‘ಶಕ್ತಿ’ ವರದಿಗೆ ಸ್ಪಂದನ

ಕೂಡಿಗೆ, ಜು. ೧೨: ರೈತರ ಜಮೀನಿನ ಆರ್.ಟಿ.ಸಿ. ಸರ್ಕಾರದ ಹೆಸರಿನಲ್ಲಿ ಸಾಲ ಮರುಪಾವತಿ ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ರೈತರು ಎಂಬ ಪತ್ರಿಕಾ ವರದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಪಂದಿಸಿದ್ದಾರೆ.

ಹಾರAಗಿಯಲ್ಲಿ ಮಾತಾನಾಡಿದ ಶಾಸಕರು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಆಗದಂತೆ ಕ್ರಮ ವಹಿಸುವಂತೆ ಸಂಬAಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಗುರುತಿನ ಚೀಟಿ ಸಂದರ್ಭದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅತಿ ಶೀಘ್ರದಲ್ಲಿ ಸರಿಪಡಿಸುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ತಾಲೂಕುವಾರು ಹಂತಗಳಲ್ಲಿ ಕೈಗೊಳ್ಳಬಹುದಾದ ಎಲ್ಲಾ ಕ್ರಮಗಳನ್ನು ಕಂದಾಯ ಇಲಾಖೆ ನಿಯಮಾನುಸಾರ ಕೃಷಿ ಜಮೀನಿನ ಮೂಲ ದಾಖಲೆಗಳ ಅಧಾರದ ಮೇಲೆ ರೈತರ ನೋಂದಣಿ ಕಾರ್ಯ ನಿರ್ವಹಿಸುವಂತೆ ಈಗಾಗಲೇ ಜಿಲ್ಲಾಮಟ್ಟದಲ್ಲಿ ಸೂಚಿಸಲಾಗಿ ಅದರನ್ವಯ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.