ಪೊನ್ನಂಪೇಟೆ, ಜು. ೧೪: ಸವಾಲುಗಳಿಲ್ಲದ ಕ್ಷೇತ್ರವೇ ಇಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಬದುಕಿನ ಉದ್ದಕ್ಕೂ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸಾಧನೆ ಎಂದು ಜಿಲ್ಲಾ ಯುವ ಸ್ಪಂದನ ಕಾರ್ಯಕ್ರಮದ ಸಮಾಲೋಚಕರಾದ ಎಂ. ಎಸ್. ಲಕ್ಷಿö್ಮ ಅಭಿಪ್ರಾಯಪಟ್ಟರು.
ಬೆಂಗಳೂರಿನ ನಿಮಾನ್ಸ್ನ ಜನಆರೋಗ್ಯ ಕೇಂದ್ರ ವತಿಯಿಂದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ತಿತಿಮತಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಯುವ ಸ್ಪಂದನ ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಜೀವನದಲ್ಲಿಯೂ ಹಲವು ಸವಾಲುಗಳು ಎದುರಾಗುತ್ತವೆ. ಇವುಗಳಿಗೆ ಅಂಜಿಕೊAಡು ಕುಳಿತರೆ ಭವಿಷ್ಯ ರೂಪಿಸುವುದು ಸಾಧ್ಯವಿಲ್ಲ. ಆಗಿಂದಾಗೆ ಮೂಡಿಬರುವ ಸವಾಲು ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯತೆಯಾಗಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಬೆಳಕು ಚೆಲ್ಲಲಾಯಿತು. ಭಾವನಾತ್ಮಕ ಸಮಸ್ಯೆಗಳು, ನೆನಪಿನ ಶಕ್ತಿ, ಏಕಾಗ್ರತೆ, ಗುರಿ ನಿರ್ಧಾರ, ಸ್ವ ಅರಿವು, ಆತ್ಮ ಗೌರವ ಮುಂತಾದ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ವಿಶೇಷ ತಿಳುವಳಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಯುವ ಸಮೂಹಕ್ಕೆ ಶಿಕ್ಷಣದ ಅಗತ್ಯತೆ, ಆರೋಗ್ಯ,ಜೀವನ ಶೈಲಿ, ಸುರಕ್ಷತೆ, ಸಂಬAಧಗಳು, ವ್ಯಕ್ತಿತ್ವ ಬೆಳವಣಿಗೆ, ಲಿಂಗ ಸಮಾನತೆ, ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಅಲ್ಲದೆ ಯುವ ಸ್ಪಂದನ ಕೇಂದ್ರದಿAದ ಮತ್ತು ಮಾಹಿತಿ ತಂತ್ರಜ್ಞಾನಾಧಾರಿತ ಪೋರ್ಟಲ್ಗಳ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಯುವಕ ಯುವತಿಯರಿಗೆ ದೊರೆಯುವ ಉಚಿತ ಸೇವೆಗಳ ಕುರಿತೂ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.
ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎ.ಪಿ. ಮಂಜುಳಾ, ಶಾಲಾ ಶಿಕ್ಷಕರಾದ ಸಿ.ಎಂ. ರಾಘವೇಂದ್ರ, ಪ್ರಸಾದ್, ಶರತ್ ಕುಮಾರ್, ನವೀನ್ ಬಾಸಿತ್, ಭವಿತ್, ಚೆನ್ನಯ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.