ಗೋಣಿಕೊಪ್ಪ, ಜು. ೧೩: ಶನೀಶ್ವರ ಭಕ್ತ ಜನ ಮಂಡ ಳಿಯ ಸಂಸ್ಥಾಪಕರು ಹಾಗು ಮಲೆತಿರಿಕೆ ಬೆಟ್ಟದ ಶ್ರೀ ಶನೀಶ್ವರ ದೇವಾಲಯದ ಪ್ರಧಾನ ಅರ್ಚಕರು ಆಗಿದ್ದ ದಿ. ವಿ.ಜಿ ಕೃಷ್ಣಸ್ವಾಮಿ ಅವರ ೨೩ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ ಅವರು, ಪರಿಸರದಲ್ಲಿ ಗಿಡನೆಡುವ ಕಾರ್ಯಕ್ರಮದಡಿಯಲ್ಲಿ ನೆಡುವ ಒಂದೊAದು ಗಿಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಾಳಜಿಯಿರಬೇಕು. ಆಗ ಮಾತ್ರವೇ ಆ ಗಿಡ ಬದುಕುಳಿದು ಮರವಾಗಲು ಸಾಧ್ಯ ಎಂದರು. ಶನೀಶ್ವರ ಭಕ್ತ ಜನ ಮಂಡಳಿ ವತಿಯಿಂದ ಜಿಲ್ಲೆಯ ವಿವಿಧ ಸರ್ಕಾರಿ ಶಾಲಾ ಆವರಣದಲ್ಲಿ ಪತ್ರಕರ್ತ ಯುವರಾಜ ಕೃಷ್ಣ ಅವರು ಅವರ ತಂದೆಯ ಜ್ಞಾಪಕಾರ್ಥ ಗಿಡ ನೆಡುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶನೀಶ್ವರ ಭಕ್ತ ಜನ ಮಂಡಳಿ ವತಿಯಿಂದ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಿಡ ನೆಡುವ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಅತಿಥಿ ಗಣ್ಯರು ಉದ್ಘಾಟಿಸಿದರು. ಮತ್ತೋರ್ವ ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರದ ಜೊತೆ ಹೆಚ್ಚು ಕಲೆತು ಆಟವಾಡಬೇಕು. ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕುಮಾರ್ ಹೆಚ್.ಕೆ ಮಾತನಾಡಿ, ಮಕ್ಕಳು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಕೊಡಗು ಜಿಲ್ಲೆಯ ಪರಿಸರ, ಇಲ್ಲಿನ ಗಾಳಿ ಎಲ್ಲವೂ ಶುದ್ಧವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕಡೆಗೆ ವಿದ್ಯಾರ್ಥಿಗಳು ಗಮನಕೊಡಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಗೋಣಿಕೊಪ್ಪದ ಉದ್ಯಮಿ ಜೋಸೆಫ್ ಅಂಥೋಣಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಂತಿ ಕೆ.ಆರ್, ವರದಿಗಾರರಾದ ಅನುಷಾ, ಆಂಜನೇಯ ದೇವಸ್ಥಾನದ ಧರ್ಮದರ್ಶಿ ಬಾಬಾಶಂಕರ್, ಹಾಜರಿದ್ದರು.

ಕಾರ್ಯಕ್ರಮದ ಮೊದಲಿಗೆ ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ಅತಿಥಿಗಳು ನೆಟ್ಟರು. ವಿದ್ಯಾರ್ಥಿಗಳಿಗಾಗಿ ಪರಿಸರ ಸಂಬAಧಿತ ಚಿತ್ರಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದ ತೀರ್ಪುಗಾರರಾಗಿ ಹಿರಿಯ ಚಿತ್ರ ಕಲಾವಿದರಾದ ಸತೀಶ್ ಜವಾಬ್ದಾರಿ ನಿರ್ವಹಿಸಿದರು. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಶನೀಶ್ವರ ಭಕ್ತ ಜನ ಮಂಡಳಿ ವತಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮವನ್ನು ಪತ್ರಕರ್ತೆ ಉಷಾ ಪ್ರೀತಂ ನಿರೂಪಿಸಿದರು. ಶನೀಶ್ವರ ಭಕ್ತ ಜನ ಮಂಡಳಿಯ ಯುವರಾಜ್ ಕೃಷ್ಣ ವಂದಿಸಿದರು.