ಕುಶಾಲನಗರ, ಜು. ೧೨: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾ. ೨೦ ರಂದು ಪತ್ರಿಕಾ ದಿನಾಚರಣೆ, ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅತ್ಯುತ್ತಮ ವರದಿಗಳಿಗೆ ಸಂಘದ ಸದಸ್ಯರುಗಳಿಗೆ ನೀಡಲಾಗುವ ದತ್ತಿನಿಧಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಅತ್ಯುತ್ತಮ ವರದಿಗಳಿಗೆ ವಾರ್ಷಿಕ ದತ್ತಿನಿಧಿ ಪ್ರಶಸ್ತಿ - ತಾಲೂಕು ಸಂಘದ ವತಿಯಿಂದ ಈ ಬಾರಿ ೮ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಲಾಗುವುದು.

ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಅಯಿನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ. ಅಯಿನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮವಾದ ಶೈಕ್ಷಣಿಕ ವರದಿಗೆ, ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ, ತಾಯಿ ದಿ. ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿಗಳ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ, ಮಾಜಿ ಸಚಿವರು ಎಂ.ಪಿ. ಅಪ್ಪಚ್ಚು ರಂಜನ್ ಅವರು ಅತ್ಯುತ್ತಮ ರಾಜಕೀಯ ವರದಿಗೆ, ಕುಶಾಲನಗರದ ಶಾರದಾ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಕೃಷಿ ಬಗ್ಗೆ ವರದಿ, ಪತ್ರಕರ್ತ ಟಿ.ಆರ್. ಪ್ರಭುದೇವ್ ಅವರ ತಂದೆ ದಿ. ಎನ್. ರಾಮಕೃಷ್ಣ ಮತ್ತು ತಾಯಿ ದಿ. ಕೆ.ಎಂ. ಸರಸಮ್ಮ ಇವರ ನೆನಪಿಗಾಗಿ ನೊಂದವರ ಪರವಾಗಿ ಪ್ರಕಟಗೊಂಡ ಅತ್ಯುತ್ತಮ ಮಾನವೀಯ ವರದಿಗೆ ಮತ್ತು ಪತ್ರಕರ್ತ ಕೆ.ಬಿ. ಷÀಂಶುದ್ದಿನ್ ಅವರು ತಮ್ಮ ತಾಯಿ ದಿ. ಕೆ.ಕೆ. ಖತೀಜ ಅವರ ಸ್ಮರಣಾರ್ಥ ಅತ್ಯುತ್ತಮ ಕ್ರೀಡಾ ವರದಿ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಳಲಗದ್ದೆ ನಳಂದ ಆಯುರ್ವೇದ ನ್ಯಾಸದ ಖ್ಯಾತ ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ಸ್ಥಾಪಿಸಿದ ಅತ್ಯುತ್ತಮ ಪಾರಂಪರಿಕ ನಾಟಿ ವೈದ್ಯ ವರದಿ ಮತ್ತು ಪತ್ರಕರ್ತ ಕುಡೆಕಲ್ ಗಣೇಶ್ ಅವರ ತಂದೆ ಕುಡೆಕಲ್ ಕೃಷ್ಣಪ್ಪ ಅವರ ಜ್ಞಾಪಕಾರ್ಥ ಸಾಮಾಜಿಕ ಕಳಕಳಿಯ ಅತ್ಯುತ್ತಮ ದೃಶ್ಯ ಮಾಧ್ಯಮ ವರದಿಯ ಪ್ರಶಸ್ತಿಗೆ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಬ್ಬರು ಒಂದು ವರದಿಯನ್ನು ಮಾತ್ರ ಕಳುಹಿಸಬಹುದು. ವರದಿಯಲ್ಲಿ ಬೈಲೈನ್ ಇಲ್ಲದಿದ್ದಲ್ಲಿ ಸಂಪಾದಕರಿAದ ದೃಢೀಕರಣ ಪತ್ರ ನೀಡಬೇಕಿದೆ. ವರದಿಯ ದಿನಾಂಕದೊAದಿಗೆ ೩ ನಕಲು ಪ್ರತಿಗಳನ್ನು ಕಳುಹಿಸುವುದು. ಅರ್ಜಿಯಲ್ಲಿ ತಮ್ಮ ವಿವರ ಮತ್ತು ಒಂದು ಭಾವಚಿತ್ರ ಪ್ರಶಸ್ತಿಗೆ ಸಂಬAಧಿಸಿದAತೆ ಆಯಾಯ ವಿಭಾಗಕ್ಕೆ ಕಳುಹಿಸಿಕೊಡುತ್ತಿರುವ ಬಗ್ಗೆ ಅರ್ಜಿಯಲ್ಲಿ ಸಮರ್ಪಕ ಮಾಹಿತಿ ಒದಗಿಸಬೇಕು.

೨೦೨೩ ಜನವರಿ ಒಂದರಿAದ ೨೦೨೩ ಡಿಸೆಂಬರ್ ೩೧ ರೊಳಗೆ ಪ್ರಕಟಗೊಂಡಿರುವ ವರದಿಯನ್ನು ಮಾತ್ರ ಸ್ವೀಕರಿಸಲಾಗುವುದು.

ಅರ್ಜಿಗಳನ್ನು ಪ್ರಧಾನ ಕಾರ್ಯದರ್ಶಿಗಳು, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಂಚೆ ಪೆಟ್ಟಿಗೆ ಸಂಖ್ಯೆ ೫೬, ಕುಶಾಲನಗರ ಅಂಚೆ ಕಚೇರಿ, ಕುಶಾಲನಗರ ೫೭೧೨೩೪ ವಿಳಾಸಕ್ಕೆ ಕಳುಹಿಸುವಂತೆ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ.