ಮಡಿಕೇರಿ, ಜು. ೧೩: ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಕಾನನ. ಪಕ್ಷಿಗಳ ಚಿಲಿಪಿಲಿ ಸದ್ದು, ಮತ್ತೊಂದೆಡೆ ಹಾಲ್ನೊರೆಯಂತೆ ಉಕ್ಕಿ ಹರಿಯುವ ಪಯಸ್ವಿನಿ ನದಿ. ಬಂಡೆ ಕಲ್ಲುಗಳ ಮೇಲೆ ಉಕ್ಕಿ ಹರಿಯುವ ಪಯಸ್ವಿನಿ ನದಿಯ ಭೋರ್ಗರೆಯುವಿಕೆಯನ್ನು ದಾಟಿ ಮನೆ ಸೇರುವ ಹೊತ್ತಿಗೆ ಜೀವ ಬಾಯಿಗೆ ಬಂದಿರುತ್ತದೆ.

ಬAಡೆ ಕಲ್ಲುಗಳ ಮೇಲೆ ನಡೆಯುವಾಗ ಜಾರಿ ಬಿದ್ದರೆ ಉಕ್ಕಿ ಹರಿಯುವ ಪಯಸ್ವಿನಿ ನದಿಯ ರಭಸಕ್ಕೆ ಕೊಚ್ಚಿ ಹೋಗಬೇಕಾಗುತ್ತದೆ ಆದ್ದರಿಂದ ಬೃಹತ್ ಆಕಾರದ ಬಂಡೆ ಕಲ್ಲುಗಳ ಮೇಲೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಮನೆ ಸೇರಬೇಕು. ಇದು ಮಳೆಗಾಲದಲ್ಲಿ ಕೊಡಗು ಜಿಲ್ಲೆಯ ಗಡಿಭಾಗವಾದ ಸಂಪಾಜೆ ಗ್ರಾಮ ಪಂಚಾಯಿತಿ, ಕೊಯನಾಡು ಸಮೀಪದ ಬಂಡಡ್ಕ ಗ್ರಾಮದ ನಿವಾಸಿಗಳ ನಿತ್ಯರೋಧನ.

ಸ್ವಾತಂತ್ರö್ಯ ಬಂದು ಏಳು ದಶಕ ಕಳೆದರೂ ಕೂಡ ಇಂದಿಗೂ ಬಂಡಡ್ಕ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಕ್ಕು ಪತ್ರವನ್ನು ನೀಡಿರುವ ಆಡಳಿತ ವರ್ಗ, ಬಂಡಡ್ಕ ಗ್ರಾಮಸ್ಥರು ಅರಣ್ಯ ವ್ಯಾಪ್ತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ಇಡೀ ಗ್ರಾಮವನ್ನೇ ಸಂಪೂರ್ಣ ನಿರ್ಲಕ್ಷö್ಯ ಮಾಡಿದೆ. ಬಂಡಡ್ಕ ಗ್ರಾಮದಲ್ಲಿ ಐದು ಮನೆಗಳಲ್ಲಿ ಎಂಟಕ್ಕೂ ಅಧಿಕ ಮಂದಿ ಜೀವನ ನಡೆಸುತ್ತಿದ್ದಾರೆ.

ಆದರೆ ಮಳೆಗಾಲದಲ್ಲಿ ಈ ಗ್ರಾಮದ ನಿವಾಸಿಗಳು ಮೂರು ತಿಂಗಳುಗಳ ಕಾಲ ಹೊರಗಿನ ಪ್ರಪಂಚವನ್ನೇ ಮರೆತು ಬಿಡಬೇಕಾದಂತಹ ಪರಿಸ್ಥಿತಿ. ಉಕ್ಕಿ ಹರಿಯುವ ಪಯಸ್ವಿನಿ ನದಿ ದಾಟಲು ಕಷ್ಟ ಸಾಧ್ಯ.

ಕಳೆದೆರಡು ವರ್ಷದ ಹಿಂದೆ ಸಂಪಾಜೆ ಗ್ರಾಮ ಪಂಚಾಯಿತಿ ಅಡಿಕೆ ಮತ್ತು ಬಿದಿರಿನಿಂದ ನಿರ್ಮಿಸಿರುವ ಮರದ ಪಾಲವೂ ಮುರಿದು ಬಿದ್ದಿದೆ. ಇದೀಗ ಮುಂಗಾರು ಕಾಲಿಟ್ಟು ತಿಂಗಳು ಕಳೆದರೂ ಕೂಡ ಬಂಡಡ್ಕ ಗ್ರಾಮದತ್ತ ಸಂಪಾಜೆ ಗ್ರಾಮ ಪಂಚಾಯಿತಿ ತಿರುಗಿ ಕೂಡ ನೋಡಿಲ್ಲ.

