ಸುಂಟಿಕೊಪ್ಪ, ಜು. ೧೪: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದ ಮಾಡವುಮನೆ ರವಿ ಹಾಗೂ ಶೋಭಾ ದಂಪತಿಯ ಪುತ್ರ ಮಾಡವುಮನೆ ವಂಶಿಕ್ (೨೧) ಎಂಬಾತನೇ ಡೆಂಗ್ಯೂಗೆ ಬಲಿಯಾದ ದುರ್ದೈವಿಯಾಗಿದ್ದಾನೆ. ತೀರಾ ಜ್ವರದಿಂದ ಬಳಲುತ್ತಿದ್ದ ವಂಶಿಕ್‌ನನ್ನು ಆತನ ಪೋಷಕರು ಮೈಸೂರಿನ ಸುಯೋಗ್ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದರು. ಪ್ಲೇಟ್‌ಲೆಟ್ ಕುಸಿತವಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆಯಿಂದ ಕಂಡು ಬಂದಿತು. ರಕ್ತದ ಅವಶ್ಯಕತೆಯಿದ್ದು, ವಂಶಿಕ್‌ಗೆ ಶರೀರದ ಗುಂಪಿಗೆ ಸೇರಿದ ರಕ್ತ ಒದಗಿಸಲು ವಿಳಂಬವಾಗಿದ್ದರಿAದ ಶನಿವಾರ ಸಂಜೆ ಆತ ಸಾವನ್ನಪ್ಪಿದ್ದಾನೆ. ಪಿಯುಸಿ ವಿದ್ಯಾಭ್ಯಾಸ ಮಾಡಿದ ವಂಶಿಕ್ ಆನಂತರ ಕುಶಾಲನಗರದ ಸ್ಟುಡಿಯೋವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ.