ಸಿದ್ದಾಪುರ, ಜು. ೧೩: ಕಾಡಾನೆಗಳ ಹಿಂಡು ಕೃಷಿ ಮಾಡಿದ ಗದ್ದೆಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಭತ್ತ ಹಾಗೂ ಶುಂಠಿ ಕೃಷಿಗಳನ್ನು ಧ್ವಂಸಗೊಳಿಸಿರುವ ಘಟನೆ ಚೆನ್ನಂಗಿ ಗುಡ್ಲೂರು ಗ್ರಾಮದ ದಿಡ್ಡಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗುಡ್ಲೂರು ದಿಡ್ಡಳ್ಳಿ ನಿವಾಸಿ ಎಂ.ಎA. ಪಾರ್ವತಿ ಎಂಬವರಿಗೆ ಸೇರಿದ ಕೃಷಿ ಮಾಡಿರುವ ನಾಲ್ಕು ಎಕರೆ ಗದ್ದೆಗಳಿಗೆ ಮರಿ ಆನೆಗಳು ಸೇರಿದಂತೆ ೫ ಕಾಡಾನೆಗಳು ಲಗ್ಗೆಇಟ್ಟು ದಾಂಧಲೆ ನಡೆಸಿ ಕೃಷಿ ಮಾಡಿದÀ ಭತ್ತದ ಪೈರುಗಳನ್ನು ತಿಂದು, ಶುಂಠಿ ಕೃಷಿಗಳನ್ನು ತುಳಿದು ನಾಶಗೊಳಿಸಿವೆ ಎಂದು ಪಾರ್ವತಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಕಾಡಾನೆಗಳು ಸೋಲಾರ್ ಬೇಲಿ ದಾಟಿ ಗದ್ದೆಗಳಿಗೆ ಲಗ್ಗೆ ಇಟ್ಟಿದ್ದು, ಕೃಷಿ ಮಾಡಿರುವ ಗದ್ದೆಗಳಲ್ಲಿ ದಾಂಧಲೆ ನಡೆಸಿದ್ದು, ಅಂದಾಜು ರೂ. ೩೫೦೦೦ ನಷ್ಟಗೊಂಡಿದೆ ಎಂದು ಪಾರ್ವತಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕಾಡಾನೆಗಳ ಹಾವಳಿಯಿಂದಾಗಿ ಭಯದ ವಾತಾವರಣ ನಿರ್ಮಾಣ ವಾಗಿದ್ದು ಯಾವುದೇ ಕೃಷಿಗಳನ್ನು ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಯನ್ನೇ ಅವಲಂಬಿಸಿಕೊAಡು ಜೀವನ ಸಾಗಿಸುತ್ತಿರುವ ಈ ಭಾಗದ ಕೃಷಿಕರಿಗೆ ಕಾಡಾನೆಗಳ ಹಾವಳಿಯಿಂದಾಗಿ ನೆಮ್ಮದಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ನಷ್ಟಗೊಂಡಿರುವ ಕೃಷಿಕರಿಗೆ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. -ವಾಸು