ವರದಿ : ಚಂದ್ರಮೋಹನ್

ಕುಶಾಲನಗರ, ಜು. ೧೧: ಸರಕಾರಿ ಆಸ್ತಿಯನ್ನು ಸಂರಕ್ಷಣೆ ಮಾಡುವುದರೊಂದಿಗೆ ಕುಶಾಲನಗರದ ಮುಂದಿನ ೩ ದಶಕಗಳ ದೂರದೃಷ್ಟಿಯನ್ನು ಇಟ್ಟುಕೊಂಡು ಯೋಜನಾ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ಕೆ ನೀಲಿನಕ್ಷೆ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ಹೇಳಿದ್ದಾರೆ.

ಅವರು ‘ಶಕ್ತಿ’ಯೊಂದಿಗೆ ಮುಂದಿನ ಯೋಜನೆಗಳ ಬಗ್ಗೆ ವಿವರ ಒದಗಿಸಿದ್ದು, ತಮ್ಮ ಅಧಿಕಾರ ಅವಧಿಯಲ್ಲಿ ಕುಶಾಲನಗರದಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಬಡವರಿಗೆ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿ ಮನೆ ಇಲ್ಲದವರಿಗೆ ಮನೆ ನೀಡುವ ಬಗ್ಗೆ ಪುರಸಭೆಯಿಂದ ಹಾಗೂ ಯೋಜನಾ ಪ್ರಾಧಿಕಾರದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕ್ರಿಯಾಯೋಜನೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

ಕುಶಾಲನಗರ ಹಳೆಯ ಮಾರುಕಟ್ಟೆ ಬಳಿ ಇರುವ ಚಿಕ್ಕಣ್ಣ ಲೇಔಟ್ ಸಮೀಪದಲ್ಲಿ ಸರ್ವೆ ನಂಬರ್ ೧೬೫ ರಲ್ಲಿರುವ ೧.೮೫ ಎಕರೆ ಜಾಗ ಮೀಸಲಿಡಲಾಗಿದೆ. ಪ್ರಸಕ್ತ ಪ್ರಕರಣ ಒಂದು ನ್ಯಾಯಾಲಯದಲ್ಲಿ ಇರುವ ಕಾರಣ ವಿಳಂಬವಾಗುತ್ತಿದೆ ಎಂದರು.

ಯೋಜನಾ ಪ್ರಾಧಿಕಾರದ ಮೂಲಕ ಕುಶಾಲನಗರದ ಐತಿಹಾಸಿಕ ತಾವರೆಕೆರೆಯ ಅಭಿವೃದ್ಧಿಗೆ ಈಗಾಗಲೇ ನೀಲಿ ನಕ್ಷೆ ತಯಾರಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಕಾರ್ಯಯೋಜನೆ ಸಿದ್ಧವಾಗಲಿದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕೆರೆಗಳಾದ ಸೋಮದೇವನಕೆರೆ, ರೊಂಡ ಕೆರೆ, ಕಾಟಿಕೆರೆ ಹಾಗೂ ನದಿ ಸಂರಕ್ಷಣೆಯ ಸಂಬAಧ ಈಗಾಗಲೇ ಕ್ರಿಯಾ ಯೋಜನೆಗಳು ರೂಪುಗೊಂಡಿವೆ ಎಂದು ಮಾಹಿತಿ ಒದಗಿಸಿದರು.

ನದಿ ತಟಗಳಲ್ಲಿ ನಿಯಮಾನುಸಾರ ಬಫರ್ ಜೋನ್ ಅಭಿವೃದ್ಧಿ ನಿಟ್ಟಿನಲ್ಲಿ ಸಂಬAಧಿಸಿದ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. ಕಾಲಕಾಲಕ್ಕೆ ಯೋಜನಾ ಪ್ರಾಧಿಕಾರದ ಅಧಿಕಾರಿಗಳು

