ಕೂಡಿಗೆ, ಜು. ೧೩: ಸಿಹಿ ಗೆಣಸು ಬೆಳೆಗೆ ಉತ್ತಮ ಬೆಲೆ ಬಂದಿರುವುದರಿAದ ಬೆಳೆಗಾರರ ಮೊಗದಲ್ಲಿ ಸಂತಸ ಮನೆಮಾಡಿದೆ.

ಕಳೆದ ಸಾಲಿನಲ್ಲಿ ಬೆಳೆದ ಸಿಹಿ ಗೆಣಸು ಬೆಳೆಗೆ ೧ ಕೆ.ಜಿ.ಗೆ ಕೇವಲ ರೂ. ೧೦ ಮಾತ್ರ ದೊರೆತ್ತಿತ್ತು. ಅದರಲ್ಲಿ ಹೆಚ್ಚು ಭಾಗವು ಹವಾಮಾನ ವೈಪರಿತ್ಯದಿಂದ ರೋಗ ಭಾದೆ ಹೆಚ್ಚಾಗಿ ಗೆಣಸು ಮತ್ತು ಅದರ ಬಳ್ಳಿಯನ್ನು ಕತ್ತರಿಸಿ ರೈತರು ಸಾಕಿದ ಹಸುಗಳಿಗೆ ಆಹಾರವಾಗಿ ಹಾಕುತ್ತಿದ್ದರು. ಆದರೆ ಇದೀಗ ೧ ಕೆ.ಜಿ.ಗೆ ರೂ. ೩೦ಕ್ಕೆ ಏರಿಕೆಯಾದ ಹಿನ್ನೆಲೆ ಈ ವ್ಯಾಪ್ತಿಯ ರೈತರು ಸಿಹಿ ಗೆಣಸು ಬೆಳೆಯನ್ನು ಕಠಾವು ಮಾಡಲು ಆರಂಭ ಮಾಡಿದ್ದಾರೆ.

ಸಿಹಿ ಗೆಣಸು ಹೆಚ್ಚಾಗಿ ಕೇರಳ, ಮಹಾರಾಷ್ಟç, ದೆಹಲಿಯ ಮಾರುಕಟ್ಟೆಗೆ ಮಧ್ಯವರ್ತಿಗಳ ಮೂಲಕ ಸಾಗಾಣಿಕೆ ಅಗುತ್ತಿದೆ. ಹೆಚ್ಚು ಬೇಡಿಕೆಯ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಮುಂದಿನ ಬೆಳೆಯಾಗಿ ಮಳೆಯ ನೀರು ಮತ್ತು ಕೆಲ ರೈತರು ಹಾರಂಗಿ ಅಚ್ಚುಕಟ್ಟು ಪ್ರದೇಶದ ಭೂಮಿಯಾಗಿರುವುದರಿಂದಾಗಿ ಭತ್ತದ ನಾಟಿ ಮಾಡುವ ಉದ್ದೇಶದಿಂದ ಮತ್ತು ಸಿಹಿ ಗೆಣಸು ಬೆಳೆಗೆ ಈಗಾಗಲೇ ಮೂರು ತಿಂಗಳುಗಳು ಕಳೆದಿರುವ ಹಿನ್ನೆಲೆಯಲ್ಲಿ ಗೆಣಸು ಬೆಳೆ ಕಠಾವಿಗೆ ಮುಂದಾಗಿದ್ದಾರೆ.

ಕೆ.ಜಿ.ಗೆ ೨ ರೂಪಾಯಿಂದ ಗೆಣಸು ಬೆಳೆಯುತ್ತಾ ಬಂದಿರುವ ಈ ವ್ಯಾಪ್ತಿಯ ನೂರಾರು ರೈತರು, ಸಿಹಿ ಗೆಣಸು ಬೆಳೆಗೆ ಬೆಲೆ ಏರಿಕೆಯಾದರೆ ಒಳ್ಳೆಯದು. ಇಲ್ಲದಿದ್ದರೆ ಹೈನುಗಾರಿಕೆಗೆ ಸಹಕಾರಿಯಾಗುತ್ತದೆ. ಗೆಣಸು ಮತ್ತು ಅದರ ಬಳ್ಳಿಯನ್ನು ಹಸುಗಳಿಗೆ ಆಹಾರದ ರೂಪದಲ್ಲಿ ಹಾಕುವುದರ ಮೂಲಕ ಹೆಚ್ಚುವರಿಯಾಗಿ ಹಸುಗಳು ಹಾಲನ್ನು ಕೂಡುತ್ತವೆ. ಇದರಿಂದಾಗಿ ಈ ಬೆಳೆಯು ಎರಡು ಉಪಯೋಗಕ್ಕೆ ಬರುತ್ತದೆ ಎಂದು ಬೆಳೆಗಾರರಾದ ರವಿಕುಮಾರ್, ಕೃಷ್ಣ, ದೇವಯ್ಯ, ಶಿವಣ್ಣ, ವಿಶ್ವನಾಥ್, ಶೇಖರ್, ದೊಡ್ಡಯ್ಯ ತಮ್ಮ ಅನುಭವದ ಮಾತುಗಳನ್ನು ಹಂಚಿಕೊAಡರು.

- ಕೆ.ಕೆ. ನಾಗರಾಜಶೆಟ್ಟಿ.