ಮಡಿಕೇರಿ, ಜು. ೧೩: ಜಗತ್ತಿನಲ್ಲಿಯೇ ರೋಟರಿ ಸಂಸ್ಥೆಯು ಅತ್ಯಂತ ಕ್ರಿಯಾಶೀಲ ಸೇವಾ ಸಂಸ್ಥೆಯಾಗಿ ಖ್ಯಾತವಾಗಿದ್ದು, ರೋಟರಿಯ ಸಾಮಾಜಿಕ ಹೊಣೆಯನ್ನು ಅತ್ಯಂತ ಯಶಸ್ಸಿಯಾಗಿ ಮುಂದುವರೆ ಸುವ ಮಹತ್ವದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲಿದೆ ಎಂದು ಮೈಸೂರಿನ ಉದ್ಯಮಿ, ರೋಟರಿ ಪ್ರಮುಖ ಯಶಸ್ವಿ ಸೋಮಶೇಖರ್ ಕರೆ ನೀಡಿದರು.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷರಾಗಿ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿಯಾಗಿ ಕಟ್ಟೆಮನೆ ಸೋನಜಿತ್ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.
ಜಾಗತಿಕವಾಗಿ ೧೧೯ ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ಪ್ರತೀ ವರ್ಷ ಕೋಟ್ಯಂತರ ಜನರಿಗೆ ಸೇವೆಯ ಮೂಲಕ ನೆರವು ನೀಡುತ್ತಲೇ ಬಂದಿದೆ. ರೋಟರಿ ಸದಸ್ಯರು ನೀಡುವ ದೇಣಿಗೆ ಜಗತ್ತಿನ ಯಾವುದೋ ಒಂದು ಭಾಗದಲ್ಲಿ ಸಂತ್ರಸ್ತರಿಗೆ ತಲುಪುತ್ತಿದೆ ಎಂದು ಹೇಳಿದ ಸೋಮಶೇಖರ್, ರೋಟರಿ ಸಂಸ್ಥೆಯಲ್ಲಿ ಪ್ರತೀ ಜುಲೈನಲ್ಲಿ ಆಡಳಿತ ಮಂಡಳಿಯ ಬದಲಾವಣೆ ಮಾದರಿಯಾಗಿದ್ದು, ಪ್ರಕೃತಿ ನಿಯಮವಾದ ಸೂರ್ಯೋದಯ ಮತ್ತು ಸೂರ್ಯಸ್ತಮವಾದಂತೆಯೇ ರೋಟರಿಯಲ್ಲಿಯೂ ಅಧಿಕಾರದ ಬದಲಾವಣೆಯಾಗುವುದು ಅಭಿವೃದ್ಧಿಯ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು.
ರೋಟರಿ ಸಂಸ್ಥೆಯು ಇಂದು ಸಾಮಾಜಿಕ ಜವಾಬ್ದಾರಿಯುಳ್ಳ, ಸಮಾಜಸೇವೆಯ ಕಳಕಳಿಯುಳ್ಳ ನಿಸ್ವಾರ್ಥ ಮನೋಭಾವದ ಸಮಾಜದ ಎಲ್ಲಾ ವರ್ಗಕ್ಕೆ ಸೇರಿರುವ ಸದಸ್ಯರನ್ನು ಹೆಚ್ಚಾಗಿ ಬಯಸುತ್ತಿದೆ ಎಂದು ಅಭಿಪ್ರಾಯಪಟ್ಟ ಸೋಮಶೇಖರ್, ಅಂರ‍್ರಾಷ್ಟಿçÃಯ ರೋಟರಿ ಅಧ್ಯಕ್ಷೆ ಮಹಿಳೆಯೇ ಅಗಿರುವುದ ರಿಂದ ಮಹಿಳಾ ಸದಸ್ಯರ ಸೇರ್ಪಡೆಗೂ ಗಮನ ನೀಡಿ ಎಂದು ಸಲಹೆ ನೀಡಿದರು.
ರೋಟರಿ ಮಿಸ್ಟಿಹಿಲ್ಸ್ನ ನೂತನ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ೬೫ ಸದಸ್ಯ ಬಲದ ಮಿಸ್ಟಿ ಹಿಲ್ಸ್ ೧೯ ವರ್ಷಗಳಲ್ಲಿ ಸೇವಾ ಸಾಧನೆಗಾಗಿ ಖ್ಯಾತವಾಗಿದ್ದು, ಮತ್ತಷ್ಟು ನೂತನ ಯೋಜನೆಗಳ ಮೂಲಕ ಈ ಸೇವಾ ಪರಂಪರೆಯನ್ನು ಮುಂದುವರೆಸಿಕೊAಡು ಹೋಗುವುದಾಗಿ ಭರವಸೆ ನೀಡಿದರು.
ರೋಟರಿ ಸಹಾಯಕ ಗವರ್ನರ್ ದೇವಣಿರ ಕಿರಣ್ ಮತ್ತು ವಲಯ ಸೇನಾನಿ ಅನಿತಾ ಪೂವಯ್ಯ ಈ ವರ್ಷದ ರೋಟರಿಯ ಸೇವಾ ಯೋಜನೆಗಳ ಮಾಹಿತಿ ನೀಡಿದರು. ಎಸ್.ಎಂ. ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ‘ರೋಟೋ ಮಿಸ್ಟ್’ ವಾರ್ತಾಸಂಚಿಕೆಯನ್ನೂ ಈ ಸಂದರ್ಭ ಅತಿಥಿಗಳು ಬಿಡುಗಡೆಗೊಳಿಸಿದರು.
ರೋಟರಿ ಸಂಸ್ಥೆಗೆ ಮೇಜರ್ ಡೋನರ್ ಆದ ಮಿಸ್ಟಿಹಿಲ್ಸ್ ನಿರ್ದೇಶಕ ಡಾ. ಚೆರಿಯಮನೆ ಪ್ರಶಾಂತ್ ಅವರನ್ನು ಗೌರವಿಸಲಾಯಿತು. ನೂತನ ಸದಸ್ಯರಾಗಿ ಮನೋಜ್ ಕುಮಾರ್ ಅವರನ್ನು ಸೇರ್ಪಡೆಗೊಳಿಸಲಾಯಿತು.
ಮಿಸ್ಟಿಹಿಲ್ಸ್ನ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ ವೇದಿಕೆಯಲ್ಲಿದ್ದರು. ರೋಟರಿ ಜಿಲ್ಲೆ ೩೧೮೧ನ ಮಾಜಿ ಗವರ್ನರ್‌ಗಳಾದ ರವೀಂದ್ರ ಭಟ್, ಸುರೇಶ್ ಚಂಗಪ್ಪ, ಡಾ. ರವಿ ಅಪ್ಪಾಜಿ, ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.
ಕಟ್ಟೆಮನೆ ಸೋನಜಿತ್ ವಂದಿಸಿ, ಕಾರ್ಯಕ್ರಮವನ್ನು ಮಿಸ್ಟಿಹಿಲ್ಸ್ ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಎಚ್.ಟಿ., ಬಿ.ಕೆ. ರವೀಂದ್ರ ರೈ, ಕಪಿಲ್ ಕುಮಾರ್, ಕೆ.ಎಂ. ಪೂಣಚ್ಚ, ಲೀನಾ ಪೂವಯ್ಯ ನಿರ್ವಹಿಸಿದರು.