ಕಳೆದ ವರ್ಷ ನಿರ್ಮಿಸಿಕೊಟ್ಟ ಪಾಲವೂ ಉಕ್ಕಿಯ ಹರಿಯುವ ಪಯಸ್ವಿನಿ ನದಿಯ ಪಾಲಾಗಿದೆ. ಪ್ರಸಕ್ತ ವರ್ಷ ಪಾಲವನ್ನು ನಿರ್ಮಿಸಲು ಗ್ರಾಮ ಪಂಚಾಯತಿ ಮುಂದಾಗಿಲ್ಲ.

ಇದೀಗ ಪಯಸ್ವಿನಿ ನದಿಯಲ್ಲಿ ನೀರಿನಮಟ್ಟ ಹೆಚ್ಚಳವಾಗಿದ್ದು, ಬಂಡಡ್ಕ ಗ್ರಾಮಸ್ಥರಿಗೆ ನದಿ ದಾಟಲು ಸಾಧ್ಯವಿಲ್ಲ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮರಕ್ಕೆ ಹಗ್ಗವನ್ನು ಕಟ್ಟಿಕೊಂಡು, ಅದನ್ನು ಕೈಯಲ್ಲಿ ಹಿಡಿದುಕೊಂಡು, ಬಂಡೆ ಕಲ್ಲುಗಳ ಮೇಲೆ ಉಕ್ಕಿ ಹರಿಯುವ ಪಯಸ್ವಿನಿ ನದಿಯನ್ನು ದಾಟಿ ಮನೆ ಸೇರಬೇಕು. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆ ಸೇರಲು ಸಾಧ್ಯವಿಲ್ಲ. ಬಂಡಡ್ಕ ಗ್ರಾಮದಲ್ಲಿ ೮೫ ವರ್ಷ ಪ್ರಾಯದಾಟಿರುವ ವೃದ್ಧೆಯೊಬ್ಬರು ಇದ್ದಾರೆ. ಇದೀಗ ಅವರಿಗೆ ಆಗ್ಗಿಂದಾಗ್ಗೆ ಆರೋಗ್ಯದಲ್ಲಿ ಸಮಸ್ಯೆ ಎದುರಾಗುತ್ತಿವೆ.

ಬಂಡಡ್ಕ ಗ್ರಾಮದ ಪುಷ್ಪಾವತಿ ಎಂಬುವವರ ತಾಯಿಗೆ ೮೫ ವರ್ಷ ಪ್ರಾಯ ದಾಟಿದ್ದು, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾದಾಗ ನಾಟಿ ಮದ್ದು ಮಾಡಿ,ಸದ್ಯಕ್ಕೆ ಆರೋಗ್ಯ ಕೊಂಚ ಚೇತರಿಕೆ ಕಂಡಿದೆ. ಪಯಸ್ವಿನಿ ನದಿ ದಾಟಲು ಸಾಧ್ಯವಾಗದೆ ಕೊಯನಾಡಿನ ನಿವಾಸಿಯೊಬ್ಬರಿಗೆ ಕರೆ ಮಾಡಿ ತಾಯಿಗೆ ಬೇಕಾದ ಔಷಧಿಯನ್ನು ತರಿಸಿಕೊಂಡಿದ್ದಾರೆ.

ಪುಷ್ಪಾವತಿಯ ಅವರ ತಾಯಿಗೆ ಮೆಡಿಕಲ್‌ನಿಂದ ಔಷಧಿಯನ್ನು ಖರೀದಿ ಮಾಡಿ ಬಂದಿದ್ದ ಕೊಯನಾಡಿನ ನಿವಾಸಿಗೆ ಪಯಸ್ವಿನಿ ನದಿ ದಾಟಲು ಸಾಧ್ಯವಾಗದೆ ಪ್ಲಾಸ್ಟಿಕ್ ನಲ್ಲಿ ಬಂಡೆ ಕಲ್ಲುಗಳು ಮೇಲೆ ನಿಂತು ಔಷಧಿಯನ್ನು ಎಸೆದು ಪುಷ್ಪಾವತಿಯವರ ಕೈ ಸೇರಿಸಿದ್ದಾರೆ.

