ಪೆನ್ಸಿಲ್ವೇನಿಯಾ, ಜು. ೧೪: ನವೆಂಬರ್ನಲ್ಲಿ ಜರುಗಲಿರುವ ಯು.ಎಸ್.ಎ (ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ) ಚುನಾವಣೆ ಸಂಬAಧ ಪೆನ್ಸಿಲ್ವೇನಿಯಾ ರಾಜ್ಯದ ಬಟ್ಲರ್ ನಗರದಲ್ಲಿ ತಾ.೧೩ ರ ಸಂಜೆ ಪ್ರಚಾರ ಜಾಥಾ ಕೈಗೊಂಡಿದ್ದ ಅಮೇರಿಕಾ ಮಾಜಿ ಅಧ್ಯಕ್ಷ ಹಾಗೂ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಹತ್ಯೆ ಮಾಡಲೆತ್ನಿಸಿದ ೨೦ ರ ಹರೆಯದ ಯುವಕ ಸೇರಿದಂತೆ ಜಾಥಾದಲ್ಲಿ ಪಾಲ್ಗೊಂಡಿದ್ದ ನಾಗರಿಕರೊಬ್ಬರು ಮೃತರಾಗಿರುವುದಾಗಿ ಅಲ್ಲಿನ ಭದ್ರತಾ ಪಡೆಯ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಂಜೆ ಸುಮಾರು ೬:೧೫ ಕ್ಕೆ ಸಾರ್ವಜನಿಕರನ್ನು ಉದ್ದೇಶಿಸಿ ಟ್ರಂಪ್, ಚುನಾವಣೆ ಸಂಬAಧ ಮಾತನಾಡುತ್ತಿದ್ದಾಗ, ಸ್ನೈಪರ್ ರೈಫಲ್ ಬಳಸಿ ಸುಮಾರು ೧೦೦ ಮೀಟರ್ಗೂ ಅಧಿಕ ದೂರದಿಂದ ಕಟ್ಡಡವೊಂದರ ಮೇಲಿನಿಂದ ಆರೋಪಿ ೨೦ ವರ್ಷದ ಯುವಕನೋರ್ವ ೩, ೪ ಬಾರಿ ಗುಂಡು ಹಾರಿಸಿದ್ದಾನೆ. ಟ್ರಂಪ್ ಬಲಭಾಗದ ಕಿವಿಗೆ ಗುಂಡು ತಗುಲಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಭದ್ರತಾ ಪಡೆಯ ಸಿಬ್ಬಂದಿ ಟ್ರಂಪ್ ಅನ್ನು ಸುರಕ್ಷಿತವಾಗಿ ವಾಹನವೊಂದರಲ್ಲಿರಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಿವಿ ಮತ್ತು ಮುಖದಲ್ಲಿ ರಕ್ತ ಸುರಿಯುತ್ತಿದ್ದರೂ ಟ್ರಂಪ್, ತಮ್ಮ ಕೈ ಮುಷ್ಠಿಯನ್ನು ಮೇಲಕ್ಕೆತ್ತಿ ‘ಫೈಟ್, ಫೈಟ್, ಫೈಟ್' ಎಂದು ಹೇಳುತ್ತಾ ಘಟನೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಭದ್ರತಾ ಪಡೆಯ ಸ್ನೆöÊಪರ್ ರೈಫಲ್ ಹೊಂದಿದ್ದ ಸಿಬ್ಬಂದಿಯೋರ್ವನು ದಾಳಿಕೋರನ ಮೇಲೆ ಗುಂಡಿನ ದಾಳಿ ಮಾಡಿ ಕ್ಷಣಾರ್ಧದಲ್ಲಿ ಅವನನ್ನು ಹತ್ಯೆ ಮಾಡಿದ್ದಾನೆ. ಜಾಥಾದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಓರ್ವನಿಗೆ ತಲೆಯ ಭಾಗಕ್ಕೆ ಗುಂಡು ತಗಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೆ ಈರ್ವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ರಂಪ್ ಮೇಲೆ ದಾಳಿ ಮಾಡುವಾಗ ೩,೪ ಬಾರಿ ಆರೋಪಿ ಗುಂಡು ಹಾರಿಸಿದ್ದೇ ಇವರಿಗಳಿಗೂ ತಗುಲಿದೆ ಎಂದು ಹೇಳಲಾಗುತ್ತಿದೆಯಾದರೆ ತನಿಖೆ ನಡೆದ ಬಳಿಕವಷ್ಟೆ ಇದು ಖಾತ್ರಿಗೊಳ್ಳಬೇಕಿದೆ. ತನಿಖೆಯನ್ನು ಎಫ್.ಬಿ.ಐ(ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಕೈಗೊಳ್ಳಲಿದೆ.
ಭದ್ರತಾ ವೈಫಲ್ಯ ಆರೋಪ
ಹತ್ಯೆಗೊಂಡಿರುವ ದಾಳಿಕೋರನನ್ನು ಪೆನ್ಸಿಲ್ವೇನಿಯಾದ ಥಾಮಸ್ ಮ್ಯಾತಿವ್ ಕ್ರೂಕ್ಸ್ ಎಂದು ಗುರುತಿಸಲಾಗಿದ್ದು, ಇವನು ಕಟ್ಟಡವೊಂದರ ಮೇಲೆ ರೈಫಲ್ ನೊಂದಿಗೆ ದಾಳಿ ನಡೆಸುವ ಮುನ್ನ ಅಡಗಿ ಕುಳಿತ್ತಿದ್ದ ಫೋಟೋ, ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿ ಪೋಸ್ಟ್ ಮಾಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ಸ್ಥಳೀಯರೋರ್ವನು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ವಿಶ್ವ ನಾಯಕರಿಂದ ಖಂಡನೆ
ನವೆAಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಪ್ರಬಲ ಅಭ್ಯರ್ಥಿ ಟ್ರಂಪ್ ಆಗಿದ್ದು, ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಹಾಲಿ ಅಮೇರಿಕಾದ ಅಧ್ಯಕ್ಷ ಜೋ-ಬಿಡನ್ ಅವರೇ ಅಗಿದ್ದಾರೆ. ಘಟನೆಯನ್ನು ಜೋ-ಬಿಡನ್, ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಸೇರಿದಂತೆ ಹಲವಾರು ದೇಶಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.