ಗುಡ್ಡೆಹೊಸೂರು, ಜು. ೧೩: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೋರಮಂಡಲ್ ಇಂಟರ್‌ನ್ಯಾಷನಲ್ ಫರ್ಟಿಲೈರ‍್ಸ್ ಸಂಯುಕ್ತ ಆಶ್ರಯದಲ್ಲಿ ರೈತ ಸಂಪರ್ಕ ಸಭೆ ನಡೆಯಿತು. ಕಾಫಿ ಬೆಳೆಗಾರರು ರಾಸಾಯನಿಕ ಗೊಬ್ಬರವನ್ನು ಮಿತವಾಗಿ ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕೆಂದು ಕಾಫಿ ಮಂಡಳಿಯ ವಿಸ್ತರಣಾಧಿಕಾರಿ ರಂಜಿತ್‌ಕುಮಾರ್ ಅವರು ಕರೆ ನೀಡಿದರು.ರೈತರು ಕಾಲಕಾಲಕ್ಕೆ ಮಣ್ಣು ಪರೀಕ್ಷೆಯನ್ನು ಮಾಡಿಸಿ ಕಾಫಿ ಮತ್ತು ಇತರೆ ಬೆಳೆಗೆ ಬೇಕಾಗುವ ರಸಗೊಬ್ಬರವನ್ನು ಹಾಕುವಂತೆ ಸಲಹೆ ನೀಡಿದರು.
ಕಾಫಿಗೆ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಉತ್ತಮ ದರವು ಲಭಿಸುತ್ತಿದ್ದು ಉತ್ತಮ ಗುಣಮಟ್ಟದ ಕಾಫಿಯನ್ನು ಬೆಳೆಯಬೇಕು ಎಂದು ತಿಳಿಸುತ್ತಾ ಕಾಫಿ ತೋಟದ ನಿರ್ವಹಣೆ ಮತ್ತು ಕೀಟಗಳ ನಿಯಂತ್ರಣ,ಮಣ್ಣಿನ ಫಲವತ್ತತೆ ಬಗ್ಗೆ ವಿವರಿಸಿದರು.
ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಕೃಷ್ಣಕುಮಾರ್ ಅವರು ಕಾಫಿ ಮಂಡಳಿಯಿAದ ಕಾಫಿ ಬೆಳೆಗಾರರಿಗೆ ದೊರಕುವ ಸಹಾಯಧನದ ಬಗ್ಗೆ ವಿವರಿಸಿದರು. ಕೋರಮಂಡಲ್ ಕಂಪನಿಯ ಪ್ರಾದೇಶಿಕ ಅಧಿಕಾರಿ ಕಿರಣ್ ಕುಮಾರ್ ಮಾತನಾಡಿ, ಕಂಪೆನಿಯ ಗೊಬ್ಬರದ ಬಳಕೆಗೆ ಬೇಕಾಗುವ ಲಘುಪೋಷಕಾಂಶ ಗೊಬ್ಬರದ ಬಗ್ಗೆ ಮತ್ತು ಸಾವಯವ ಗೊಬ್ಬರದ ಬಳಕೆ ಬಗ್ಗೆ ವಿವರಿಸಿದರು. ನಂಜರಾಯಪಟ್ಟಣ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಮುರಳಿ ಮಾದಯ್ಯ ಅವರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ರೈತ ಸದಸ್ಯರು ರಾಸಾಯನಿಕ ಗೊಬ್ಬರವನ್ನು ಹೇಗೆ ಬಳಸಬೇಕು ಯಾವಾಗ ಬೆಳೆಗಳಿಗೆ ಗೊಬ್ಬರವನ್ನು ಹಾಕಬೇಕು ಎಂಬ ಮಾಹಿತಿಯನ್ನು ನೀಡಲು ಸಭೆಯನ್ನು ಕರೆಯಲಾಗಿದೆ. ರೈತ ಸದಸ್ಯರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು.
ಸಭೆಯಲ್ಲಿ ಕೋರಮಂಡಲ್ ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ಹರ್ಷಕುಮಾರ್, ಸಹಕಾರ ಸಂಘದ ಉಪಾಧ್ಯಕ್ಷೆ ಎಸ್.ಬಿ.ಅನಿತಾ ನಿರ್ದೇಶಕರುಗಳು, ಕೃಷಿ ಅಧಿಕಾರಿ ಅರ್ಪಿತ ಉಪಸ್ಥಿತರಿದ್ದರು. ನಿರ್ದೇಶಕ ಡಿ.ಎಲ್. ಮಹೇಶ್ಚಂದ್ರ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ಧನಂಜಯ ಕಾರ್ಯಕ್ರಮ ನಿರೂಪಿಸಿದರು.