ವೀರಾಜಪೇಟೆ, ಜು. ೧೪: ಸರಕಾರಿ ಪ್ರೌಢಶಾಲೆ ಕೊಂಡAಗೇರಿಯಲ್ಲಿ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಿ ವಿದ್ಯಾರ್ಥಿ ನಾಯಕರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನಮಂತ್ರಿಯಾಗಿ ಮೊಹಮ್ಮದ್ ಹರ್ಷಾದ್ ಹೆಚ್.ಯು, ಕ್ರೀಡಾ ಮಂತ್ರಿಯಾಗಿ ಅಬ್ದುಲ್ ರಹಿಮಾನ್ ಅಜಿನಾಸ್ ಹೆಚ್.ಎಂ, ಶಿಸ್ತು ಪಾಲನಾ ಮಂತ್ರಿಯಾಗಿ ಅಬೂಬಕರ್ ಸಿದ್ದಿಕ್, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ಫಾಹಿಜಾ ಕೆ.ಯು, ತೋಟಗಾರಿಕಾ ಮಂತ್ರಿಯಾಗಿ ಫೈಜಲ್ ಪಿ.ಜೆ, ಹಣಕಾಸು ಮಂತ್ರಿಯಾಗಿ ಮೊಹಮ್ಮದ್ ಅಫ್ನಾನ್ ಬಿ.ಎ, ಆರೋಗ್ಯ ಮಂತ್ರಿಯಾಗಿ ಶಮ್ನ ಎಂ.ಎಸ್, ಸಾಂಸ್ಕೃತಿಕ ಮಂತ್ರಿಯಾಗಿ ಮೊಹಮ್ಮದ್ ಇಸಾಕ್ ಟಿ.ಐ, ನೀರಾವರಿ ಮಂತ್ರಿಯಾಗಿ ಎ.ಎಂ. ತೋಹ ಅವರನ್ನು ಶಾಲೆಯ ಎಲ್ಲಾ ಮಕ್ಕಳು ಮತಗಳ ಮೂಲಕ ಆರಿಸಿದರು.
ಅದೇ ರೀತಿಯಾಗಿ ವಿರೋಧ ಪಕ್ಷದ ನಾಯಕನಾಗಿ ಮೊಹಮ್ಮದ್ ಮಿಸ್ಹಾಬ ಪಿ.ಹೆಚ್. ಅರವನ್ನು ಕೂಡ ಆಯ್ಕೆ ಮಾಡಿದ ನಂತರ ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಜೆ.ಸಿ. ಅವರು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಮುಂದಿನ ದಿನಗಳಲ್ಲಿ ನಾಯಕರು ಮಾಡಬೇಕಾದ ಕರ್ತವ್ಯಗಳ ಬಗ್ಗೆ ವಿವರಿಸಿದರು.
ಶಾಲೆಯ ಆಂಗ್ಲ ಭಾಷಾ ಶಿಕ್ಷಕ ಬಿ.ಎಂ. ಲವಿನ್ ಅವರು ಮತದಾನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿದರು. ಈ ಸಂದರ್ಭ ಶಾಲೆಯ ಕ್ಲಬ್‌ನ ಸಂಚಾಲಕ ಸುಲೈಮಾನ್ ಎಂ.ಎನ್., ಗಣಿತ ಶಿಕ್ಷಕ ರಮೇಶ್ ಎನ್.ಆರ್., ವಿಜ್ಞಾನ ಶಿಕ್ಷಕಿ ಆ್ಯನಿ ಕೆ.ಎಫ್., ದೈಹಿಕ ಶಿಕ್ಷಣ ಶಿಕ್ಷಕಿ ದಿವ್ಯಲತಾ, ಕನ್ನಡ ಭಾಷಾ ಶಿಕ್ಷಕ ತೇಜ ಹೆಚ್.ವಿ. ಅವರು ಉಪಸ್ಥಿತರಿದ್ದರು.