ಮಡಿಕೇರಿ, ಜು. ೧೪: ಗ್ರಾಮದ ಎಲ್ಲಾ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ೨೦೨೩ ರಲ್ಲಿ ನೆಲ್ಲಿಹುದಿಕೇರಿ ಗ್ರಾಮದಲ್ಲೂ ಯೋಜನೆಗೆ ಚಾಲನೆ ನೀಡಲಾಗಿತ್ತು. ನೆಲ್ಲಿಹುದಿಕೇರಿ ಗ್ರಾಮದಲ್ಲಿ ಒಟ್ಟು ರೂ. ೩.೨೮ ಕೋಟಿ ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿ, ಬೆಟ್ಟದಕಾಡು ರಸ್ತೆಯಲ್ಲಿ ಕಾವೇರಿ ನದಿ ದಡದಲ್ಲಿ ಜಾಕ್‌ವೆಲ್ ಫಿಲ್ಟರ್ ಘಟಕದ ನಿರ್ಮಾಣ ಕಾಮಗಾರಿ ಪ್ರಾರಂಭಗೊAಡಿತ್ತು. ಕಾಮಗಾರಿ ಪ್ರಾರಂಭಗೊAಡು ವರ್ಷಗಳು ಕಳೆದಿದ್ದು ಇದೀಗ ಕೋಟಿ ವೆಚ್ಚದ ಕಾಮಗಾರಿಯು ಕಾವೇರಿ ನದಿಯಲ್ಲಿ ವಿಲೀನವಾಗುವ ಸಾಧ್ಯತೆಗಳು ಕಂಡುಬರುತ್ತಿದೆ.
ಕಾವೇರಿಯ ಒಡಲಲ್ಲಿ ಅವೈಜ್ಞಾನಿಕ ಕಾಮಗಾರಿ
ಮಹತ್ವದ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿರುವ ಕಾವೇರಿ ನದಿ ದಡದಲ್ಲಿ ಫಿಲ್ಟರ್ ಘಟಕದ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ೫೦ ಸಾವಿರ ಲೀಟರ್ ಸಾಮರ್ಥ್ಯದ ಫಿಲ್ಟರ್ ಅಳವಡಿಸಲು ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ನದಿ ದಡದಲ್ಲಿ ಯಾವುದೇ ತಡೆಗೋಡೆಗಳನ್ನು ನಿರ್ಮಾಣ ಮಾಡದೇ ಏಕಾಏಕಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿಯು ಶೇ. ೭೦ ಪೂರ್ಣಗೊಂಡಿದ್ದು, ಇದೀಗ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ಕಾಮಗಾರಿಗೆ ತೊಡಕಾಗಿದೆ. ಅಲ್ಲದೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ನದಿ ದಡ ಕುಸಿಯುತ್ತಿದ್ದು ಮಳೆ ಬಿರುಸುಗೊಂಡAತೆ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಕಾಮಗಾರಿಯು ಸಂಪೂರ್ಣ ಮುಳುಗಡೆಯಾಗುವುದಲ್ಲದೆ ನದಿ ದಡ ಕುಸಿಯುವುದರೊಂದಿಗೆ ಕಾಮಗಾರಿಯು ನೆಲಸಮವಾಗುವ ಸಾಧ್ಯತೆಗಳಿವೆ.
ಪೈಪ್‌ಲೈನ್ ವಿಳಂಬ
ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಪೈಪ್‌ಲೈನ್ ಅಳವಡಿಸಲು ಸ್ಥಳೀಯ ಗ್ರಾ.ಪಂ. ಸದಸ್ಯರು ಮಳೆಯ ಕಾರಣ ಹೇಳಿ ಅಡ್ಡಿಪಡಿಸುತ್ತಿದ್ದಾರೆ, ಇಲ್ಲದಿದ್ದಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣವಾಗುತ್ತಿತ್ತು ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ನಡೆದಾಡಲು ಸ್ಟಾö್ಯಂಡ್ ಪೋಸ್ಟ್ ಬಳಕೆ
ರೂ. ೩.೨೮ ಕೋಟಿ ವೆಚ್ಚದಲ್ಲಿ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಪ್ರಾರಂಭವಾದ ಜಲಜೀವನ್ ಮಿಷನ್ ಕಾಮಗಾರಿಯ ಹಲವಾರು ಪರಿಕರಗಳು ಎಲ್ಲೆಂದರಲ್ಲಿ ಎಸೆದಿರುವುದು ಕಂಡು ಬರುತ್ತಿದೆ.
ಅಲ್ಲದೆ ಮನೆಗಳಿಗೆ ನಲ್ಲಿ ನೀರಿಗೆ ಅಳವಡಿಸುವ ಜಲಜೀವನ್ ಮಿಷನ್ ನಾಮಫಲಕ ಹೊಂದಿರುವ ಸ್ಟಾö್ಯಂಡ್ ಪೋಸ್ಟ್ಗಳು, ನೆಲ್ಲಿಹುದಿಕೇರಿ ಗ್ರಾಮದ ಹದಗೆಟ್ಟ ರಸ್ತೆಯಲ್ಲಿ ನಡೆದಾಡಲು ಬಳಸುತ್ತಿರುವುದು ಕಂಡುಬರುತ್ತಿದೆ.
- ವಾಸು, ಸಿದ್ದಾಪುರ