ಇತ್ತೀಚಿನ ದಿನಗಳಲ್ಲಿ ಅಪರಿಚತರು ನಿಮ್ಮ ಫೋನ್‌ಗಳಿಗೆ ಕರೆ ಮಾಡುವುದು, ವಾಟ್ಸಾö್ಯಪ್ ಮೂಲಕ ಸಂದೇಶ ಕಳುಹಿಸುವುದು, ವಿವಿಧ ಗ್ರೂಪ್‌ಗಳಿಗೆ ನಿಮ್ಮ ಅನುಮತಿಯಿಲ್ಲದೆಯೇ ಸೇರಿಸುವ ಮೂಲಕ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಿ ಬ್ಯಾಂಕ್‌ನಿAದ ಹಣ ದೋಚುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ವಿವಿಧ ಬ್ಯಾಂಕುಗಳು ಆರ್.ಬಿ.ಐ ಸಹಕಾರದಿಂದ ಈಗಾಗಲೇ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಹೆಚ್ಚುವರಿಯಾಗಿ ಗ್ರಾಹಕರಾದ ನಾವು ಕೂಡ ಎಚ್ಚರವಹಿಸುವುದು ಅಗತ್ಯವಿದೆ. ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಹೊಂದಿರುವ ಬಹುತೇಕ ಮಂದಿ ಬಳಸುವ ವಾಟ್ಸಾö್ಯಪ್‌ನಲ್ಲಿನ ಕೆಲವು ಭದ್ರತಾ ಸೆಟ್ಟಿಂಗ್ಸ್ಗಳನ್ನು ಈ ಕೆಳಗಿನಂತೆ ಬದಲಾಯಿಸುವುದು ಒಳಿತು.

ವಾಟ್ಸಾö್ಯಪ್‌ಅನ್ನು ತೆರಯುವಾಗ ಮೇಲಿನ ಬಲದ ಮೂಲೆಯಲ್ಲಿರುವ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ. ನಂತರ ಪ್ರೆöÊವೆಸಿ ಸೆಟ್ಟಿಂಗ್ಸ್, ಬಳಿಕ ಗ್ರೂಪ್ಸ್ ಎಂಬ ಆಯ್ಕೆಯನ್ನು ಒತ್ತಿದರೆ, ನಿಮ್ಮನ್ನು ಅಪರಿಚಿತರು ಗ್ರೂಪ್‌ಗಳಿಗೆ ಸೇರಿಸುವುದನ್ನು ನಿಲ್ಲಿಸಬಹುದಾಗಿದೆ. ‘ಮೈ ಕಾಂಟ್ಯಾಕ್ಟ್÷್ಸ’ ಆಯ್ಕೆಯನ್ನು ಒತ್ತಿದಲ್ಲಿ, ನೀವು ಯಾರ ಫೋನ್ ಸಂಖ್ಯೆಯನ್ನು ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿದ್ದೀರ, ಅವರುಗಳು ಮಾತ್ರ ನಿಮ್ಮನ್ನು ಗ್ರೂಪ್‌ಗೆ ಸೇರಿಸುವಂತೆ ಮಾಡಬಹುದಾಗಿದೆ ಹಾಗೂ ಮತ್ತೊಂದು ಆಯ್ಕೆಯಲ್ಲಿ ‘ಮೈ ಕಾಂಟ್ಯಾಕ್ಟ್÷್ಸ ಎಕ್ಸ್ಎಪ್ಟ್...’ ಅನ್ನು ಬಳಸಿದಲ್ಲಿ ನಿಮ್ಮ ಕಾಂಟ್ಯಾಕ್ಟ್÷್ಸನಲ್ಲಿರುವವರೂ ನಿಮ್ಮನ್ನು ಗ್ರೂಪ್‌ಗೆ ಹಾಕದಿರುವಂತೆ ನಿಯಂತ್ರಿಸಬಹುದಾಗಿದೆ. ಇತ್ತೀಚೆಗೆ ಬಹುತೇಕ ಆನ್‌ಲೈನ್ ವಂಚಕರು ಮೊದಲು ಮಾಡುವ ಕಾರ್ಯವೆಂದರೆ, ಅದು ನಿಮ್ಮನ್ನು ವಾಟ್ಸಾö್ಯಪ್ ಗುಂಪುಗಳಿಗೆ ಸೇರಿಸುವುದು. ನಂತರ ಈ ಗ್ರೂಪ್‌ನಲ್ಲಿ ಹಲವಾರು ಮಂದಿಯ ಹೆಸರಿನಲ್ಲಿ ಇಂತಿಷ್ಟು ಹಣ ಹೂಡಿಕೆ ಮಾಡಿದಲ್ಲಿ ನಿಮಗೆ ಬಂಪರ್ ಹಣ ವಾಪಸ್ ಬರಲಿದೆ ಎಂಬ ಸಂದೇಶಗಳನ್ನು ಹಾಕಿ ಮೋಸ ಮಾಡುತ್ತಾರೆ. ನಿಮ್ಮನ್ನು ಗ್ರೂಪ್‌ಗೆ ಸೇರಿಸುವ ಅವಕಾಶವನ್ನೇ ನೀವು ಬಂಧಿಸಿದಲ್ಲಿ ವಂಚನೆಗೊಳಗಾಗುವುದರಿAದ ದೂರವಿರಬಹುದಾಗಿದೆ.

