ಐಗೂರು, ಜು. ೧೩: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಸಾಮಾಜಿಕವಾಗಿ ವಂಚಿತರಾದ ವಿದ್ಯಾರ್ಥಿಗಳು, ಅವರ ಕುಟುಂಬ ಹಾಗೂ ಸಮುದಾಯಗಳೇ ಅಭ್ಯುದಯ ಕೇಂದ್ರ ಬಿಂದು ಎಂದು ಮೈಸೂರಿನ ಅಭ್ಯುದಯ ಸಂಸ್ಥೆಯ ಕಾರ್ಯನಿರ್ವಾಹಕ ತಂಡದ ಮುಖ್ಯಸ್ಥ ಲಕ್ಷಿö್ಮÃನಾರಾಯಣ್ ಜಿ. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕಾಜೂರು ಸ.ಹಿ. ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕರ ಸಭೆಯನ್ನುದ್ದೇಶಿ ಮಾತನಾಡಿದರು. ಸುಸ್ಥಿರ ಸಮಾಜ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ಕೊಡಗಿನಲ್ಲಿ ಕಾಜೂರು ಶಾಲೆಯ ಕೇಂದ್ರ ಸ್ಥಾನದಲ್ಲಿ ಶಾಲೆಯ ಶಿಕ್ಷಕ ವೃಂದ ಮತ್ತು ದಾನಿ ಅಭಿರಾಮ್ ಅವರ ಶ್ರಮದಿಂದ ಮೊಟ್ಟಮೊದಲು ಪ್ರಾರಂಭವಾದ ಸಂಸ್ಥೆಯ ಉಚಿತ ಕಲಿಕಾ ಕೇಂದ್ರಗಳಾದ ಕಾಜೂರು, ಬಜೆಗುಂಡಿ, ಹೊಸತೋಟ ಮತ್ತು ಕುಂಬಾರಬಾಣೆಯಲ್ಲಿ ನುರಿತ ಶಿಕ್ಷಕಿಯರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ದಾನಿಗಳಾದ ಎಕ್ಸ್ ಡೈಮಂಡ್ ಸಂಸ್ಥೆಯ ಅಭಿರಾಮ್ ಅವರು ಈ ಸಂಸ್ಥೆಗೆ ಒಂದು ಕೊಂಡಿಯAತೆ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಕೊಳಗೇರಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ೩,೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆ ಉಚಿತ ಶಿಕ್ಷಣವನ್ನು ನೀಡುತ್ತಿದೆ ಎಂದರು. ಕಾರ್ಯನಿರ್ವಾಹಕ ತಂಡದ ಸದಸ್ಯರಾದ ಫಣೀಂದ್ರ ಅವರು ಮಾತನಾಡಿ, ಅಭ್ಯುದಯ ಸಂಸ್ಥೆಯು ಪಕ್ಷಾತೀತವಾಗಿದ್ದು, ವಿದ್ಯಾರ್ಥಿಗಳು ಅಭ್ಯುದಯ ಸಂಸ್ಥೆಯ ಸವಲತ್ತುಗಳನ್ನು ಪಡೆದುಕೊಂಡು ದೇಶದ ಉನ್ನತ ಹುದ್ದೆಗಳನ್ನು ಮುಂದಿನ ದಿನಗಳಲ್ಲಿ ಈ ಸಂಸ್ಥೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುವಂತೆ ಹೇಳಿದರು. ಮುಖ್ಯ ಶಿಕ್ಷಕಿ ಸರಳ ಕುಮಾರಿ ಅವರು ಮಾತನಾಡಿದರು. ಗ್ಲೋಬೆಟೆಕ್ ಕಂಪೆನಿಯ ಮಾಲೀಕ ವೆಂಕಟೇಶ್ ಮಾತನಾಡಿ, ಕೊಡಗಿನಲ್ಲಿ ಮಳೆ ವಿಪರೀತವಾಗಿದ್ದರಿಂದ ಪೋಷಕರಿಗೆ ಉಚಿತವಾಗಿ ಗಂಬೂಟುಗಳನ್ನು ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭ ನಾಲ್ಕು ಕಲಿಕಾ ಕೇಂದ್ರಗಳ ವಿದ್ಯಾರ್ಥಿಗಳ ಪೋಷಕರಿಗೆ ಉಚಿತವಾಗಿ ಗಂಬೂಟುಗಳನ್ನು ಮತ್ತು ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನಿ ಸಾಮಗ್ರಿಗಳನ್ನು ಮತ್ತು ಎಲ್ಲಾ ಶಿಕ್ಷಕರಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಶಿಕ್ಷಕ ಅಜಿತ್ ಕುಮಾರ್ ಸ್ವಾಗತಿಸಿ, ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ್, ಸದಸ್ಯರು, ಮುಖ್ಯ ಶಿಕ್ಷಕಿ ಸರಳಕುಮಾರಿ, ಅಭ್ಯುದಯ ಸಂಸ್ಥೆಯ ಲಕ್ಷಿö್ಮÃನಾರಾಯಣ್, ಅಭಿರಾಮ್, ಫಣೀಂದ್ರ, ವೆಂಕಟೇಶ್, ಶ್ರೀರಂಗನಾಥ, ಮಹೇಶ್, ಸುರೇಶ್ ಪೈ, ಶಿಕ್ಷಕ ಅಜಿತ್ ಕುಮಾರ್, ಶಿಕ್ಷಕಿಯರಾದ ಅನಸೂಯ, ಭಾರತಿ, ವಿಜಯಲಕ್ಷಿö್ಮ, ಸಾಕಿರ ಮತ್ತು ಪೋಷಕರು ಹಾಜರಿದ್ದರು.