ಸುಂಟಿಕೊಪ್ಪ, ಜು. ೧೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಗುಡ್ಡೆಹೊಸೂರು ವಲಯದ ೭ನೇ ಹೊಸಕೋಟೆ ಕಾರ್ಯಕ್ಷೇತ್ರದ ಯೋಜನೆಯ ವತಿಯಿಂದ ಪರಿಸರ ಮಾಹಿತಿ ಹಾಗೂ ಜಾಗೃತಿ ಹಾಗೂ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ೭ನೇ ಹೊಸಕೋಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆಸಲಾಯಿತು. ಸಮಾರಂಭವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಲೀಲಾವತಿ ಉದ್ಘಾಟಿಸಿ ಮಾತನಾಡಿ, ಇಂದಿನ ಪೀಳಿಗೆ ಪರಿಸರವನ್ನು ಹಾನಿ ಮಾಡದೆ ಮುಂದಿನ ಪೀಳಿಗೆಗೆ ಬೆಳೆಸಬೇಕಾಗಿದೆ ಎಂದರು.

೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಓ. ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ಸಮಾರಂಭದಲ್ಲಿ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ೭ನೇ ಹೊಸಕೋಟೆ ಒಕ್ಕೂಟದ ಅಧ್ಯಕ್ಷ ಕೌಶಲ್ಯ, ಅರಣ್ಯ ಇಲಾಖೆಯ ಅಧಿಕಾರಿ ದೇವಯ್ಯ, ಕೂಡಿಗೆ ಡಯಟ್ ಉಪನ್ಯಾಸಕ ಜಗದೀಶ್, ಪ್ರೌಢಶಾಲಾ ಶಿಕ್ಷಕಿ ರಜಿಯಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಿನ್ನಪ್ಪ, ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್, ಗುಡ್ಡೆಹೊಸೂರು ವಲಯದ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ದಾಸಂಡ ರಮೇಶ್, ವಲಯದ ಮೇಲ್ವಿಚಾರಕ ಯತೀಶ್, ಕೃಷಿ ಮೇಲ್ವಿಚಾರಕ ರಾಜಣ್ಣ, ಸೇವಾ ಪ್ರತಿನಿಧಿ ನಿರ್ಮಲ ಪ್ರಕಾಶ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು, ೭ನೇ ಹೊಸಕೋಟೆ ಒಕ್ಕೂಟದ ಸ್ವ ಸ್ವಹಾಯ ಸಂಘದ ಸದಸ್ಯರು, ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು. ಇದೇ ಸಂದರ್ಭ ೭ನೇ ಹೊಸಕೋಟೆ ಗ್ರಾಮದ ಕೆರೆ ದಡದಲ್ಲಿ ಸುಮಾರು ೮೦ ಗಿಡ, ಹೆದ್ದಾರಿ ಬದಿಯಲ್ಲಿ ೧೦ ಗಿಡಗಳನ್ನು, ಸುಮಾರು ೩೦ ಗಿಡಗಳನ್ನು ಶಾಲೆಯ ಹೊರ ಭಾಗದ ಕಾಂಪೌAಡ್ ಬಳಿ ನೆಡಲಾಯಿತು.

ಈ ಸಂದರ್ಭ ಘಟಕದ ಸ್ವಯಂ ಸೇವಕರುಗಳಾದ ರಾಜ, ಪ್ರಕಾಶ್, ವಸಂತ್ ಕುಮಾರ್, ಪ್ರಶಾಂತ್, ಪುರುಷೋತ್ತಮ್, ಕವಿತ, ಮಂಜುಳಾ, ಉಷಾ, ಹೇಮಾವತಿ, ನಿರ್ಮಲ ಪ್ರಕಾಶ್ ಉಪಸ್ಥಿತರಿದ್ದರು.