ಸಿದ್ದಾಪುರ, ಜು. ೧೨: ಅಮ್ಮತ್ತಿ-ಒಂಟಿಯAಗಡಿ ಕೊಡವ ಅಸೋಸಿಯೇಷನ್ ಹಾಗೂ ಕಾಫಿ ಮಂಡಳಿ ಗೋಣಿಕೊಪ್ಪ ಸಂಯುಕ್ತ ಆಶ್ರಯದಲ್ಲಿ, ಅಮ್ಮತ್ತಿ-ಒಂಟಿಯAಗಡಿಯ ಕೊಡವ ಅಸೋಸಿಯೇಷನ್ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ ಕಾಫಿ ಬೆಳೆಯ ನಿರ್ವಹಣೆಯ ಕುರಿತು ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ವಂಜರಾಪು ಶ್ರೀರಾಮಣ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಕರ್ನಲ್ ಕಂಡ್ರತAಡ ಸುಬ್ಬಯ್ಯ ಮಾತನಾಡಿದರು. ಈ ಸಂದÀರ್ಭ ಕಿರಿಯ ಸಂಪರ್ಕ ಅಧಿಕಾರಿ ಮುಖಾರಿಬ್ ಡಿ.ಎಸ್., ಸಹಾಯಕ ವಿಸ್ತಾರಣಾಧಿಕಾರಿ ಧನ್ಯ ಜಯರಾಮ್, ಅಸೋಸಿಯೇಷನ್ ಅಧ್ಯಕ್ಷ ಮಂಡೆಪAಡ ರಾಬಿನ್ ಮಂದಪ್ಪ, ಬೆಳೆಗಾರರಾದ ಮಚ್ಚಾರಂಡ ಕಿರಣ್, ಮಚ್ಚಾರಂಡ ಅಚ್ಚಯ್ಯ, ಜಯ, ಬೇರೆರ ಕಿರಣ್ ಶಿವಪ್ಪ ಸೇರಿದಂತೆ ೫೦ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಹಾಜರಿದ್ದರು.