..೪

ಕಣಿವೆ, ಜು. ೧೪: ಕಾವೇರಿ ಹಾಗೂ ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಪುನರ್ವಸು ಮಳೆ ಬಿರುಸು ಪಡೆದುಕೊಂಡ ಹಿನ್ನೆಲೆಯಲ್ಲಿ ಕಾವೇರಿ ಹಾಗೂ ಹಾರಂಗಿ ನದಿಗಳು ಮೈದುಂಬಿ ಹರಿಯುತ್ತಿವೆ.

ಹಾರಂಗಿ ಜಲಾಶಯದಿಂದ ಭಾನುವಾರ ಮಧ್ಯಾಹ್ನದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡುತ್ತಿರುವುದರಿಂದ ಕಾವೇರಿ ನದಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಹರಿಯುತ್ತಿರುವ ನಯನ ಮನೋಹರ ಚಿತ್ರಣ ಕಣಿವೆ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಕಂಡುಬರುತ್ತಿದೆ.

ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಮೇಲೆ ನಿಂತು ಮೈದುಂಬಿ ಕಾವೇರಿಯ ವೈಯ್ಯಾರವನ್ನು ಕಣ್ತುಂಬಿಸಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿರುವುದು ಭಾನುವಾರ ಕಂಡು ಬಂದಿತು. ಪುನರ್ವಸು ಮಳೆಯು ನಿರಂತರವಾಗಿ ಸುರಿಯುತ್ತಿರುವುದರಿಂದ ನದಿ ದಂಡೆಯ ನಿವಾಸಿಗಳಿಗೆ ಸಹಜವಾಗಿಯೇ ಆತಂಕ ಎದುರಾಗಿದ್ದು, ನೆರೆಯಿಂದ ರಕ್ಷಿಸಿಕೊಳ್ಳುವ ಮಾರ್ಗೋಪಾಯ ಗಳತ್ತ ಮಗ್ನ ರಾಗುತ್ತಿರುವುದು ಕಂಡು ಬರುತ್ತಿದೆ. -ಕೆ.ಎಸ್. ಮೂರ್ತಿ