ಹೆಚ್.ಜೆ. ರಾಕೇಶ್
ಮಡಿಕೇರಿ, ಜು. ೧೩: ಮೀಸಲು ಅರಣ್ಯ ಪ್ರದೇಶ ಘೋಷಣೆ ಕುರಿತು ಕೊಡಗು ಜಿಲ್ಲೆಯ ೬೭ ಗ್ರಾಮಗಳ ನೂರಾರು ಸರ್ವೆ ನಂಬರ್ಗಳ ಜಾಗಗಳನ್ನು ಗುರುತಿಸಲಾಗಿದೆ ಎಂದು ನಿವೃತ್ತ ಕೆ.ಎ.ಎಸ್. ಅಧಿಕಾರಿ, ಮೈಸೂರು ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿ ರೇಣುಕಾಂಬ ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಹಲವಷ್ಟು ಗ್ರಾಮಗಳ ಸರ್ವೆ ನಂಬರ್ಗಳಲ್ಲಿರುವ ಸಾವಿರಾರು ಹೆಕ್ಟೇರ್ ಭೂಮಿಯ ಸ್ಥಿತಿಗತಿಯ ಮಾಹಿತಿ ನೀಡುವಂತೆ ಜಿಲ್ಲೆಯ ವಿವಿಧ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿರುವ ರೇಣುಕಾಂಬ ಅವರು, ಕೆಲವೊಂದು ಸೂಚನೆಯನ್ನು ನೀಡಿದ್ದಾರೆ. ಇದರ ಪ್ರಕಟಣೆಗಳು ಪತ್ರಿಕೆ ಹಾಗೂ ಆಯಾ ಪಂಚಾಯಿತಿ ನೋಟಿಸ್ ಬೋರ್ಡ್ಗಳಲ್ಲಿಯೂ ಪ್ರಕಟಿಸಲಾಗುತ್ತಿದೆ. ಆದೇಶದ ಅನ್ವಯ ಸಾವಿರಾರು ಹೆಕ್ಟೇರ್ ಪ್ರದೇಶಗಳು ಮೀಸಲು ಅರಣ್ಯವಾಗಿ ಬದಲಾಗುವ ಆತಂಕ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದು, ಈ ಕುರಿತು ‘ಶಕ್ತಿ’ ವ್ಯವಸ್ಥಾಪನಾಧಿಕಾರಿ ರೇಣುಕಾಂಬ ಅವರನ್ನು ಸಂಪರ್ಕಿಸಿದ ಸಂದರ್ಭ ಮಾಹಿತಿ ಹಂಚಿಕೊAಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಹುದ್ದೆ ಸೃಷ್ಟಿಯಾಗಿದ್ದು, ಮೀಸಲು ಅರಣ್ಯ ಪ್ರದೇಶ ಘೋಷಣೆ ಕುರಿತು ಚಟುವಟಿಕೆ ನಡೆಸುತ್ತಿದ್ದೇವೆ. ಸೆಕ್ಷನ್ ೪ರ ಅಡಿ, ಮಂಜೂರಾತಿಯಾಗದ ಜಾಗವನ್ನು ಸ್ವಾಧೀನಪಡಿಸಿಕೊಂಡು ಮೀಸಲು ಅರಣ್ಯ ಮಾಡಬೇಕೆಂಬ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಸಂಬAಧ ಈಗಾಗಲೇ ೬೭ ಗ್ರಾಮಗಳ ನೂರಾರು ಸರ್ವೆ ನಂಬರ್ಗಳನ್ನು ಗುರುತು ಮಾಡಲಾಗಿದೆ. ಆ ಜಾಗದ ವಸ್ತುಸ್ಥಿತಿಯ ಬಗ್ಗೆ ದಾಖಲೆ ಸಹಿತ ಸಮಗ್ರ ವರದಿ ಸಲ್ಲಿಸಲು ಆಯಾ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಸೆಕ್ಷನ್ ೪ರಡಿ ಜಾಗ ಮಂಜೂರಾತಿಯಾಗದಿದ್ದಲ್ಲಿ ಅಂತಹ ಜಾಗಗಳನ್ನು ಸರಕಾರದ ವಶಕ್ಕೆ ಪಡೆಯಲಾಗುವುದು ಎಂದರು.
