ವೀರಾಜಪೇಟೆ, ಜು. ೧೨: ಶಿಕ್ಷಕನ ಒಳಗೊಬ್ಬ ನಟನಿರುತ್ತಾನೆ. ಅದು ಅವನ ಅಭಿನಯದ ಮೂಲಕ ವಿದ್ಯಾರ್ಥಿಗಳನ್ನು ಮುಟ್ಟಿದಾಗ ಬೋಧನಾ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ ಎಂದು ನಾಟಕಗಾರ, ರಂಗಕರ್ಮಿ, ನೀನಾಸಂ ಕಲಾವಿದ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲೆ ಮತ್ತು ನಾಟಕಕ್ಕೆ ಸಂಬAಧಿಸಿದAತೆ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಜೀವನ್ ರಾಂ ಸುಳ್ಯ ಅಭಿನಂiÀiದ ನಾಲ್ಕು ಅಂಶಗಳಾದ ಆಂಗಿಕ, ವಾಚಿಕ, ಆಹರ‍್ಯ ಮತ್ತು ಸಾತ್ವಿಕದ ಬಗ್ಗೆ ತನ್ನ ಅಭಿನಯ, ಕತೆ, ಹಾಸ್ಯ ಮತ್ತು ನೃತ್ಯದ ಮೂಲಕ ವಿದ್ಯಾರ್ಥಿ ಶಿಕ್ಷಕರಿಗೆ ತಿಳಿಹೇಳುತ್ತಾ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಎಲ್ಲಾ ವಿದ್ಯಾರ್ಥಿ, ಶಿಕ್ಷಕರೂ ಈ ಎಲ್ಲಾ ಪ್ರಕಾರಗಳ ಅಭಿನಯದಲ್ಲಿ ತೊಡಗಿಸಿಕೊಂಡರು. ಕೊನೆಯ ಹಂತದಲ್ಲಿ ಅವರು ನಡೆಸಿಕೊಟ್ಟ ಜಾದು ಹಾಗೂ ಅದರ ಹಿಂದಿನ ಕೌಶಲ್ಯ ಹಾಗೂ ವೈಜ್ಞಾನಿಕತೆ ಎಲ್ಲಾರನ್ನೂ ಬೆರಗುಗೊಳಿಸಿತು.

ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ವಾಣಿ ಎಂ., ಕಲೆ ಮತ್ತು ನಾಟಕ ವಿಭಾಗದ ಸಂಚಾಲಕಿ ಸುಜಾತ ಆರ್. ಹಾಗೂ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿ, ಶಿಕ್ಷಕರು ಪಾಲ್ಗೊಂಡಿದ್ದರು.