*ಗೋಣಿಕೊಪ್ಪ, ಜು. ೧೩: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಅISಅಇ) ಗೇಮ್ಸ್ ಮತ್ತು ಸ್ಪೋರ್ಟ್ಸ್ ಸಂಸ್ಥೆ ೧೪ ವರ್ಷದೊಳಗಿನ ವಿದ್ಯಾರ್ಥಿಗಳಿಗೆ ನಡೆಸಿದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೂರ್ಗ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ವಾಸುದೇವ್, ಚಿನ್ನದ ಪದಕ ಪಡೆದು ಅತ್ಯುತ್ತಮ ಶ್ರೇಣಿಯೊಂದಿಗೆ ರಾಷ್ಟçಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದಾನೆ.
ಬೆಂಗಳೂರಿನ ಕ್ರೆöÊಸ್ಟ್ ಶಾಲೆಯ ಆವರಣದಲ್ಲಿ ನಡೆದ ಪಂದ್ಯಾಟದಲ್ಲಿ ಸುಮಾರು ೧೪೦ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ೧೨ ವಿದ್ಯಾರ್ಥಿಗಳು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು, ಕೊಡಗು ಜಿಲ್ಲೆಯಿಂದ ವಾಸುದೇವ್ ಆಯ್ಕೆಯಾಗಿದ್ದಾನೆ. ವಾಸುದೇವ್ ಗೋಣಿಕೊಪ್ಪ ಅತ್ತೂರು ಗ್ರಾಮದ ನಿವಾಸಿ ರಜಿತ್ ಕೆ.ವೈ. ಮತ್ತು ದಿವ್ಯ ಅವರ ಪುತ್ರ.