ಮಡಿಕೇರಿ, ಜು. ೧೩: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ.೧೭ ರಂದು ನಡೆಯಲಿದೆ ಎಂದು ನೂತನ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ತಾವು ಸೇರಿದಂತೆ ಸದಸ್ಯರುಗಳಾದ ಸುದಯ್ ನಾಣಯ್ಯ, ಕಾನೆಹಿತ್ಲು ಮೊಣ್ಣಪ್ಪ, ಆರ್.ಪಿ. ಚಂದ್ರಶೇಖರ್ ಹಾಗೂ ಮೀನಾಜ್ ಪ್ರವೀಣ್ ಅಧಿಕಾರ ಸ್ವೀಕರಿಸಲಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.