ಮಳೆಯೂ ಕೂಡ ಹೆಚ್ಚಳವಾಗಿದ್ದು, ಕಳೆದ ಒಂದು ವಾರದಿಂದ ಬಂಡಡ್ಕ ಗ್ರಾಮಸ್ಥರು ಮನೆಯಲ್ಲಿಯೇ ಉಳಿದಿದ್ದಾರೆ. ಈ ವರ್ಷ ಮರದ ಪಾಲವನ್ನೂ ಗ್ರಾಮ ಪಂಚಾಯಿತಿ ನಿರ್ಮಿಸಿಕೊಟ್ಟಿಲ್ಲ. ಮರದ ಪಾಲ ಇದ್ದರೆ ಮಳೆಗಾಲದ ತುರ್ತು ಸಂದರ್ಭದಲ್ಲಿ ಬಂಡಡ್ಕ ನಿವಾಸಿಗಳು ಅದರ ಮುಖಾಂತರ ಪಯಸ್ವಿನಿ ನದಿ ದಾಟುತ್ತಾರೆ. ಆದರೆ, ಸಂಪಾಜೆ ಗ್ರಾಮ ಪಂಚಾಯಿತಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

ರಾತ್ರಿ ವೇಳೆ ಆರೋಗ್ಯದಲ್ಲಿ ಸಮಸ್ಯೆಯುಂಟಾದರೆ ಸಂಪಾಜೆಯಿAದ ವೈದ್ಯರನ್ನು ಕರೆಸಿ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಕೂಡ ಸಾಧ್ಯವಿಲ್ಲ. ಉಕ್ಕಿ ಹರಿಯುತ್ತಿರುವ ಪಯಸ್ವಿನಿ ನದಿಯನ್ನು ನೋಡಿದರೆ ಸದ್ಯಕ್ಕೆ ಯಾರ ಕೂಡ ಪಯಸ್ವಿನಿ ನದಿ ದಾಟಲು ಮುಂದಾಗುವುದಿಲ್ಲ. ಮರದ ಪಾಲವಿದ್ದರೆ ಹೇಗಾದರೂ ಮಾಡಿ ಪಯಸ್ವಿನಿ ನದಿ ದಾಟಬಹುದಾಗಿದೆ.

ಮಳೆಗಾಲದಲ್ಲಿ ಹೊರಗಿನ ಪ್ರಪಂಚವನ್ನೇ ಮರೆತು ಬಿಡುವ ಬಂಡಡ್ಕ ಗ್ರಾಮಸ್ಥರು ಮೂರು ತಿಂಗಳಿಗೆ ಬೇಕಾದ ದಿನಸಿ ವಸ್ತುಗಳನ್ನು ಶೇಖರಿಸಿಡುತ್ತಾರೆ. ಉಚಿತವಾಗಿ ವಿದ್ಯುತ್ ನೀಡುವ ಈ ಕಾಲದಲ್ಲಿ ಸ್ವಾತಂತ್ರö್ಯ ಲಭಿಸಿ ಇಂದಿಗೂ ಕೂಡ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಕೊಟ್ಟಿಲ್ಲ. ಪಯಸ್ವಿನಿ ನದಿಯೇ ಬಂಡಡ್ಕ ನಿವಾಸಿಗಳಿಗೆ ನೀರಿನ ಮೂಲವಾಗಿದೆ.

ಮತಕ್ಕಾಗಿ ಬಂಡಡ್ಕ ಗ್ರಾಮಕ್ಕೆ ಭೇಟಿ ಕೊಡುವ ರಾಜಕೀಯ ಪಕ್ಷಗಳು ಬಂಡಡ್ಕ ನಿವಾಸಿಗಳ ಮೂಲಭೂತ ಸೌಕರ್ಯಗಳಿಗೆ ಇದುವರೆಗೆ ಪರಿಹಾರ ಕಂಡುಕೊAಡಿಲ್ಲ. ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಸಂಬAಧಿಕರ ಮನೆ ಮತ್ತು ಹಾಸ್ಟೆಲ್‌ನಲ್ಲೇ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇನ್ನಾದರೂ ಬಂಡಡ್ಕ ನಿವಾಸಿಗಳಿಗೆ ಪಯಸ್ವಿನಿ ನದಿ ದಾಟಲು ಪಾಲವನ್ನು ನಿರ್ಮಿಸಲು ಕೊಡಲು ಸಂಪಾಜೆ ಗ್ರಾಮ ಪಂಚಾಯತಿ ಕ್ರಮಕೈಗೊಳ್ಳಬೇಕಾಗಿದೆ.

ಶಾಸಕರು, ಆಡಳಿತ ವರ್ಗ ಬಂಡಡ್ಕ ನಿವಾಸಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮಾನವೀಯ ನೆಲೆಗಟ್ಟಿನಲ್ಲಾದರೂ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