ವೀರಾಜಪೇಟೆ, ಜು. ೧೨: ಅಂರ‍್ರಾಷ್ಟಿçÃಯ ಚಿತ್ರ ಕಲಾವಿದೆ ಆಶಾ ಮಂದಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.

ಮೂಲತಃ ವೀರಾಜಪೇಟೆಯವರಾದ ಆಶಾ ಮಂದಪ್ಪ ದಿ. ಬಿದ್ದಂಡ ಕರ್ನಲ್ ಚಂಗಪ್ಪ ಅವರ ಸೊಸೆಯಾಗಿದ್ದು, ಚಿತ್ರ ಕಲಾವಿದೆಯಾಗಿ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರು.

ಇತ್ತೀಚಿಗೆ ದೈವಾಧೀನರಾದ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ವೀರಾಜಪೇಟೆಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಆಯೋಜಕರು ಹಾಗೂ ವಕೀಲ ಎಸ್.ಆರ್. ಜಗದೀಶ್ ಅವರು ಸಂತಾಪ ಸೂಚಿಸಿ, ಆಶಾ ಮಂದಪ್ಪ ಅವರು ಚಿತ್ರ ಕಲಾವಿದೆಯಾಗಿ ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕೊಡಗು ಸಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿ.ಎಂ. ಪೂಣಚ್ಚ ಅವರ ಮಗ ಸಿ.ಪಿ. ಬೆಳ್ಳಿಯಪ್ಪ ಮಾತನಾಡಿ, ಆಶಾ ಮಂದಪ್ಪ ಅವರು ಬಹುಮುಖ ಪ್ರತಿಭೆಯಾಗಿದ್ದು, ಅವರು ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಅವರ ಉಪಸ್ಥಿತಿ ಎದ್ದು ಕಾಣುತ್ತಿತ್ತು. ಜನರನ್ನು ತಮ್ಮ ಪ್ರತಿಭೆಯಿಂದಲೇ ಆಕರ್ಷಸುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ವೀರಾಜಪೇಟೆಯ ಸಾಧಿಕ್ ಆರ್ಟ್ಸ್ನ ಸಾಧಿಕ್ ಮತ್ತು ವೈದ್ಯೆ ಫಾತಿಮಾ ಕಾರ್ಯಪ್ಪ ಮಾತನಾಡಿದರು. ಆಶಾ ಮಂದಪ್ಪ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಈ ಸಂದರ್ಭ ದಿ. ಆಶಾ ಮಂದಪ್ಪ ಅವರ ಚಿತ್ರ, ಕಲಾಕೃತಿಗಳ ಸಾಕ್ಷ÷್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ನಂದಕುಮಾರ್ ಮಂದಪ್ಪ, ಮಗ ಶಿವು ಮಂದಪ್ಪ, ಸೊಸೆ ಸರೋಜ, ವಕೀಲ ಬಿ.ಬಿ. ಮಾದಪ್ಪ, ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.