(ಮೊದಲ ಪುಟದಿಂದ) ಮತ್ತು ನಿರ್ದೇಶಕರೊಂದಿಗೆ ಸಭೆ ಕರೆದು ಅಗತ್ಯವಿರುವ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವುದು ಮತ್ತು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ತಗ್ಗು ಪ್ರದೇಶಗಳಿಗೆ ಅಕ್ರಮವಾಗಿ ಮಣ್ಣು ತುಂಬಿಸಿ ಬಡಾವಣೆಗಳ ನಿರ್ಮಾಣದ ನಾಗರಿಕರಿಗೆ ಸಮಸ್ಯೆ ಉಂಟು ಮಾಡುತ್ತಿರುವ ಬಗ್ಗೆ ಈಗಾಗಲೇ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ಪ್ರಸಕ್ತ ಇರುವ ಬಡಾವಣೆಗಳನ್ನು ನಿಯಮಾನುಸಾರ ನಿರ್ಮಾಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಪ್ರಮೋದ್ ಮುತ್ತಪ್ಪ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಅಂದರೆ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ ರಚನೆಗೊಂಡಿರುವ ಬಡಾವಣೆಗಳ ಬಗ್ಗೆ ಈಗಾಗಲೇ ಪಟ್ಟಿ ತಯಾರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಚ್ಛ ನಗರ ಹಾಗೂ ಸ್ವಚ್ಛ ಕಾವೇರಿ ಗುರಿ ಹೊಂದಿ ನಿರ್ಮಾಣಗೊಳ್ಳುತ್ತಿರುವ ಕುಶಾಲನಗರ ಒಳಚರಂಡಿ ಯೋಜನೆಯ ಪ್ರಥಮ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಮುಖ್ಯರಸ್ತೆಯಲ್ಲಿ ಕೆಲವು ಕಾಮಗಾರಿಗಳು ಬಾಕಿಯಾಗಿದ್ದು, ಆದಷ್ಟು ಬೇಗ ಉಳಿದ ಕೆಲಸಗಳನ್ನು ಪೂರ್ಣಗೊಳಿಸಿ ಪಟ್ಟಣದ ಯುಜಿಡಿಗೆ ಚಾಲನೆ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಯೋಜನಾ ಪ್ರಾಧಿಕಾರ ೨೦೦೮ರ ನಂತರ ಅಸ್ತಿತ್ವಕ್ಕೆ ಬಂದಿದ್ದು, ೧೬ ಬಡಾವಣೆಗಳ ನಿರ್ಮಾಣ ಕಾರ್ಯ ಅಂತಿಮಗೊAಡಿದೆ. ಸುಮಾರು ೧೧ ಬಡಾವಣೆಗಳು ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದು ಪ್ರಮೋದ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಬಡಾವಣೆ ನಿರ್ಮಾಣ ಸಂದರ್ಭ ಸರಕಾರದ ಎಲ್ಲಾ ನೀತಿ ನಿಯಮಗಳನ್ನು ಪಾಲಿಸುವ ಸಂಬAಧ ಒತ್ತು ನೀಡಲಾಗುತ್ತದೆ. ಸಿ ಎ ನಿವೇಶನ ಉದ್ಯಾನವನ ಮತ್ತು ಸರಕಾರಿ ಆಸ್ತಿಗಳ ಸಂರಕ್ಷಣೆಗೆ ಪುರಸಭಾ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಭಾಗ- ಕೂಡ್ಲೂರು ಕೈಗಾರಿಕಾ ಬಡಾವಣೆ ವ್ಯಾಪ್ತಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತಿದ್ದು, ಬಡಾವಣೆಗಳ ನಿರ್ಮಾಣ ಸಂದರ್ಭ ಮಾಲೀಕರು ಸರಕಾರದ ಎಲ್ಲಾ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಮೋದ್ ಮುತ್ತಪ್ಪ ಕೋರಿದ್ದಾರೆ.

ಕುಶಾಲನಗರ ಯೋಜನಾ ಪ್ರಾಧಿಕಾರದ ಕಚೇರಿ ಕಟ್ಟಡ ಗುಂಡುರಾವ್ ಬಡಾವಣೆಯಲ್ಲಿ ನಿರ್ಮಿಸಲು ಈಗಾಗಲೇ ಚಿಂತನೆ ಹರಿಸಲಾಗಿದೆ.

ಬಡಾವಣೆಯಲ್ಲಿ ಈಗಾಗಲೆ ಭಾಗಶಃ ನಿರ್ಮಾಣಗೊಂಡಿರುವ ಪೊಲೀಸ್ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಯೋಜನಾ ಪ್ರಾಧಿಕಾರ ಕಚೇರಿ ನಿರ್ಮಾಣಕ್ಕೆ ಚರ್ಚೆಗಳು ನಡೆದಿವೆೆ. ಪೊಲೀಸ್ ಇಲಾಖೆಗೆ ಕುಶಾಲನಗರ ಪಟ್ಟಣದ ಚಿಕ್ಕಣ್ಣ ಲೇಔಟ್ ಸಮೀಪ ಇರುವ ಸಿಎ ನಿವೇಶನ ನೀಡಲು ಕೂಡ ಚರ್ಚೆ ಆಗಿದೆ ಎಂದು ಹೇಳಿದರು.

ಯೋಜನಾ ಪ್ರಾಧಿಕಾರದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಈ ಬಗ್ಗೆ ನೇಮಕಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿರುವ ಪ್ರಮೋದ್ ಮುತ್ತಪ್ಪ, ತನ್ನ ಅಧಿಕಾರ ಅವಧಿಯಲ್ಲಿ ಅಧಿಕಾರಿಗಳು ಮತ್ತು ಸಮಿತಿ ನಿರ್ದೇಶಕರ ಮೂಲಕ ಯೋಜನಾ ವ್ಯಾಪ್ತಿಯ ಅಭಿವೃದ್ಧಿ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕೋರಿದ್ದಾರೆ.