ಅಪರಿಚಿತರು ನಿಮಗೆ ವಾಟ್ಸಾö್ಯಪ್ ಕರೆ ಮಾಡುವಾಗ ಅದು ನಿಮಗೆ ಬಾರದೆ ಇರುವಂತೆಯೂ ಮಾಡಬಹುದಾಗಿದೆ. ಪ್ರೆöÊವೆಸಿ ಸೆಟ್ಟಿಂಗ್ಸ್ನಲ್ಲಿ ‘ಕಾಲ್ಸ್’ ಎಂಬ ಆಯ್ಕೆಯನ್ನು ಒತ್ತಿದಲ್ಲಿ ಅಪರಿಚಿತರು ನಿಮಗೆ ವಾಟ್ಸಾö್ಯಪ್ ಕರೆ ಮಾಡುವಾಗ ನಿಮ್ಮ ಫೋನ್ ರಿಂಗ್ ಆಗುವುದೇ ಇಲ್ಲ. ನಂತರದಲ್ಲಿ ನೋಟಿಫಿಕೇಶನ್‌ನಲ್ಲಿ ‘ಮಿಸ್ಡ್ ಕಾಲ್’ ಎಂದು ಅಪರಿಚಿತರ ಸಂಖ್ಯೆ ವಿವರವನ್ನು ನೀಡುತ್ತದೆ.

ಪ್ರೆöÊವೆಸಿ ಸೆಟ್ಟಿಂಗ್‌ನಲ್ಲಿ ಮತ್ತೊಂದು ಆಯ್ಕೆ ಇದೆ - ‘ಅಡ್ವಾನ್ಸ್÷್ಡ’. ಇದನ್ನು ಆಯ್ಕೆ ಮಾಡಿದ ಬಳಿಕ ‘ಪ್ರೊಟೆಕ್ಟ್ ಐ.ಪಿ ಎಡ್ರಸ್ ಇನ್ ಕಾಲ್ಸ್’ ಅನ್ನು ಆಯ್ಕೆ ಮಾಡಿ. ವಾಟ್ಸಾö್ಯಪ್ ಕರೆಗಳ ಸಂದರ್ಭ ನಿಮ್ಮ ಐ.ಪಿ ಎಡ್ರಸ್‌ಅನ್ನು ಈ ಆಯ್ಕೆ ಮರೆ ಮಾಡಲಿದೆ. ನಿಮ್ಮ ಫೋನ್ ಅನ್ನು ಟ್ರಾö್ಯಕ್ ಮಾಡಲು ಕಷ್ಟವಾಗುತ್ತದೆ.

ಹೆಚ್ಚಿನ ಭದ್ರತೆಗೆ ‘೨ ಸ್ಟೆಪ್ ವೆರಿಫಿಕೇಷನ್’ ಬಳಸಿ. ವಾಟ್ಸಾö್ಯಪ್ ಮುಖ್ಯ ಸೆಟ್ಟಿಂಗ್ಸ್ನಲ್ಲಿ ಅಕೌಂಟ್ ಆಯ್ಕೆ ಮಾಡಿ ನಂತರ ‘೨ ಸ್ಟೆಪ್ ವೆರಿಫಿಕೇಷನ್’ ಅನ್ನು ಸಕ್ರಿಯಗೊಳಿಸಿ ಹಾಗೂ ೪ ಸಂಖ್ಯೆಯ ಪಿನ್ ಅನ್ನು ನೀಡಿ ನೆನಪಿಟ್ಟುಕೊಳ್ಳಿ. ನಿಮ್ಮ ನಂಬರ್ ಅನ್ನು ಇತರರು ಅವರುಗಳ ಫೋನ್‌ನಲ್ಲಿ ವಾಟ್ಸಾö್ಯಪ್ ಬಳಸಲು ಉಪಯೋಗಿಸಲು ಪ್ರಯತ್ನಿಸಿದಲ್ಲಿ ಈ ಪಿನ್ ಅತ್ಯವಶ್ಯಕ. ಈ ಪಿನ್ ನಿಮಗೆ ಮಾತ್ರ ತಿಳಿದಿರುವುದರಿಂದ ವಂಚಕರು ನಿಮ್ಮ ವಾಟ್ಸಾö್ಯಪ್ ಖಾತೆ ಬಳಸಲು ವಿಫಲರಾಗುತ್ತಾರೆ.