ನಾಪೋಕ್ಲು, ಜು. ೧೪: ಇಲ್ಲಿಗೆ ಸಮೀಪದ ನೆಲಜಿ ಗ್ರಾಮದ ಶ್ರೀ ಭಗವತಿ ದೇವಾಲಯದ ಭಂಡಾರ ಡಬ್ಬಿಯನ್ನು ಒಡೆದು ಕಳ್ಳರು ಹಣ ದೋಚಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರ ರಾತ್ರಿ ಕಳ್ಳರು ಹಿಂಭಾಗದಿAದ ದೇವಾಲಯ ಪ್ರವೇಶಿಸಿದ್ದು, ಭಾನುವಾರ ಬೆಳಿಗ್ಗೆ ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಕ್ರೆöÊಂ ಪಿಎಸ್‌ಐ ಶ್ರೀಧರ್, ಸಿಬ್ಬಂದಿಗಳಾದ ರವಿ, ಶರೀಫ್ ತೆರಳಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.