ಮಡಿಕೇರಿ, ಜು. ೧೪: ನಗರದ ಕೊಡಗು ವಿದ್ಯಾಲಯದ ಎನ್‌ಸಿಸಿ ಕೆಡೆಟ್ಸ್ಗಳು ಕಾರ್ಗಿಲ್ ವಿಜಯ ದಿವಸವನ್ನು ನಾಗರಿಕರಿಗೆ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ನೀಡುವುದರೊಂದಿಗೆ ಆಚರಿಸಿದರು.
ಕೊಡಗು ವಿದ್ಯಾಲಯದ ೧೯ನೇ ಕರ್ನಾಟಕ ಬೆಟಾಲಿಯನ್‌ನ ಎನ್‌ಸಿಸಿ ಕೆಡೆಟ್ಸ್ಗಳು ರಾಜರಾಜೇಶ್ವರಿ ಬಡಾವಣೆಯಲ್ಲಿರುವ ಮನೆಗಳಿಗೆ ಹೋಗಿ ಜನರಿಗೆ ಕಾರ್ಗಿಲ್ ವಿಜಯ ದಿನದ ಮಹತ್ವವನ್ನು ತಿಳಿ ಹೇಳುವುದರೊಂದಿಗೆ ಡೆಂಗ್ಯೂ ರೋಗದ ಲಕ್ಷಣಗಳು ಹಾಗೂ ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ಜಾಗೃತಿ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಶಾಲೆಯ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್, ಆಡಳಿತ ವ್ಯವಸ್ಥಾಪಕ ಪಿ.ರವಿ, ಮೇಜರ್ ದಾಮೋದರ್ ಚಾಲನೆ ನೀಡಿದರು. ಎನ್‌ಸಿಸಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.