ ಸದಸ್ಯರು ಎಚ್ಚರಿಕೆ ನೀಡಿದ್ದರಿಂದ, ಪಿಡಿಓ ಅನುಪಸ್ಥಿತಿಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭಾಂಗಣದ ಪಕ್ಕದ ಕೊಠಡಿಯಲ್ಲಿ ಪಿಡಿಓ ಇದ್ದರೂ ಸಹ ಸಭೆಯ ಸಭಾಂಗಣದೊಳಗೆ ಬರಲು ಅವಕಾಶ ನೀಡಲಿಲ್ಲ.

ಸಭೆಯಲ್ಲಿ ಸದಸ್ಯ ಗಣಪತಿ ಅವರು ಮಾತನಾಡಿ, ತಾ. ೧೯ರಂದು ಮಧ್ಯಾಹ್ನ ಗ್ರಾ.ಪಂ. ಕಚೇರಿಯಲ್ಲಿನ ಸಿ.ಸಿ. ಕ್ಯಾಮೆರಾ ಆಫ್ ಮಾಡಲಾಗಿದ್ದು, ಈ ಸಮಯದಲ್ಲಿ ಕಚೇರಿಯೊಳಗೆ ಏನು ನಡೆದಿದೆ? ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಇದಾದ ನಂತರ ಹಲವು ಮಾತುಗಳು ಕೇಳಿಬಂದಿದ್ದು, ಸದಸ್ಯರು ಪ್ರಕರಣ ಮುಚ್ಚಿ ಹಾಕಲು ಹಣ ಪಡೆದಿದ್ದಾರೆ ಎಂಬಿತ್ಯಾದಿ ಆರೋಪಗಳು ವ್ಯಕ್ತಗೊಂಡಿವೆ. ಈ ಹಿನ್ನೆಲೆ ಘಟನೆಯ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.

ಈ ಮಧ್ಯೆ ಮಹಿಳಾ ಸಿಬ್ಬಂದಿ ಮಾತನಾಡಿದ್ದು, ಸಿ.ಸಿ.ಕ್ಯಾಮೆರಾ ಆಫ್ ಮಾಡಿರುವುದು ಇದೇ ಫಸ್ಟ್ ಟೈಂ ಅಲ್ಲ ಎಂದಿದ್ದಾರೆ. ತಾನು ಮಾಡಿದ ‘ಮುತ್ತಿನ ಕೃತ್ಯ’ವನ್ನು ಸ್ವತಃ ಪಿಡಿಓ ಅವರೂ ಒಪ್ಪಿಕೊಂಡಿದ್ದಾರೆ. ಕಚೇರಿಯ ಸಿ.ಸಿ. ಕ್ಯಾಮೆರಾ ಆಫ್ ಮಾಡಿ ಇಂತಹ ಕೆಲಸ ಮಾಡುವುದು ಎಷ್ಟು ಸರಿ? ಪಂಚಾಯಿತಿಯಲ್ಲಿ ಇತರ ಮಹಿಳಾ ಸಿಬ್ಬಂದಿಗಳು ಇದ್ದಾರೆ. ಮಹಿಳಾ ಸದಸ್ಯರೂ ಇದ್ದಾರೆ. ಸಾರ್ವಜನಿಕರೂ ಕಚೇರಿಗೆ ಬರುತ್ತಿರುತ್ತಾರೆ. ಈ ಹಿನ್ನೆಲೆ ಸಂಬAಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದರು. ಅಂತಿಮವಾಗಿ ಗ್ರಾ.ಪಂ. ಪಿಡಿಓ ಮತ್ತು ಕಂಪ್ಯೂಟರ್ ಆಪರೇಟ್ ಮಾಡುವ ಮಹಿಳಾ ಸಿಬ್ಬಂದಿಯನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ, ಸದಸ್ಯರುಗಳಾದ ಎಂ.ಬಿ. ವಿಶ್ವನಾಥ, ಸುರೇಶ್ ಶೆಟ್ಟಿ, ಎಸ್.ಐ. ಚೇತನ್, ಎಂ.ಜೆ. ಪ್ರವೀಣ್‌ಕುಮಾರ್, ಆಶಾ ಯೋಗೇಂದ್ರ, ಕೆ.ಎಸ್. ದಿವ್ಯ, ಸಿ.ಎನ್. ಜ್ಯೋತಿ, ಭವಾನಿ, ಪಿ.ಎಂ. ಗಣಪತಿ, ವಿ.ಎಸ್. ಜಯಲಕ್ಷಿö್ಮÃ, ಎ.ಎಸ್. ಸತ್ಯಾ, ಎನ್.ಟಿ. ಪರಮೇಶ್ ಅವರುಗಳು ಉಪಸ್ಥಿತರಿದ್ದರು. ಸಿ.ಸಿ. ಕ್ಯಾಮೆರಾ ಆಫ್ ಮಾಡಿದ ಘಟನೆಯ ಬಗ್ಗೆ ತಾ. ೧ರ ‘ಶಕ್ತಿ’ಯಲ್ಲಿ ‘ಗ್ರಾ.ಪಂ. ಕಚೇರಿಯೊಳಗೆ ನಡೆಯಿತೇ ಒಂದು ಮುತ್ತಿನ ಕಥೆ’ ಶಿರೋನಾಮೆಯಡಿ ವರದಿ ಪ್ರಕಟಗೊಂಡಿತ್ತು. ಇದಾದ ನಂತರ ಹಲವಷ್ಟು ಬೆಳವಣಿಗೆಗಳು ನಡೆದು, ಇಂದು ಈರ್ವರನ್ನು ವರ್ಗಾವಣೆ ಮಾಡುವ ನಿರ್ಣಯವನ್ನು ಗ್ರಾ.ಪಂ. ಅಂಗೀಕರಿಸುವ ಮೂಲಕ ಪ್ರಕರಣಕ್ಕೆ ಅಲ್ಪ ವಿರಾಮ ಬಿದ್ದಿದೆ. ಜಿಲ್ಲಾಧಿಕಾರಿಗಳ ಅಂಗಳದಲ್ಲಿರುವ ದೂರು-ಇನ್ನೇನಾಗಲಿದೆಯೋ ಕಾದು ನೋಡಬೇಕಿದೆ. -ಸತ್ಯದೇವ್