ಮಡಿಕೇರಿ, ಜು. ೧೪: ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಸಂಜಯ್ ಜಿತ್ತಿ, ಮುಖ್ಯ ವೀಕ್ಷಕರಾದ ಮಮತ ಇವರುಗಳು ೨೦೨೩ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಸಂಜಯ್ ಜಿತ್ತಿ ಹಾಗೂ ಮಮತ ಇವರುಗಳಿಗೆ ಪದಕ ಪ್ರದಾನ ಮಾಡಿದರು.