ಸೋಮವಾರಪೇಟೆ, ಜು.೧೩: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾಗಿ ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಕೆ. ಶಿವಪ್ರಕಾಶ್ ಹಾಗೂ ಜೆ.ಕೆ. ಪೊನ್ನಪ್ಪ ಅವರುಗಳನ್ನು ಸಂಘದ ಆಡಳಿತ ಮಂಡಳಿ ಪ್ರಮುಖರುಗಳು ಸನ್ಮಾನಿಸಿ ಬೀಳ್ಕೊಟ್ಟರು.
ಸಂಘದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈರ್ವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ಉಪಾಧ್ಯಕ್ಷ ಎನ್.ಎಸ್. ಪರಮೇಶ್, ನಿರ್ದೇಶಕರುಗಳಾದ ಎಸ್.ಬಿ. ಭರತ್ಕುಮಾರ್, ಜಿ.ಪಿ. ಸುನಿಲ್, ವಿ.ಎನ್. ನಾಗರಾಜ್, ಕೆ.ಜಿ. ದಿನೇಶ್, ಸಿ.ಈ. ವೆಂಕಟೇಶ್, ಜಿ.ಕೆ. ಸುರೇಶ್, ಸಿ.ಎ. ಮಮತ, ಹೆಚ್.ಎಸ್. ಪುಷ್ಪ, ಡಿ.ಪಿ. ಸುಮಿತ್ರ, ಟಿ.ಎಸ್. ವಾಣಿ, ಕೆಡಿಸಿಸಿ ಬ್ಯಾಂಕ್ನ ಮೇಲ್ವಿಚಾರಕ ಎಲ್.ಕೆ. ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಹೆಚ್. ಕಿರಣ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.