ಸರಕಾರದ ಸ್ವತ್ತನ್ನು ನಿಯಮ ಉಲ್ಲಂಘಿಸಿ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇದಕ್ಕಾಗಿ ಸರಕಾರ ಅಧಿಸೂಚನೆಗಳನ್ನು ಆಯಾ ಕಾಲಘಟ್ಟದಲ್ಲಿ ಅನುಷ್ಠಾನಗೊಳಿಸಿದೆ. ಅಧಿಸೂಚನೆಯಡಿ ಹಕ್ಕು ಪಡೆದವರು ಮಾತ್ರ ಭೂಒಡೆತನ ಪಡೆಯಲು ಅರ್ಹರಾಗುತ್ತಾರೆ. ಇಲ್ಲದಿದ್ದಲ್ಲಿ ಭೂಮಿ ಹಾಗೂ ಅದರಲ್ಲಿರುವ ಉತ್ಪನ್ನಗಳ ಹಕ್ಕು ಅಸಿಂಧುಗೊAಡು ಸರಕಾರವೇ ಮರಳಿ ಭೂಮಿಯನ್ನು ವಶಪಡಿಸಿಕೊಂಡು ಮೀಸಲು ಅರಣ್ಯವಾಗಿ ಪರಿವರ್ತನೆಗೊಳಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ಅಧಿಕಾರಿಗಳಿಂದ ಬರುವ ವರದಿಯನ್ನು ಪರಿಶೀಲಿಸಲಾಗುವುದು. ಅಲ್ಲದೆ ಈ ಸಂಬAಧ ಸಕ್ಷಮ ನ್ಯಾಯಾಲಯವಾಗಿ ಅರಣ್ಯ ವ್ಯವಸ್ಥಾಪನಾಧಿಕಾರಿ ಕಚೇರಿ ಕಾರ್ಯನಿರ್ವಹಿಸಲಿದ್ದು, ವ್ಯವಸ್ಥಾಪನಾಧಿಕಾರಿಯೇ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆಕ್ಷೇಪಣೆ, ದಾಖಲೆಗಳನ್ನು ಮೌಖಿಕ ಅಥವಾ ಲಿಖಿತವಾಗಿ ಮಂಡಿಸಲು ಗಡುವು ಕೂಡ ನೀಡಲಾಗಿದೆ. ಮುಂದಿನ ಮೂರು ತಿಂಗಳಿನಲ್ಲಿ ಪ್ರಕಟಿಸಿರುವ ಜಾಗದ ಹಕ್ಕಿನ ಕುರಿತು ದಾಖಲೆ ಸಹಿತ ಮುಂದಿಡಬೇಕಾಗಿದೆ. ಅವಧಿ ಮೀರಿ ಹಕ್ಕು ಮಂಡನೆ ಮಾಡಿದರೂ ಜಾಗ ವಾಪಾಸ್ ತೆಗೆದುಕೊಳ್ಳಲಾಗುವುದು. ಸೆಕ್ಷನ್ ೪ ರಡಿ ಹಕ್ಕು ಪಡೆಯದಿದ್ದಲ್ಲಿಯೂ ಜಾಗ ಸ್ವಾಧೀನಪಡಿಸಿ ಕೊಳ್ಳಲಾಗು ವುದು ಎಂದು ರೇಣುಕಾಂಬ ಅವರು ವಿವರಿಸಿದರು.
ಸ್ಥಳ ಪರಿಶೀಲನೆ-ಚರ್ಚೆ
ಕೊಡಗು ಜಿಲ್ಲೆಯಲ್ಲಿ ಗುರುತಿಸಿರುವ ಜಾಗಗಳ ಪರಿಶೀಲನೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಸಾರ್ವಜನಿಕ ಪ್ರಕಟಣೆಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ನಿರ್ದಿಷ್ಟ ಅವಧಿಯಲ್ಲಿ ಹಕ್ಕು ಮಂಡಿಸುವAತೆ ರೇಣುಕಾಂಬ ತಿಳಿಸಿದ್ದಾರೆ. ಗುರುತಿಸಿರುವ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಸರ್ವೆ ನಂಬರ್ಗಳಿAದ ಸಾವಿರಾರು ಹೆಕ್ಟೇರ್ ಪ್ರದೇಶ ಒಳಗೊಂಡಿದ್ದು, ಇದರಲ್ಲಿ ಎಷ್ಟು ಜಾಗ ಹಕ್ಕುಬಾಧ್ಯತೆಗೆ ಒಳಪಟ್ಟಿದೆ ಎಂದು ಸಂಪೂರ್ಣ ವರದಿ ಬಂದ ಬಳಿಕವÀಷ್ಟೆ ಸ್ಪಷ್ಟತೆ ದೊರೆಯಲಿದೆ ಎಂದರು.