ಚೆಯ್ಯಂಡಾಣೆ, ಜು. ೧೩: ಕುಶಾಲನಗರ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಮತ್ತು ಡ್ಯಾನ್ಸ್ ಇವೆಂಟ್ ಸ್ಟುಡಿಯೋ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಚೆಯ್ಯಂಡಾಣೆಯ ಚೆಯ್ಯಂಡ ಯಶಿಕ ಅಪ್ಪಚ್ಚು ಸೀನಿಯರ್ ಸೋಲೊ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಇವರು ಚೆಯ್ಯಂಡಾಣೆ ನರಿಯಂದಡ ಗ್ರಾಮದ ಚೆಯ್ಯಂಡ ಲವ ಅಪ್ಪಚ್ಚು ಮತ್ತು ಸುಮಾ ದಂಪತಿಯ ಪುತ್ರಿ, ಇವರು ವೀರಾಜಪೇಟೆಯ ಟೀಮ್ ಇಂಟೋ ಪೀಸ್ ನೃತ್ಯ ಶಾಲೆಯ ನೃತ್ಯ ಸಂಯೋಜಕ ವಿಷ್ಣು ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.