ಮಡಿಕೇರಿ, ಜು. ೧೪: ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವ ತಾ. ೧೬ರಂದು ನಡೆಯಲಿದೆ ಎಂದು ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿವರ್ಷದಂತೆ ಈ ಬಾರಿಯೂ ಕಕ್ಕಡ ಮಾಸಕ್ಕೆ ಒಂದು ದಿನ ಮುಂಚೆ ನಡೆಯುವ ಮಾರಮ್ಮ ದೇವರ ವಾರ್ಷಿಕ ಹಬ್ಬ ಮಾರಿಗುಡಿ ಇದೇ ತಾ. ೧೬ ರಂದು ಬೆಳಿಗ್ಗೆ ೯ ಗಂಟೆಯಿAದ ಸಂಜೆ ೩ ಗಂಟೆಯವರೆಗೆ ನಡೆಯಲಿದೆ. ಒಂದು ವಾರಗಳ ನಂತರ ಕಕ್ಕಡ ಮಾಸದಲ್ಲಿ ನಡೆಯುವ ಮತ್ತೊಂದು ಮಾರಿಗುಡಿ ಹಬ್ಬ ತಾ.೨೨ ರಂದು ನಡೆಯಲಿದೆ. ಹರಕೆ ಕಾಣಿಕೆ ಸಲ್ಲಿಸುವವರು ಈ ಎರಡು ದಿನಗಳಲ್ಲಿ ಜೋಡುಬೀಟಿಯಿಂದ ಮೂಕಳೇರ ಹಾಗೂ ಮಚ್ಚಿಯಂಡ ಐನ್‌ಮನೆಗೆ ಹೋಗುವ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಪುರಾತನ ಕಾಲದ ಇತಿಹಾಸವಿದ್ದು ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ಪೂಜೆ ಪುನಸ್ಕಾರ ಹಾಗೂ ಹಬ್ಬ ನಡೆಯುತ್ತದೆ.
ಮಚ್ಚಿಯಂಡ ಕುಟುಂಬದ ಮುಂದಾಳತ್ವದಲ್ಲಿ ಇಲ್ಲಿ ಹಬ್ಬ ನಡೆಯಲಿದ್ದು, ಈ ಕುಟುಂಬದವರೇ ಇಲ್ಲಿ ಪೂಜಾರಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿಗೆ ಬ್ರಾಹ್ಮಣರ ಪೂಜೆ ನಿಷೇಧವಾಗಿದ್ದು ಕೊಡವ ಜನಾಂಗದವರೇ ಇಲ್ಲಿ ಪೂಜಾರಿಗಳಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಧ್ಯಕ್ಷರು-೯೮೮೦೯೬೭೫೭೩ ಅಥವಾ ಮೂಕಳೇರ ರಮೇಶ್, ಗೌರವ ಕಾರ್ಯದರ್ಶಿ-೯೪೮೩೮ ೧೫೪೩೦ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.