ಸೋಮವಾರಪೇಟೆ, ಜು. ೧೨: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಾಣಾವರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಸಮೀಪವಿರುವ ಬಸ್ ನಿಲ್ದಾಣವು ಗಾಂಜಾ, ಮದ್ಯಪಾನ ಅಡ್ಡೆಯಾಗಿ ಪರಿವರ್ತನೆಯಾಗಿದೆ.

ಪಟ್ಟಣ ಪಂಚಾಯಿತಿಯು ಈ ನಿಲ್ದಾಣದ ಬಗ್ಗೆ ದಿವ್ಯ ನಿರ್ಲಕ್ಷö್ಯ ವಹಿಸಿರುವುದರಿಂದ ಮೋಜು ಮಸ್ತಿ ಮಾಡುವವರಿಗೆ ವರದಾನವಾಗಿದ್ದು, ಬಸ್‌ಗಾಗಿ ನಿಲ್ದಾಣದ ಒಳಗೆ ಕಾಯುವ ಬದಲು ಹೊರಭಾಗದಲ್ಲಿ ನಿಂತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ರಾತ್ರಿಯಾಗುತ್ತಲೇ ಪುಂಡರು ನಿಲ್ದಾಣದೊಳಗೆ ಬೆಂಕಿ ಹಾಕುವುದು, ಮದ್ಯಇದರ ಅನತಿ ದೂರದಲ್ಲಿಯೇ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಅಂಬೇಡ್ಕರ್ ಅವರ ಜೀವನ ಪದ್ಧತಿ, ಆದರ್ಶಗಳಿಗೆ ತದ್ವಿರುದ್ಧವಾದ ಚಟುವಟಿಕೆಗಳು ಪ್ರತಿಮೆಯಿರುವ ಕಣ್ಣಳತೆ ದೂರದಲ್ಲಿ ನಿರಾತಂಕವಾಗಿ ನಡೆಯುತ್ತಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ಬಸ್ ನಿಲ್ದಾಣವನ್ನು ಸುಸ್ಥಿತಿಯಲ್ಲಿಡಲು ಪ.ಪಂ. ನಿರ್ಲಕ್ಷö್ಯ ವಹಿಸಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕಿದೆ.ದರಿAದ ಕಿಡಿಗೇಡಿ ಕೃತ್ಯಗಳು ಕಾಣದಂತಿದೆ. ಒಳಭಾಗದಲ್ಲಿ ಮದ್ಯದ ಖಾಲಿ ಪ್ಯಾಕೆಟ್‌ಗಳು, ಸಿಗರೇಟಿನ ತುಂಡು, ತ್ಯಾಜ್ಯ ಶೇಖರಣೆಗೊಂಡಿದ್ದು, ವಾತಾವರಣ ಗಬ್ಬೆದ್ದು ಹೋಗಿದೆ.