ಗೋಣಿಕೊಪ್ಪಲು, ಜು.೧೩: ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಗೋಣಿ ಕೊಪ್ಪಲುವಿನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ.ಬೋಪಣ್ಣ ನೇಮಕಗೊಂಡಿದ್ದಾರೆ.
ಬೆAಗಳೂರಿನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ನ ಪ್ರಾಂತ ಬೈಠಕ್ ನಲ್ಲಿ ಈ ಆಯ್ಕೆ ಮಾಡಲಾಯಿತು. ಕೊಡಗು ಜಿಲ್ಲಾ ಪರಿಷತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸಿ.ಕೆ.ಬೋಪಣ್ಣ, ಗೋಣಿಕೊಪ್ಪ ನಗರದ ವಾಹನ ಚಾಲಕ ಸಂಘದ ಅಧ್ಯಕ್ಷರಾಗಿ, ಅಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಕಳೆದ ೨೫ ವರ್ಷಗಳ ಹಿಂದೆ, ಭಜರಂಗದಳದ ಜಿಲ್ಲಾ ಸಂಚಾಲಕರಾಗಿ ಕಾರ್ಯ ನಿರ್ವ ಹಿಸಿದ್ದರು. ನಂತರ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ‘ಶಕ್ತಿ' ಯೊಂದಿಗೆ ಪ್ರತಿಕ್ರಿಯಿಸಿದ ಬೋಪಣ್ಣ ಹಿಂದೂ ಶಕ್ತಿ ಗಟ್ಟಿಯಾಗ ಬೇಕು, ಧರ್ಮ ಉಳಿಯಬೇಕು, ಆ ನಿಟ್ಟಿನಲ್ಲಿ ತನ್ನನ್ನು ತೊಡಗಿಸಿಕೊಂಡಿ ದ್ದೇನೆ. ಕೊಡಗಿನಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿ ಸುತ್ತೇನೆ ಎಂಬ ನಂಬಿಕೆ ತÀನಗಿದೆ ಎಂದರು. - ಹೆಚ್.ಕೆ.ಜಗದೀಶ್