ಮಡಿಕೇರಿ, ಜು. ೧೩: ಇಲ್ಲಿನ ಮೈತ್ರಿ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಮುದಾಯ ವೈದ್ಯ ವಿಜ್ಞಾನ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಭಾರತೀಯ ರೆಡ್ಕ್ರಾಸ್ ವತಿಯಿಂದ ಶಿಬಿರ ನಡೆಯಿತು.
ರಾಷ್ಟಿçÃಯ ವೈದ್ಯಕೀಯ ಆಯೋಗದ ಶಿಫಾರಸ್ಸಿನಂತೆ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ರೋಗರುಜಿನಗಳ ತಡೆಗಟ್ಟುವಿಕೆ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕುಟುಂಬ ದತ್ತು ಕಾರ್ಯಕ್ರಮದಡಿ ಈ ಶಿಬಿರ ನಡೆದಿದ್ದು, ಇದರಲ್ಲಿ ಸಾಮಾನ್ಯ ವೈದ್ಯವಿಜ್ಞಾನ, ಶಸ್ತçಚಿಕಿತ್ಸೆ, ಪ್ರಸೂತಿ ಮತ್ತು ಸ್ತಿçÃರೋಗ, ಮಕ್ಕಳ ವಿಭಾಗ, ಚರ್ಮ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ಮೂಳೆ ಮತ್ತು ಕೀಲು, ಸಮುದಾಯದ ವೈದ್ಯಕೀಯ ವಿಭಾಗದ ನುರಿತ ತಜ್ಞರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. ಭಾರತೀಯ ರೆಡ್ಕ್ರಾಸ್ನ ಸಭಾಪತಿ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಮುರಳೀಧರ್, ಜಿಲ್ಲಾ ಶಸ್ತç ಚಿಕಿತ್ಸಕ ಡಾ.ನಂಜುAಡಯ್ಯ, ಸಮುದಾಯ ವೈದ್ಯವಿಜ್ಞಾನದ ಮುಖ್ಯಸ್ಥ ಡಾ. ರಾಮಚಂದ್ರಕಾಮತ್ ಭಾಗವಹಿಸಿದ್ದರು.