ಕುಶಾಲನಗರ, ಜು. ೧೩: ಕುಶಾಲನಗರದ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರ ಮಾದಾಪಟ್ಟಣ ಗ್ರಾಮದ ನಾಟಿ ವೈದ್ಯೆ ಮಕ್ಕಳ ಜೀವ ಸಂಜೀವಿನಿ ಅಯಿನಮಂಡ ಲೀಲಾವತಿ ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಾಟಿ ವೈದ್ಯಕೀಯ ಕ್ಷೇತ್ರದಲ್ಲಿನ ಲೀಲಾವತಿ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಕಾಯಕ ರತ್ನ ಪ್ರಶಸ್ತಿ ಘೋಷಿಸಿದ ಹಿನ್ನೆಲೆ ಮಹಿಳಾ ವೇದಿಕೆ ಪದಾಧಿಕಾರಿಗಳು ಲೀಲಾವತಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಸಾವಿರಾರು ಶಿಶುಗಳನ್ನು ನಾಟಿ ಮದ್ದಿನಿಂದ ಗುಣಮುಖರಾಗಿಸಿ ರಾಜ್ಯ, ರಾಷ್ಟçಮಟ್ಟದಲ್ಲಿ ಗುರುತಿಸಿಕೊಂಡಿರುವ ಲೀಲಾವತಿ ಗಣಪತಿ ಅವರ ಸೇವೆಯನ್ನು ಸಂಘದ ಪದಾಧಿಕಾರಿಗಳು ಶ್ಲಾಘಿಸಿದರು.
ಈ ಸಂದರ್ಭ ಮಾತನಾಡಿದ ಮಹಿಳಾ ವೇದಿಕೆ ಅಧ್ಯಕ್ಷೆ ಜೆ. ಫಿಲೋಮಿನಾ, ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗಾಗಿ ಭೂಮಿಕಾ ಮಹಿಳಾ ಹಿತರಕ್ಷಣಾ ವೇದಿಕೆ ಕಾರ್ಯನಿರ್ವಹಿಸಲಿದೆ. ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿಯು ಕಾರಣಾಂತರಗಳಿAದ ಕೆಲವು ವರ್ಷಗಳ ಕಾಲ ಸಂಘಟನೆಯ ಕಾರ್ಯಸ್ಥಗಿತ ಮಾಡಿತ್ತು. ಇದೀಗ ಸಮಿತಿಯು ಹೊಸ ಹುಮ್ಮಸ್ಸಿನೊಂದಿಗೆ ಮತ್ತೆ ಕಾರ್ಯಾರಂಭ ಮಾಡಿದೆ ಎಂದರು.
ವೇದಿಕೆಯ ಗೌರವ ಸಲಹೆಗಾರರಾದ ವನಿತಾ ಚಂದ್ರಮೋಹನ್ ಮಾತನಾಡಿ, ಮಹಿಳೆಯರ ಪರ ಧ್ವನಿಯಾಗಿರುವ ವೇದಿಕೆಯ ಹೋರಾಟಗಳಿಗೆ ಫಲ ದೊರೆತು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಲಿ ಎಂದು ಆಶಿಸಿದರು.
ಈ ಸಂದರ್ಭ ಭೂಮಿಕಾ ಮಹಿಳಾ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷೆ ಎಂ.ಪಿ. ಜಯಲಕ್ಷ್ಮಿ, ಕಾರ್ಯದರ್ಶಿ ಪದ್ಮಾವತಿ, ಸಹ ಕಾರ್ಯದರ್ಶಿ ಬಿ. ಪಾರ್ವತಿ, ಗೌರವಾಧ್ಯಕ್ಷೆ ಪದ್ಮಾವತಿ ಪರಮೇಶ್, ಸಂಘಟನಾ ಕಾರ್ಯದರ್ಶಿ ಜಯಾ ಪ್ರಕಾಶ್, ನಿರ್ದೇಶಕರಾದ ಜಯಶ್ರೀ ವಸಂತ್, ಭಾಗ್ಯ, ಲಲಿತಾ ತಿಮ್ಮಯ್ಯ, ಸಾವಿತ್ರಿ ರಾಜನ್, ಗೌರಿ, ಉಷಾ, ಪದ್ಮಾವತಿ ಕೃಷ್ಣೇಗೌಡ, ಪದ್ಮಾವತಿ ಪರಮೇಶ್ವರ್, ಸುನಂದಾ, ಲಲಿತಾ ಮೊಣ್ಣಪ್ಪ, ಧರಣಿ ಸೋಮಯ್ಯ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಸದಸ್ಯೆ ಚೈತನ್ಯ ಇದ್ದರು.