ಮಡಿಕೇರಿ, ಜು. ೧೩: ಡಾ.ಬಿ.ಆರ್. ಅಂಬೇಡ್ಕರ್ ಅವರು ವಕೀಲ ವೃತ್ತಿಗೆ ಸೇರ್ಪಡೆಗೊಂಡ ದಿನದ ಅಂಗವಾಗಿ ಜಿಲ್ಲೆಯ ವಕೀಲರುಗಳಿಗೆ ಗೌರವ ಸಮರ್ಪಣೆ ಹಾಗೂ ನಗರದ ಶಕ್ತಿ ಆಶ್ರಮದ ಹಿರಿಯ ನಾಗರಿಕರಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಜಿಲ್ಲಾ ಬುದ್ಧ ಪ್ರತಿಷ್ಠಾಪನಾ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಯಿತು.

ಆಶ್ರಮದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ನಿರಂಜನ್, ವಕೀಲರುಗಳಾದ ವಿದ್ಯಾಧರ್, ನಾಗೇಶ್ ಕುಮಾರ್, ಬಿ.ಇ. ಜಯೇಂದ್ರ, ಹೆಚ್.ಎನ್. ಜಾನಕಿ, ದಿವ್ಯ ನಂಜಪ್ಪ, ತುಳಸಿ ಅವರುಗಳನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಆಶ್ರಮದಲ್ಲಿ ನೆಲೆಸಿದ್ದ ೨೯ ವಯೋವೃದ್ಧರಿಗೆ ಬಟ್ಟೆಯನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ನಿರಂಜನ್, ಕುಟುಂಬದಿAದ ದೂರವಾದ ಹಿರಿಯರಿಗೆ ಸುಸಜ್ಜಿತ ವ್ಯವಸ್ಥೆಯೊಂದಿಗೆ ನೆಮ್ಮದಿಯ ಬದುಕು ರೂಪಿಸಲು ಶಕ್ತಿ ಆಶ್ರಮ ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಂಬೇಡ್ಕರ್ ವ್ಯಕ್ತಿಯಲ್ಲ. ಓರ್ವ ಶಕ್ತಿ. ಅವರು ವಕೀಲರಾಗಿ ಮಾಡಿದ ಕೆಲಸ, ಪ್ರಜಾತಂತ್ರ ವ್ಯವಸ್ಥೆಗೆ ನೀಡಿದ ಸಂವಿಧಾನದ ಕೊಡುಗೆ ಯಾರೂ ಮರೆಯುವಂತಿಲ್ಲ. ಅಂಬೇಡ್ಕರ್ ಅವರ ಆಶಯ, ಚಿಂತನೆ ಇನ್ನೂ ಸಾಕಾರ ಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯರನ್ನು, ಪೋಷಕರನ್ನು ಗೌರವಿಸುವ ಗುಣ ಮೈಗೂಡಿಸಿ ಕೊಳ್ಳಬೇಕು. ನಾವು ಪೋಷಕರನ್ನು ದೂರವಿಟ್ಟು ಆಶ್ರಮದಲ್ಲಿರಿಸಿದರೆ ಮುಂದಿನ ದಿನಗಳಲ್ಲಿ ಆ ಪರಿಸ್ಥಿತಿ ನಮಗೂ ಬರಬಹುದು ಎಂಬ ಪರಿಜ್ಞಾನ ಇರಬೇಕು. ಆಧುನಿಕತೆ, ಜೀವನದ ಯಶಸ್ಸಿನ ವೇಗದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಅವಿಭಕ್ತ ಕುಟುಂಬ ವ್ಯವಸ್ಥೆ ಮರೆಯಾಗುತ್ತಿರುವುದು ವಿಷಾದನೀಯ ಎಂದರು. ವಕೀಲ ವಿದ್ಯಾಧರ್ ಮುಖ್ಯ ಭಾಷಣಗಾರರಾಗಿ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಪಾಲ್ಗೊಂಡು ಮಾತನಾಡಿ, ಮೌಲ್ಯ, ಸಂಸ್ಕೃತಿ, ಆಚರಣೆಯೊಂದಿಗೆ ಬೌದ್ಧ ಸಂಸ್ಕೃತಿ ವರ್ಣರಂಜಿತವಾಗಿ ಕೂಡಿದೆ. ಗೌತಮ ಬುದ್ಧ ಎಲ್ಲವನ್ನೂ ಬಿಟ್ಟು ನೆಮ್ಮದಿಯ ಬದುಕು ಕಟ್ಟಿಕೊಂಡಿದಲ್ಲದೆ ಸಮಾಜದ ಹಿತಕಾಯುವ ನಿಟ್ಟಿನಲ್ಲಿ ಧರ್ಮ ಸ್ಥಾಪಿಸಿ ಸಾಂಘಿಕ ಬದುಕು ರೂಪಿಸುವ ಮಹತ್ತರ ಹೆಜ್ಜೆ ಇಟ್ಟರು. ಯುದ್ಧದಿಂದ ಶಾಂತಿ ಸಾಧ್ಯವಿಲ್ಲ ಎಂಬ ಪ್ರತಿಪಾದನೆಯೊಂದಿಗೆ ಸಮಾಜಕ್ಕೆ ದಾರಿದೀಪವಾಗಿದ್ದ ಬುದ್ದರ ಆದರ್ಶ ಇಂದಿಗೂ ಜೀವಂತ ಎಂದು ನುಡಿದ ಅವರು, ಅಂಬೇಡ್ಕರ್ ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂವಿಧಾನವೇ ನಮ್ಮೆಲ್ಲರಿಗೂ ಶ್ರೇಷ್ಠ ಗ್ರಂಥ ಎಂದರು.

ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ, ಶಕ್ತಿ ವೃದ್ಧಾಶ್ರಮ ಸಕಲ ವ್ಯವಸ್ಥೆಯೊಂದಿಗೆ ಕೆಲಸ ಮಾಡುತ್ತಿದೆ. ತಂದೆ-ತಾಯಿಯರನ್ನು ದೂರವಿಡುವವರಿಗೆ ಕಾಲವೇ ಪಾಠ ಕಲಿಸಲಿದೆ. ಮುಂದೊAದು ದಿನ ತಿರುಗುಬಾಣವಾಗಿ ಪರಿಣಮಿಸುವುದು ನಿಶ್ಚಿತ. ಎಲ್ಲರೂ ಇದ್ದೂ ಇಲ್ಲದಂತೆ ಇರುವುದು ಅತ್ಯಂತ ಬೇಸರ ತರುವ ವಿಚಾರ. ಅಂತವರಿಗೆ ಆಶ್ರಮ ಆಸರೆಯಾಗಿರುವುದು ಅಷ್ಟೇ ನೆಮ್ಮದಿಯ ವಿಷಯ ಎಂದ ಅವರು, ಅಂಬೇಡ್ಕರ್ ಅವರ ಜೀವನವೇ ಹೋರಾಟದಲ್ಲಿ ಕೂಡಿತ್ತು. ನೋವುಂಡು ಸಮಾಜಕ್ಕೆ ಒಳಿತು ಬಯಸಿದ ಆದರ್ಶ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.

ವಕೀಲೆ ದಿವ್ಯ ನಂಜಪ್ಪ ಅವರು ಮಾತನಾಡಿ, ಪೋಷಕರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಾಗಿದೆ. ಅವರನ್ನು ನಿರ್ಲಕ್ಷö್ಯ ಮಾಡುವುದು ಅಮಾನವೀಯವಾದ ಕ್ರಮ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಜಿಲ್ಲಾ ಧಮ್ಮಾಚಾರಿ ಹೆಚ್.ಪಿ. ಶಿವಕುಮಾರ್, ವಕೀಲರು ಸಮಾಜದ ಪರಿವರ್ತನೆಯಲ್ಲಿ ಪ್ರಮುಖರು ಪಾತ್ರ ವಹಿಸಿದ್ದಾರೆ. ಸಾಮಾಜಿಕ ಚಿಂತನೆಗಳಡಿ ಪ್ರತಿಷ್ಠಾನ ಕಾರ್ಯೋನ್ಮುಖಗೊಂಡಿದ್ದು, ಕಳೆದ ೨೭ ವರ್ಷಗಳಿಂದ ಸಮಾಜಮುಖಿ ಕಾರ್ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಪಳನಿ ಪ್ರಕಾಶ್, ಹೆಚ್.ಟಿ. ಕಾವೇರಪ್ಪ, ಹೆಚ್. ವೆಂಕಟೇಶ್, ರವಿ ಮೂರ್ನಾಡು, ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್, ಪ್ರತಿಷ್ಠಾನದ ರವಿ, ರವೀಂದ್ರ, ನಾಗಪ್ಪ, ಗಣೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.