ಸೋಮವಾರಪೇಟೆ, ಜು.೧೧: ಪಟ್ಟಣದ ವಿವೇಕ ಜಾಗೃತ ಬಳಗದ ವತಿಯಿಂದ ತಾ.೧೩ರಂದು ಮಡಿಕೇರಿ ರಸ್ತೆಯ ಮಾನಸ ಹಾಲ್‌ನಲ್ಲಿ ಸಂಜೆ ೪ಗಂಟೆಯಿAದ ೬ಗಂಟೆಯವರೆಗೆ ಶುಭ ಚಿಂತನ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ಹಿರಿಯ ಅಧಿಕಾರಿ ಕೆ.ಮೋನಪ್ಪ ನಾಯ್ಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ವಿಕಸನ ಬಗ್ಗೆ ಚಿಂತಕರು ಹಾಗೂ ಡಿವೈನ್ ಪಾರ್ಕ್ ನ ಹಿರಿಯ ಅಧಿಕಾರಿ ರಾಜೇಶ್ ನಾಯರ್ ಹಾಗು ಸೀತಾಶ್ರೀ ಯುವಶಕ್ತಿ ಬಳಗದ ದಿವ್ಯ ಹವ್ಯಾಸ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದರು. ಜಂಜಾಟದ ಬದುಕಿನಲ್ಲಿ ಕೇವಲ ಸ್ವಾರ್ಥತೆ, ದ್ವೇಷ, ಸಂಕು ಚಿತಗಳೇ ಸಮಾಜದಲ್ಲಿ ಹೆಡೆಯಾ ಡುತ್ತಿವೆ. ಬದುಕಿನಲ್ಲಿ ಮನಃಶಾಂತಿ ಬೇಕಾಗಿದೆ. ಅಧ್ಯಾತ್ಮಿಕ ಚಿಂತನೆಯಿAದ ಮನಃಶಾಂತಿ ಪಡೆಯಬಹುದು ಎಂಬುದು ಚಿಂತನಾ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಜನೆ, ಶುಭಚಿಂತನೆ ನಡೆಯಲಿದೆ ಎಂದರು.

ಉಡುಪಿಯಲ್ಲಿ ವೀರ ವೇದಾಂತಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಅಧ್ಯಾತ್ಮಿಕ ಪ್ರಯೋಗಶಾಲೆ ಡಿವೈನ್ ಪಾರ್ಕ್ ಕಳೆದ ೩೮ ವರ್ಷಗಳ ಹಿಂದೆ ಪ್ರಾರಂಭಿಸಿದ ಡಾ.ಎ.ಚಂದ್ರಶೇಖರ ಉಡುಪ ಅವರು ಅಧ್ಯಾತ್ಮಿಕ ಚಿಂತನೆ ಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ. ನೂರಾರು ವಿವೇಕ ಜಾಗೃತಿ ದಳವನ್ನು ಪ್ರಾರಂಭಿಸಿ, ಚಿಂತನ, ಮಂಥನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಬಸವರಾಜ್, ನಾಗರಾಜ್, ರಾಮಶೆಟ್ಟಿ ಇದ್ದರು.